ಗುರುವಾರ , ಫೆಬ್ರವರಿ 25, 2021
29 °C
ಸ್ಪಾಟ್‌ ಫಿಕ್ಸಿಂಗ್‌: ಹಿಕೇನ್ ಷಾ ಅಮಾನತು

ಅಜಿತ್ ಚಾಂಡಿಲಾಗೆ ಆಜೀವ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜಿತ್ ಚಾಂಡಿಲಾಗೆ ಆಜೀವ ನಿಷೇಧ

ಮುಂಬೈ (ಪಿಟಿಐ): ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದಿದ್ದ ರಾಜಸ್ತಾನ ರಾಯಲ್ಸ್ ತಂಡದ ಮಾಜಿ ಆಟಗಾರ ಅಜಿತ್‌ ಚಾಂಡಿಲಾಗೆ ಬಿಸಿಸಿಐ ಆಜೀವ ನಿಷೇಧ ಹೇರಿದೆ. ಫಿಕ್ಸಿಂಗ್‌ ಮಾಡಲು ಆಟಗಾರರನ್ನು ಪ್ರಚೋದಿಸಿದ ಕಾರಣಕ್ಕಾಗಿ ಮುಂಬೈ ತಂಡದ ಹಿಕೇನ್‌ ಷಾಗೆ ಐದು ವರ್ಷ ಅಮಾನತು ಶಿಕ್ಷೆ ನೀಡಲಾಗಿದೆ.ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಅಂಪೈರ್‌ ಅಸದ್ ರೌಫ್‌ ಪ್ರಕರಣ ಕುರಿತು ಬಿಸಿಸಿಐ ಫೆ. 12ರಂದು ಅಂತಿಮ ತೀರ್ಪು ಪ್ರಕಟಿಸಲಿದೆ. ಆರೋಪ ಕೇಳಿ ಬಂದ ಬಳಿಕವೂ ರೌಫ್‌ ಈ ಕುರಿತು ಬಿಸಿಸಿಐ ಶಿಸ್ತು ಸಮಿತಿಗೆ ಯಾವುದೇ ಮಾಹಿತಿ ನೀಡಿಲ್ಲ.ಆದ್ದರಿಂದ  ಸಮಿತಿಯು ಫೆ. 9ರ ಒಳಗೆ ಉತ್ತರ ನೀಡಬೇಕೆಂದು ರೌಫ್‌ಗೆ ಗಡುವು ನೀಡಿದೆ. ಬಿಸಿಸಿಐ ಅಧ್ಯಕ್ಷ ಶಶಾಂಕ್‌ ಮನೋಹರ್ ಅವರು ಶಿಸ್ತು ಸಮಿತಿಯ ಮುಖ್ಯಸ್ಥರಾಗಿದ್ದಾರೆ.ಅಜಿತ್‌ ಚಾಂಡಿಲಾಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)  ಆಜೀವ ನಿಷೇಧ ಹೇರಿದೆ. ಇನ್ನೊಬ್ಬ ಕ್ರಿಕೆಟಿಗ ಹಿಕೇನ್‌ ಷಾ ಐದು ವರ್ಷ ಯಾವುದೇ ಮಾದರಿಯ ಕ್ರಿಕೆಟ್‌ ಆಡದಂತೆ ಸಮಿತಿ ಅಮಾನತು ಮಾಡಿದೆ.

‘ಮುಂಬೈ ರಣಜಿ ತಂಡದ ಆಟಗಾರ 31 ವರ್ಷದ ಹಿಕೇನ್‌  ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಕೆಲ ಆಟಗಾರರಿಗೆ ಆಮೀಷ ಒಡ್ಡಿದ್ದು ತನಿಖೆಯಿಂದ ಸಾಬೀತಾಗಿದೆ. ಇದು ಭ್ರಷ್ಟಾಚಾರ ನಿಗ್ರಹ ದಳದ ನಿಯಮಗಳಿಗೆ ವಿರುದ್ಧ ವಾದ್ದರಿಂದ ಹಿಕೇನ್‌ಗೆ ಐದು ವರ್ಷ ಅಮಾನತು ಶಿಕ್ಷೆ ವಿಧಿಸಲಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಳಂಕಿತ ಆಟಗಾರರಿಗೆ ಶಿಕ್ಷೆ ನೀಡುವ ಸಲುವಾಗಿ ಬಿಸಿಸಿಐ ಅಧ್ಯಕ್ಷ ಶಶಾಂಕ್‌ ಮನೋಹರ್‌ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಶಿಸ್ತು  ಸಮಿತಿಯನ್ನು ರಚಿಸಲಾಗಿತ್ತು. ಜ್ಯೋತಿರಾಧಿತ್ಯ ಸಿಂಧಿ ಯಾ  ಹಾಗೂ ನಿರಂಜನ್ ಷಾ ಸಮಿತಿ ಯಲ್ಲಿದ್ದರು. ಈ ಸಮಿತಿಯು ಸೋಮ ವಾರ ಸಭೆ ನಡೆಸಿ ತೀರ್ಪನ್ನು ಪ್ರಕಟಿಸಿತು.‘ಕ್ರಿಕೆಟ್‌ಗೆ ಸಂಬಂಧಿಸಿದ ಯಾವ ಚಟುವಟಿಕೆಗಳಲ್ಲಿಯೂ ಚಾಂಡಿಲಾ ಪಾಲ್ಗೊಳ್ಳುವಂತಿಲ್ಲ. ದೇಶದ ಕೋಟ್ಯಂತರ ಜನ ಪ್ರೀತಿಸುವ ಕ್ರಿಕೆಟ್‌ ಅನ್ನು ಕಳಂಕ ಮುಕ್ತವಾಗಿರಿಸುವುದು ನಮ್ಮ ಮೊದಲ ಗುರಿ’ ಎಂದೂ ಠಾಕೂರ್ ನುಡಿದರು.ಚಾಂಡಿಲಾ ಮತ್ತು ಹಿಕೇನ್‌ ಅವರನ್ನು   ಶಿಸ್ತು ಸಮಿತಿ ವಿಚಾರಣೆ ಮಾಡಿ ಜನವರಿ ನಾಲ್ಕರ ಒಳಗೆ ಲಿಖಿತ ವಿವರಣೆ ನೀಡಬೇಕು ಎಂದು ಸೂಚಿ ಸಿತ್ತು.    ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿ ಯಾಗಿದ್ದ ರಾಯಲ್ಸ್ ತಂಡದ ಇನ್ನಿಬ್ಬ ಆಟಗಾರರಾದ ಎಸ್‌. ಶ್ರೀಶಾಂತ್‌ ಮತ್ತು ಅಂಕಿತ್ ಚೌಹಾಣ್‌ ಅವರನ್ನೂ ಬಿಸಿಸಿಐ ಅಮಾನತು ಮಾಡಿತ್ತು.31 ವರ್ಷದ ಹಿಕೇನ್‌ 2007ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 37 ಪಂದ್ಯಗಳಿಂದ ಒಟ್ಟು 2160 ರನ್ ಗಳಿಸಿದ್ದಾರೆ. ಕಾಲಾವಕಾಶ:  ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪ ಎದು ರಿಸುತ್ತಿರುವ  ಪಾಕಿಸ್ತಾನದ ಅಂಪೈರ್ ಅಸದ್ ರೌಫ್‌ ಅವರಿಗೆ ವಿವರಣೆ ನೀಡಲು ಸಮಿತಿಯು ಮತ್ತಷ್ಟು ಕಾಲಾ ವಕಾಶ ನೀಡಿದೆ. ರೌಫ್‌ ಫೆಬ್ರುವರಿ 9ರ ಒಳಗೆ  ವಿವರಣೆ ನೀಡಬೇಕಿದೆ. ಈ ಕುರಿತು ಫೆ. 12ರಂದು ಅಂತಿಮ ತೀರ್ಪು ಪ್ರಕಟಿಸಲಾಗುವುದು ಎಂದು  ತಿಳಿಸಿದೆ.ಪಂದ್ಯಗಳನ್ನು ಫಿಕ್ಸ್‌ ಮಾಡಲು ರೌಫ್‌ ನೆರವಾಗಿದ್ದಾರೆ ಹಾಗೂ ಪಾರದರ್ಶಕ ತೀರ್ಪುಗಳನ್ನು ಕೊಟ್ಟಿಲ್ಲ ಎನ್ನುವ ಆರೋಪ ಅವರ ಮೇಲಿದೆ.‘ತಮ್ಮ ಮೇಲಿರುವ ಆರೋಪಗಳ ಬಗ್ಗೆ ವಿವರಣೆ ನೀಡುವಂತೆ ರೌಫ್‌ ಅವರಿಗೆ ತಿಳಿಸಿದ್ದೆವು. ಆದರೆ ಅವರು ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಆದ್ದರಿಂದ ಅವರಿಗೆ ಕೊನೆಯ ಅವಕಾಶ ಕೊಡುತ್ತೇವೆ. ಫೆ. 9ರ ಒಳಗೆ ಮಾಹಿತಿ ನೀಡಬೇಕು’ ಎಂದು ಬಿಸಿಸಿಐ ಹೇಳಿದೆ.ಮುಖ್ಯಾಂಶಗಳು

* ಅಸದ್‌ ರೌಫ್‌ಗೆ ಫೆ. 9ರ ವರೆಗೆ ಕಾಲಾವಕಾಶ ನೀಡಿದ ಬಿಸಿಸಿಐ

* ರಾಜಸ್ತಾನ ರಾಯಲ್ಸ್ ತಂಡದಲ್ಲಿದ್ದ ಚಾಂಡಿಲಾ

* ರೌಫ್‌ ಪ್ರಕರಣ ಮತ್ತೆ ತನಿಖೆಗೆ ಬಿಸಿಸಿಐ ನಕಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.