ಗುರುವಾರ , ಏಪ್ರಿಲ್ 22, 2021
26 °C

ಅಜ್ಮಲ್ ಬೌಲಿಂಗ್ ಶೈಲಿ: ಲಂಕಾ ಅನುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ಪಾಕಿಸ್ತಾನದ ಆಫ್ ಸ್ಪಿನ್ ಬೌಲರ್ ಸಯೀದ್ ಅಜ್ಮಲ್ ಬೌಲಿಂಗ್ ಶೈಲಿಯು ಅನುಮಾನಾಸ್ಪದ ಎಂದು ಶ್ರೀಲಂಕಾ ದೂರಿದೆ.ಗಾಲ್‌ನಲ್ಲಿ ನಡೆದ ಪ್ರಥಮ ಟೆಸ್ಟ್ ಸಂದರ್ಭದಲ್ಲಿಯೇ ಲಂಕಾ ಮಾಜಿ ಕ್ರಿಕೆಟಿಗರು ಅಜ್ಮಲ್ ಚೆಂಡನ್ನು ಎಸೆಯುವ ರೀತಿಯನ್ನು ಅನುಮಾನದಿಂದ ನೋಡಿದ್ದರು. `ಪಾಕ್ ಬೌಲರ್ ಎಲ್ಲರ ಎದುರೇ ತೀರ ಅಪಾಯಕಾರಿ ಶೈಲಿಯಲ್ಲಿ ಚೆಂಡನ್ನು ಬೀಸಿ ಬಿಡುತ್ತಿದ್ದಾರೆ. ಅದನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ~ ಎಂದು ಲಂಕಾದ ಮಾಜಿ ಕ್ರಿಕೆಟಿಗರನ್ನು ಉಲ್ಲೇಖಿಸಿ ಇಲ್ಲಿನ ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ.`ಬೌಲಿಂಗ್ ಮಾಡುವ ಸಂದರ್ಭದಲ್ಲಿ ಅರ್ಧ ತೋಳಿನ ಶರ್ಟ್ ತೊಟ್ಟುಕೊಳ್ಳುವುದಿಲ್ಲ ಅಜ್ಮಲ್. ಅದೇ ಬ್ಯಾಟಿಂಗ್ ಮಾಡುವಾಗ ಅರ್ಧ ತೋಳಿನ ಶರ್ಟ್ ತೊಡುತ್ತಾರೆ. ಅದೇ ಅನುಮಾನ ಇನ್ನಷ್ಟು ಬಲವಾಗಲು ಕಾರಣ. ಸಡಿಲವಾದ ಉದ್ದ ತೋಳಿನ ಶರ್ಟ್ ಧರಿಸುವುದರಿಂದ ಮೊಣಕೈಯನ್ನು ಎಷ್ಟು ಬಾಗಿಸುತ್ತಾರೆಂದು ನಿರ್ಧರಿಸುವುದು            ಕಷ್ಟವಾಗುತ್ತದೆ. ಆದ್ದರಿಂದ ಪರೀಕ್ಷೆ ಅಗತ್ಯ~ ಎಂದು ವರದಿಯಲ್ಲಿ ತಿಳಿಸಲಾಗಿದೆ.ನವೆಂಬರ್‌ನಲ್ಲಿ `ಯುಎಇ~ನಲ್ಲಿ ನಡೆದಿದ್ದ ಸರಣಿಯ ಸಂದರ್ಭದಲ್ಲಿಯೂ ಲಂಕಾದವರು ಇದೇ ರೀತಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಪಾಕ್ ಬೌಲರ್ ವಿರುದ್ಧ ದೂರು ನೀಡಿದ ಎರಡೂ ಸಂದರ್ಭದಲ್ಲಿ ಮ್ಯಾಚ್ ರೆಫರಿ ಆಗಿದ್ದು ಡೇವಿಡ್ ಬೂನ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.