ಅಜಿತ್ ಹೇಳಿಕೆ: ಅಧಿವೇಶನ ಮುಂದೂಡಿಕೆ

7

ಅಜಿತ್ ಹೇಳಿಕೆ: ಅಧಿವೇಶನ ಮುಂದೂಡಿಕೆ

Published:
Updated:

ಮುಂಬೈ (ಪಿಟಿಐ): ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಆಕ್ಷೇಪಾರ್ಹ ಹೇಳಿಕೆ ಮಹಾರಾಷ್ಟ್ರ ವಿಧಾನಮಂಡಲದ ಉಭಯಸದನಗಳಲ್ಲಿ  ಎರಡನೇ ದಿನವೂ ಪ್ರತಿಧ್ವನಿಸಿತು.ಅಜಿತ್ ವಿರುದ್ಧ ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಪಕ್ಷಗಳು ಖಂಡನಾ ನಿರ್ಣಯ ಮಂಡಿಸಲು  ಮುಂದಾದಾಗ ಸ್ಪೀಕರ್ ನಿರಾಕರಿಸಿದರು. ಇದರಿಂದ ಭಾರೀ ಗದ್ದಲ ಏರ್ಪಟ್ಟ ಹಿನ್ನೆಲೆಯಲ್ಲಿ ಅಧಿವೇಶನ ಮುಂದೂಡಲಾಯಿತು. ಅಜಿತ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಪ್ರತಿಪಕ್ಷಗಳು ಘೋಷಣೆ ಕೂಗುತ್ತಾ ಸಭಾಧ್ಯಕ್ಷರ ಪೀಠದತ್ತ ಮುನ್ನುಗ್ಗಿದರು.ಆದರೆ ಅಜಿತ್ ಈಗಾಗಲೇ ಕ್ಷಮೆಯಾಚಿಸಿರುವುದರಿಂದ ಪ್ರಕರಣ ಅಲ್ಲಿಗೆ ಅಂತ್ಯಗೊಂಡಿದೆ ಎಂದು ಸ್ಪೀಕರ್ ದಿಲಿಪ್ ವಾಲ್ಸೆ ಖಂಡನಾ ನಿರ್ಣಯ ಮಂಡನೆಗೆ ನಿರಾಕರಿಸಿದರು.ರೈತನ ಪ್ರತಿಭಟನೆ: ಅಜಿತ್ ಅವರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚವಾಣ್ ಅವರ ಅಧಿಕೃತ ನಿವಾಸಕ್ಕೆ ನುಗ್ಗಲು ಯತ್ನಿಸಿದ್ದ ರೈತನನ್ನು ಪೊಲೀಸರು ತಡೆದರು.ಚವಾಣ್ ಮನೆಯೊಳಗೆ ನುಗ್ಗಲು ಯತ್ನಿಸಿದ್ದ ತಮ್ಮನ್ನು ಪೊಲೀಸರು ಹೊರದಬ್ಬಿದರು ಎಂದು ರೈತ ಪ್ರಭಾಕರ ಅಲಿಯಾಸ್ ಭೈಯ್ಯಾ ದೇಶ್‌ಮುಖ್ ಆರೋಪಿಸಿದ್ದಾರೆ. ಆದರೆ ಮುಖ್ಯಮಂತ್ರಿ ಅವರು ವಸತಿಯಲ್ಲಿಲ್ಲದ ಕಾರಣ ಒಳಪ್ರವೇಶ ನಿರಾಕರಿಸಲಾಯಿತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry