ಭಾನುವಾರ, ಜೂನ್ 20, 2021
29 °C

ಅಜ್ಜಿಯಿಂದ ಹಸುಳೆ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ:  ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ಸ್ವತಃ ಅಜ್ಜಿಯೇ ಮಾರಾಟ ಮಾಡಿದ ಪ್ರಕ­ರಣ ಇಲ್ಲಿಯ ಸರ್ಕಾರಿ ಮೆಗ್ಗಾನ್‌ ಜಿಲ್ಲಾ ಬೋಧನಾ ಆಸ್ಪತ್ರೆಯಲ್ಲಿ ಸೋಮ­ವಾರ ಬೆಳಕಿಗೆ ಬಂದಿದೆ.ಅಪರಿಚಿತರಿಗೆ ಕೇವಲ ₨ 6ಸಾವಿರಕ್ಕೆ ಮಗುವನ್ನು ಭಾನುವಾರ ಮಾರಾಟ ಮಾಡಿದ ಅಜ್ಜಿ ಸೋಮ್ಲಿ­ಬಾಯಿ (70)ಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ­ದ್ದಾರೆ.ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸವಳಂಗ ಸಮೀಪದ ಕೊಡತಾಳ ತಾಂಡ ಗ್ರಾಮದ ನಾಗಿ­ಬಾಯಿ (27) ಎಂಬುವವರಿಗೆ ಒಂದು ತಿಂಗಳ ಹಿಂದೆ ಹೆಣ್ಣುಮಗು ಹುಟ್ಟಿತ್ತು. ಈಚೆಗೆ ನಾಗಿಬಾಯಿ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಮೆಗ್ಗಾನ್‌ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗಿತ್ತು.ಮಗಳ ಮೇಲ್ವಿಚಾರಣೆಗೆ ಬಂದ ಅಜ್ಜಿ ಈ ಮಗುವನ್ನು ಭಾನುವಾರ ಅಪರಿಚಿತರೊಬ್ಬರಿಗೆ ಮಾರಾಟ ಮಾಡಿದ ಬಗ್ಗೆ ಆಸ್ಪತ್ರೆಯ ಇತರೆ ರೋಗಿ­ಗಳು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತದನಂತರ ಆಸ್ಪತ್ರೆ ಮಂಡಳಿ ದೊಡ್ಡಪೇಟೆ ಠಾಣೆಯಲ್ಲಿ ಅಜ್ಜಿ ವಿರುದ್ಧ ದೂರು ದಾಖಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.