ಮಂಗಳವಾರ, ಸೆಪ್ಟೆಂಬರ್ 17, 2019
21 °C

ಅಜರ್ ಪುತ್ರ ಅಯಾಜುದ್ದೀನ್ ಸಾವು

Published:
Updated:

ಹೈದರಾಬಾದ್ (ಪಿಟಿಐ):  ಬೈಕ್ ಅಪಘಾತದಲ್ಲಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಉದಯೋನ್ಮುಖ ಕ್ರಿಕೆಟ್ ಆಟಗಾರ ಮಹಮ್ಮದ್ ಅಯಾಜುದ್ದೀನ್ ಶುಕ್ರವಾರ ಕೊನೆ ಯುಸಿ ರೆಳೆದರು. ಇವರು ಖ್ಯಾತ ಮಾಜಿ ಕ್ರಿಕೆಟಿಗ ಅಜರುದ್ದೀನ್ ಅವರ ಪುತ್ರ.ಸೆಪ್ಟೆಂಬರ್ 11ರಂದು ಬೆಳಿಗ್ಗೆ ಹೈದರಾಬಾದ್‌ನ ಹೊರವಲಯದ ಪುಪ್ಪಲಗುಡಾ ಬಳಿಯ ವರ್ತುಲ ರಸ್ತೆಯಲ್ಲಿ ಅಯಾಜುದ್ದೀನ್ ತಮ್ಮ ಸ್ಪೋರ್ಟ್ಸ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಿದ್ದು ಗಾಯಗೊಂಡಿದ್ದರು. ಅವರನ್ನು ಕೂಡಲೇ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರ ಪ್ರಯತ್ನಗಳು ಫಲಿಸದೆ ಶುಕ್ರವಾರ 11.51ಕ್ಕೆ ಕೊನೆಯು ಸಿರೆಳೆದರು.`ತೀವ್ರ ನಿಗಾ ಘಟಕದಲ್ಲಿ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದ ಅಯಾಜುದ್ದೀನ್ ಅವರ ಮೆದುಳು ಗುರುವಾರ ನಿಷ್ಕ್ರಿಯ ಸ್ಥಿತಿ ತಲುಪಿತ್ತು. ಹೀಗಾಗಿ ಅವರು ಸಾವನ್ನಪ್ಪಿದರು~ ಎಂದು ಅಪೊಲೊ ಆಸ್ಪತ್ರೆಯ ವೈದ್ಯರ ಹೇಳಿಕೆ ತಿಳಿಸಿದೆ. ಅಯಾಜುದ್ದೀನ್ ಕೊನೆಯ ಕ್ಷಣಗಳಲ್ಲಿ ಅವರ ತಂದೆ ಮಹಮ್ಮದ್ ಅಜರುದ್ದೀನ್ ಹಾಗೂ ಅವರ ಹತ್ತಿರದ ಬಂಧುಗಳು ಹಾಜರಿದ್ದರು.ಅಪಘಾತ ಸಂಭವಿಸಿದಾಗ ಅಯಾಜುದ್ದೀನ್ ಬೈಕ್ ಅನ್ನು ಓಡಿಸುತ್ತಿದ್ದರು. ಅವರ ಹಿಂದೆ ಕುಳಿತಿದ್ದ ಅಜರುದ್ದೀನ್ ಅವರ ತಂಗಿಯ ಮಗ ಅಜ್ಮಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.ಆಲ್‌ರೌಂಡರ್:19ರ ಹರೆಯದ ಅಯಾಜುದ್ದೀನ್ ಅವರು ಅಜರುದ್ದೀನ್ ಅವರ ಮೊದಲ ಪತ್ನಿ ನೌರೀನರ ಎರಡನೇ ಪುತ್ರ. ವಿವಿ ಮಟ್ಟದ ಅತ್ಯುತ್ತಮ ಆಟಗಾರರಾಗಿದ್ದ ಅವರು ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಂಡವನ್ನು ಪ್ರತಿನಿಧಿಸುತ್ತಿದ್ದರು.ಆಸ್ಪತ್ರೆಗೆ ಸಿ.ಎಂ ಭೇಟಿ: ಅಯಾಜುದ್ದೀನ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಕಿರಣ ಕುಮಾರ್ ರೆಡ್ಡಿ ಅವರು  ಆಸ್ಪತ್ರೆಗೆ ತೆರಳಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

Post Comments (+)