ಮಂಗಳವಾರ, ಮೇ 11, 2021
25 °C

ಅಜ್ಜಂಪುರ: ಮಳೆಗೆ ಪ್ರಾರ್ಥಿಸಿ ಕುಂಭಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜ್ಜಂಪುರ: ಪಟ್ಟಣದ ಗ್ರಾಮಸ್ಥರು ಮಳೆಗೆ ಪ್ರಾರ್ಥಿಸಿ ಈಶ್ವರನಿಗೆ ಸೋಮವಾರ ಕುಂಭಾಭಿಷೇಕ ನಡೆಸಿದರು.

ಪಟ್ಟಣದ ಗೌಡನ ಬಾವಿಯಲ್ಲಿ ಸೋಮವಾರ ಬೆಳಗ್ಗೆ ಗಂಗಾಪೂಜೆ ನಡೆಸಿದ ನಂತರ 101 ಕುಂಭ ಹೊತ್ತ ಮಹಿಳೆ, ಮಕ್ಕಳು, ಪುರುಷರು ಮೆರವಣಿಗೆಯಲ್ಲಿ ಸಾಗಿ, ಈಶ್ವರನಿಗೆ ಗಂಗೆ ಅರ್ಪಿಸಿ, ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಿ, ಮಳೆ ನೀಡುವಂತೆ ಪ್ರಾರ್ಥಿಸಿದರು.ಇದೇ ಸಂದರ್ಭದಲ್ಲಿ ವೀರಗಾಸೆ, ಡೊಳ್ಳು ಕುಣಿತ, ಮಂಗಳವಾದ್ಯದೊಂದಿಗೆ ಸೊಲ್ಲಾಪುರದ ಸಿದ್ದರಾಮೇಶ್ವರಸ್ವಾಮಿ, ಬೀರಲಿಂಗೇಶ್ವರಸ್ವಾಮಿ, ಮಡಿವಾಳ ಮಾಚಿದೇವ, ಗ್ರಾಮದೇವತೆ ಕಿರಾಳಮ್ಮ, ಕೊಲ್ಲಾರಮ್ಮ, ಚೌಡೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಹಾಗೂ ನಗಾರಿ ಹೊತ್ತ ಅಲಂಕೃತ ಬಸವಣ್ಣನ ಮೆರವಣೆಗೆ ನಡೆಯಿತು.ಮದ್ಯಾಹ್ನ ಗುರುಸಿದ್ದರಾಮೇಶ್ವರ ಸ್ವಾಮಿಗೆ ಶಿವಪೂಜೆ, ಮಹಾಮಂಗಳಾರತಿ ನಡೆಸಿದ ನಂತರ ಮಠದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಗ್ರಾಮಸ್ಥರು ಧನ ದಾನ್ಯ ಸಮರ್ಪಿಸಿ, ಮಳೆಗೆ ಪ್ರಾರ್ಥಿಸಿದರು. ಗ್ರಾಮದೇವತೆ ಕಿರಾಳಮ್ಮ ದೇವಸ್ಥಾನದ ಸೇವಾ ಸಮಿತಿಯವರು ಹಾಗೂ ಗ್ರಾಮದ ಮುಖಂಡರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.