ಅಜೆಕಾರು: ವಿಶ್ವಕರ್ಮ ಸಭಾಭವನದ ಶಿಲಾನ್ಯಾಸ

7

ಅಜೆಕಾರು: ವಿಶ್ವಕರ್ಮ ಸಭಾಭವನದ ಶಿಲಾನ್ಯಾಸ

Published:
Updated:

ಹೆಬ್ರಿ: ವಿಶ್ವಕರ್ಮರು ಎಂದರೆ ಶೃಮಜೀವಿಗಳು ಧಾರ್ಮಿಕ ಸಂಸ್ಕೃತಿಗೆ ಮೇಲ್ಪಂಕ್ತಿ ಹಾಕಿದವರು ವಿಶ್ವಕರ್ಮ ಸಮುದಾಯದವರು ಎಂದು ಕಾರ್ಕಳ ಶಾಸಕ ಸುನೀಲ್ ಮಾರ್ ಹೇಳಿದರು.ಅಜೆಕಾರು ವಿಶ್ವಕರ್ಮ ಸಮಾಜ ಸೇವಾ ಸಂಘದ ನೂತನ ಸಭಾಭವನಕ್ಕೆ ಶನಿವಾರ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಸಂಘದ ನೂತನ ಸಭಾಭವನಕ್ಕೆ ಶಾಸಕರ ಪ್ರದೇಶಾಭಿವೃದ್ದಿ ನಿಧಿಯಿಂದ ₨ 5 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದ ಶಾಸಕರು ಪುಲ್ಕೇರಿಯಿಂದ ಆಗುಂಬೆಯ ತನಕ 15 ದಿನದೊಳಗೆ ₨15 ಕೋಟಿ ವೆಚ್ಚದಲ್ಲಿ ರಸ್ತೆಯ ಮರು ಡಾಂಬರೀಕರಣ ನಡೆಯಲಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಧರ್ಮದರ್ಶಿ ಅಲೆವೂರು ಯೋಗೀಶ್ ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮುದಾಯದ ಗ್ರಾಮೀಣ ಪ್ರದೇಶದ ಜನತೆ ಸಮಾಜದ ಮುಖ್ಯವಾಹಿನಿಗೆ  ಬಂದು ಸ್ಥಳೀಯ ಸಂಘದ ಜೊತೆಗೆ ಸಕ್ರೀಯರಾಗಿ ಬಡವರಿಗೆ ಸಹಾಯ ಮಾಡಬೇಕು, ಅಜೆಕಾರು ಸಂಘದ ಸಮುದಾಯ ಭವನಕ್ಕೆ ವೈಯಕ್ತಿಕ ನೆರವು ನೀಡುವುದಾಗಿ ಪ್ರಕಟಿಸಿದರು.ಚಂದ್ರಕಾಂತ ಪುರೋಹಿತ್ ನೇತೃತ್ವದಲ್ಲಿ ಸಂಘದ ಅಧ್ಯಕ್ಷ ಎಂ.ಎಸ್.ಕೇಶವ ಆಚಾರ್ಯ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಕಳ ಕಾಳಿಕಾಂಬ ದೇವಸ್ಥಾನದ ಆಡಳಿತ ಮೋಕ್ತೆಸರ ಸುಧಾಕರ ಆಚಾರ್ಯ,ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಕಳ ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಬೆಳುವಾಯಿ ಭಾಸ್ಕರ ಆಚಾರ್ಯ,ಅಜೆಕಾರಿನ ಮುಖಂಡರಾದ ಡಾ.ಸಂತೋಷ ಕುಮಾರ್ ಶೆಟ್ಟಿ,ನಂದ ಕುಮಾರ್ ಹೆಗ್ಡೆ,ಮಣಿಪಾಲ ಬಿ.ಎ.ಆಚಾರ್ಯ,ಸಂಘದ ಅಧ್ಯಕ್ಷರಾದ ಎಂ.ಎಸ್.ಕೇಶವ ಆಚಾರ್ಯ ,ಉಪಾಧ್ಯಕ್ಷ ಸಂತೋಷ ಆಚಾರ್ಯ,ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ,ಪ್ರಕಾಶ ಆಚಾರ್ಯ,ಕೋಶಾಧಿಕಾರಿ ರಾಘವ ಆಚಾರ್ಯ, ಗೌರವ ಸಲಹೆಗಾರ ಅಪ್ಪು ಆಚಾರ್ಯ,ಬಾಲಕೃಷ್ಣ ಆಚಾರ್ಯ,ದಿನೇಶ ಆಚಾರ್ಯ,ನಿತ್ಯಾನಂದ ಆಚಾರ್ಯ,ಅಜೆಕಾರು ವಿಶ್ವಕರ್ಮ ಸಮಾಜ ಸೇವಾ ಸಂಘದ ಮಹಿಳಾ ಘಟಕದ ಕಲಾವತಿ ಶಂಕರ ಆಚಾರ್ಯ,ಯುವ ಘಟಕದ ಅಧ್ಯಕ್ಷ ಆದರ್ಶ ಆಚಾರ್ಯ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry