ಅಜ್ಜಂಪುರ: ಕೃಷಿ ಚಟುವಟಿಕೆ ಚುರುಕು

5

ಅಜ್ಜಂಪುರ: ಕೃಷಿ ಚಟುವಟಿಕೆ ಚುರುಕು

Published:
Updated:

ಅಜ್ಜಂಪುರ: ಇಲ್ಲಿನ ಪರಿಸರದಲ್ಲಿ ಉತ್ತಮ ಹಿಂಗಾರು ಮಳೆ ಆಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.ಮುಂಗಾರಿನಲ್ಲಿ ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಮಳೆರಾಯ ಹಿಂಗಾರಿನಲ್ಲಿ ರೈತರಿಗೆ ಸ್ಪಂದನೆ ನೀಡುತ್ತಿದ್ದಾನೆ ಎಂದು ರೈತರು ಸಂತಸಗೊಂಡಿದ್ದಾರೆ.ರಾಗಿ, ಮೆಕ್ಕೆಜೋಳನ್ನು ಬಿತ್ತನೆ ಆಗಿದ್ದು, ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳಿಗೆ ಉತ್ತಮ ವಾತಾವರಣ ಲಭಿಸಿದಂತಾಗಿದೆ.ಅಜ್ಜಂಪುರಶಿವನಿ ಹೋಬಳಿಯಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಹಿಂಗಾರಿನ ಬೆಳೆಯಾಗಿ ಕಡ್ಲೆ ಬಿತ್ತನೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಕೃಷಿಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry