`ಅಟಲ್‌ಜೀ ಜನಸ್ನೇಹಿ ಕೇಂದ್ರ' ಉದ್ಘಾಟನೆ

7

`ಅಟಲ್‌ಜೀ ಜನಸ್ನೇಹಿ ಕೇಂದ್ರ' ಉದ್ಘಾಟನೆ

Published:
Updated:

ಹೊಸಪೇಟೆ : `ಮಾಹಿತಿ ಹಕ್ಕು ಕಾಯಿದೆ ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಸರ್ಕಾರಿ ಯೋಜನೆಗಳು ಸಾರ್ವಜನಿ ಕರಿಗೆ ಮುಟ್ಟುವಂತೆ ಮಾಡಲಾಗುತ್ತಿದ್ದು ಅವುಗಳ ಸರಿಯಾದ ಉಪಯೋಗ ಪಡೆಯಲು ಪ್ರತಿಯೊಬ್ಬರು ಮುಂದಾಗಬೇಕು' ಎಂದು ಹೊಸಪೇಟೆ ನಗರಸಭೆಯ ಅಧ್ಯಕ್ಷ ಎಂ.ಅಮ್ಜದ್ ಹೇಳಿದರು.ಹೊಸಪೇಟೆಯ ತಹಶೀಲ್ದಾರ ಕಚೇರಿಯಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ನೆಮ್ಮದಿ ಕೇಂದ್ರಗಳು ಖಾಸಗಿ ನಿರ್ವಹಣೆಗೆ ನೀಡಿದ ಹಿನ್ನಲೆಯಲ್ಲಿ ಆಗಿರುವ ಅವ್ಯವಸ್ಥೆಗಳನ್ನು ಸರಿಪಡಿಸಲು ಇಲಾಖೆಯ ಅಧೀನದಲ್ಲಿಯೇ ಕೇಂದ್ರವನ್ನು ನಡೆಸುವ ಮೂಲಕ ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಸೇವೆ ನೀಡಲು ಇಲಾಖೆ ಮುಂದಾಗಿದೆ. ಸ್ವಹಿತಾಸಕ್ತಿಗಾಗಿ ದುರುಪಯೋಗ ವಾಗದೇ ಸಮಾಜದ ಅರ್ಹ ಫಲಾನುಭವಿಗೆ ಯೋಜನೆ ಮುಟ್ಟುವಂತೆ ಮಾಡಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.ಹೊಸಪೇಟೆ ಉಪವಿಭಾಗದ ಎಎಸ್‌ಪಿ ರವಿ.ಡಿ.ಚೆನ್ನಣ್ಣನವರ್ ಮಾತನಾಡಿ ಇಲಾಖಾ ಧಿಕಾರಿಗಳು ಸೇರಿದಂತೆ ಕಚೇರಿಯ ಮುಖ್ಯಸ್ಥರು ನಮ್ಮ ವ್ಯವಸ್ಥೆಯನ್ನು ಅರ್ಥೈಸುವ ಮನೋಗುಣ ಹೊಂದಬೇಕಾಗಿರುವುದು ಅಗತ್ಯವಾಗಿದೆ. ಸಾರ್ವಜನಿಕರು ಪ್ರಶ್ನಿಸುವ ಮನೋಧರ್ಮವನ್ನು ರೂಢಿಸಿಕೊಳ್ಳುವುದರಿಂದಲೂ ವ್ಯವಸ್ಥೆಯ ಲೋಪಗಳನ್ನು ತಿಳಿಯಲು ಸಾಧ್ಯ ಎಂದರು.ತಹಶೀಲ್ದಾರ ಬಸವರಾಜ ಸೋಮಣ್ಣನವರ್ ಮಾತನಾಡಿ, ಸರ್ಕಾರ ನೆಮ್ಮದಿ ಕೇಂದ್ರದ ಬದಲಾಗಿ ಅಟಲ್‌ಜೀ ಜನಸ್ನೇಹಿ ಕೇಂದ್ರ ಆರಂಭಿಸಿದೆ ಖಾಸಗಿ ವ್ಯವಸ್ಥೆಯಲ್ಲಿ ಆಗುವ ತೊಂದರೆ ನಿವಾರಿಸಲು ಮತ್ತು ಇಲಾಖಾಧಿ ಕಾರಿಗಳು ನೇರಹೊಣೆ ಗಾರಿಕೆಯೊಂದಿಗೆ ಉತ್ತಮ ಸೇವೆಗೆ ಅವಕಾಶ ನೀಡಿದ್ದು ಪ್ರಯೋಜನ ಪಡೆಯುವಂತೆ ತಿಳಿಸಿದರು. ನಿಗದಿತ ಸಮಯದಲ್ಲಿ ಕೆಸಲಗಳಾಗದಿದ್ದರೆ ಅಧಿಕಾರಿಗಳು ನೇರವಾಗಿ ಸಂಪರ್ಕಿಸುವಂತೆ ತಿಳಿಸಿದರು.ಹೊಸಪೇಟೆ ಉಪವಿಭಾಗಾಧಿಕಾರಿ ಡಾ.ಡಿ.ಆರ್.ಅಶೋಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಕೊಟ್ರೇಶ್,  ನಗರಸಭೆಯ ಪೌರಾಯುಕ್ತ ಕೆ.ರಂಗಸ್ವಾಮಿ, ಬಾಲಸ್ವಾಮಿ ದೇಶಪ್ಪ, ಡಿ.ವೆಂಕಟರಾಜು ಸೇರಿದಂತೆ ಇಲಾಖಾಧಿಕಾರಿ ಇತರರು ಹಾಜರಿದ್ದರು. ಸರ್ಕಾರ ವಿವಿಧ ಯೋಜನೆಗಳ ಪ್ರಯೋಜನಗಳನ್ನು ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry