`ಅಜ್ಞಾನ ನಿವಾರಣೆ ವಿಜ್ಞಾನದಿಂದ ಸಾಧ್ಯ'

7

`ಅಜ್ಞಾನ ನಿವಾರಣೆ ವಿಜ್ಞಾನದಿಂದ ಸಾಧ್ಯ'

Published:
Updated:

ಕೂಡ್ಲಿಗಿ: `ಮೂಢನಂಬಿಕೆಯ ಅಜ್ಞಾನ ಹೋಗಲಾಡಿಸಲು ವಿಜ್ಞಾನ ಆವಿಷ್ಕಾರ ಗಳಿಂದ ಸಾಧ್ಯ ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಗುರುರಾಜ್ ತಿಳಿಸಿದರು.  ಅವರು ಮಂಗಳವಾರ ತಾಲ್ಲೂಕಿನ ತಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸರ್ವಶಿಕ್ಷಣ ಅಭಿಯಾನ, ಅಗಸ್ತ್ಯ ಫೌಂಡೇಷನ್ ಮತ್ತು ಸರ್ಕಾರಿ ಪ್ರೌಢಶಾಲೆ  ಆಶ್ರಯದಲ್ಲಿ ಏರ್ಪಡಿಸ ಲಾಗಿದ್ದ ವಿಜ್ಞಾನ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.`ಜನತೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಇನ್ನೂ ಜೀವಂತವಾಗಿರುವ ಮೌಢ್ಯತೆಗೆ ವ್ಶೆಜ್ಞಾನಿಕ ಕಾರಣ ಹುಡುಕುವ ಗೋಜಿಗೇ ಹೋಗದಿ ರುವುದು ಪ್ರಗತಿಗೆ ಮಾರಕವಾಗಿದೆ. ವಿದ್ಯಾರ್ಥಿಗಳು ಶಾಲೆಯಲ್ಲಿ  ವಿಜ್ಞಾನದ ವಿಸ್ಮಯಗಳನ್ನು ಸ್ಥೂಲವಾಗಿ ಅರಿತರೆ ಇಡೀ ಕುಟುಂಬವನ್ನು ಬದಲಾವಣೆ ಯತ್ತ ಕೊಂಡೊಯ್ಯಲು ಸಾಧ್ಯವಾ ಗುತ್ತದೆ ಎಂದು ಅವರು ಹೇಳಿದರು.ಕಲಿಕಾ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ಶಿಕ್ಷಣ ದೊರೆತರೆ ಗುಣಮಟ್ಟದ ಶಿಕ್ಷಣ ಹೊಂದಲು ಸಾಧ್ಯವಾಗುತ್ತದೆ. ಆ ದಿಸೆಯಲ್ಲಿ ತಾಲ್ಲೂಕಿನ ಪ್ರತಿ ಶಾಲೆಗಳಲ್ಲಿ ಇಂಥ ವಿಜ್ಞಾನ ಮೇಳ ಆಯೋಜಿಸುವುದು ಮಕ್ಕಳ ಬೌದ್ಧಿಕ ಮಟ್ಟದ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ ಎಂದರು.ಹೂಡೇಂ ಸಿಆರ್‌ಪಿ ಪಿ.ತಿಪ್ಪೇಸ್ವಾಮಿ, ವಿಜ್ಞಾನದ ಹೊಸ ಆವಿಷ್ಕಾರಗಳು ಮುಂದುವರೆಯುತ್ತಿದ್ದು, ಅದರಿಂದ ದೇಶಕ್ಕೆ ಪ್ರಗತಿ ಸಾಧ್ಯವಾಗಿದೆ. ಪ್ರಾಥಮಿಕ ಹಂತದಿಂದಲೇ ವಿಜ್ಞಾನದ ಅಭಿರುಚಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿಜ್ಞಾನ ಕಲಿಕೆ ಕಠಿಣ, ಆದರೆ ಪ್ರಾಯೋಗಿಕವಾಗಿ ಕಲಿತರೆ ಸರಳವಾಗುವುದು. ವ್ಶೆಜ್ಞಾನಿಕ ಚಿಂತನೆ ಪ್ರತಿಯೊಬ್ಬರೂ ಹೊಂದಿದಾಗ ಮೂಢನಂಬಿಕೆ ಹೋಗಲಾಡಿಸಬಹುದು ಎಂದು ಅವರು ತಿಳಿಸಿದರು.ತಾಲ್ಲೂಕು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಬಿ.ಎಸ್.ಕರಿಬಸಪ್ಪ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಬಡ್ತಿ ಮುಖ್ಯ ಶಿಕ್ಷಕ ಡಿ.ಪಾಲಯ್ಯ, ಅಗಸ್ತ್ಯ ಫೌಂಡೇಷನ್‌ನ ಮಹಬಾಷ, ಸಂಗಮೇಶ್, ಶಿಕ್ಷಕರಾದ ಕೆ.ಶಿವಣ್ಣ, ಹೂಡೇಂ ಗಂಗಾಧರ, ಬಿ.ಮಚ್ಚೇಂದ್ರಪ್ಪ, ಜಿ.ಗೋಪಾಲ್, ರಾಜಗೋಪಾಲ್, ಜೆ.ಬಿ.ರಮೇಶ್, ತೇಜಶ್ವಿನಿ, ಇರ್ಫಾನ್, ಗಾಯಿತ್ರಿಬಾಯಿ, ಮಂಜುನಾಥ, ಜಿ.ಷಡಕ್ಷರಿ, ಕೆ.ವಿಶ್ವನಾಥ, ಕೆ.ಕಾಮಯ್ಯ, ಕೆ.ಸಿದ್ದೇಶ್, ಉಮೇಶ್, ನಾಗನಗೌಡ, ಕುಮತಿ ಸಂತೋಷ್  ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಗಣ್ಯರಿಗೆ ವಿಜ್ಞಾನ ಮಾದರಿಗಳ ಬಗ್ಗೆ ವಿವರಿಸಿದರು. ಅಲ್ಲದೇ ರಾಕೆಟ್ ಉಡಾವಣೆಯ ಮಾದರಿಯನ್ನು ಸಭೆಯಲ್ಲಿ ಪ್ರದರ್ಶಿಸಿ  ಎಲ್ಲರ ಮೆಚ್ಚುಗೆ ಗಳಿಸಿದರು. ಹೂಡೇಂ ಸಿಆರ್‌ಸಿ ವ್ಯಾಪ್ತಿಯ  ಎಲ್ಲ ಶಾಲಾ ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry