ಅಜ್ಞಾತ ಸ್ಥಳಕ್ಕೆ ತೆರಳಿದ್ದ ಬಿಎಸ್‌ವೈ?

7

ಅಜ್ಞಾತ ಸ್ಥಳಕ್ಕೆ ತೆರಳಿದ್ದ ಬಿಎಸ್‌ವೈ?

Published:
Updated:

ಬೆಂಗಳೂರು: ನ್ಯಾಯಾಂಗ ಬಂಧನದ ಆದೇಶ ಪ್ರತಿಯೊಂದಿಗೆ ಲೋಕಾ ಯುಕ್ತ ಪೊಲೀಸರು ನಿವಾಸಕ್ಕೆ ಬರುವ ಮುನ್ನವೇ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅಲ್ಲಿಂದ ಅಜ್ಞಾತ ಸ್ಥಳಕ್ಕೆ ತೆರಳಲು ಕಾರಣ ಏನು?ಮೂಲಗಳ ಪ್ರಕಾರ, ಬೆಳಿಗ್ಗೆಯೇ ನ್ಯಾಯಾಲಯದಲ್ಲೇ ಬಂಧನಕ್ಕೆ ಒಳಗಾಗಿದ್ದ ಮಾಲೂರು ಶಾಸಕ ಕೃಷ್ಣಯ್ಯ ಶೆಟ್ಟಿ ಅವರ ಆಪ್ತರೊಬ್ಬರು ಯಡಿಯೂರಪ್ಪ ಅವರಿಗೆ ಮಾಡಿದ ದೂರವಾಣಿ ಕರೆ. ದೂರವಾಣಿ ಕರೆ ಮಾಡಿದ ಶೆಟ್ಟಿ ಅವರ ಆಪ್ತರೊಬ್ಬರು ನ್ಯಾಯಾಲಯದಲ್ಲಿ ನಡೆದಿರುವ ವಿದ್ಯಮಾನಗಳ ಕುರಿತು ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ.ವಿಷಯ ಅರಿತ ಯಡಿಯೂರಪ್ಪ ರೇಸ್‌ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದಿಂದ ಬೇರೆಡೆ ತೆರಳಿ ದರು. ಹಾಗಾಗಿ, ಅವರ ನಿವಾಸಕ್ಕೆ ಧಾವಿಸಿದ ಲೋಕಾಯುಕ್ತ ತಂಡಕ್ಕೆ ಅವರನ್ನು ಬಂಧಿಸಲು ಸಾಧ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry