ಅಟ್ಲಾಂಟಿಕ್ ವಾಲರಸ್

7

ಅಟ್ಲಾಂಟಿಕ್ ವಾಲರಸ್

Published:
Updated:
ಅಟ್ಲಾಂಟಿಕ್ ವಾಲರಸ್

ಅಟ್ಲಾಂಟಿಕ್ ಸಾಗರದಲ್ಲಿ ತೇಲುತ್ತಾ, ಮುಳುಗುತ್ತಾ ವಾಸಿಸುತ್ತಿರುವ ಪ್ರಾಣಿ ವಾಲರಸ್. ಇದನ್ನು ಕಡಲ್ಗುದುರೆ ಎಂದು ಕೂಡ ಕರೆಯುತ್ತಾರೆ. ನಾಲ್ಕು ಮೀಟರ್ ಉದ್ದ, 1,300 ಕಿಲೋ ತೂಕದ ಪ್ರಾಣಿಗಳಿವು. ಅವುಗಳ ಬಾಯಲ್ಲಿ ಆನೆಗೆ ಇರುವಂಥ ದಂತಗಳಿರುತ್ತವೆ. ಕೆಲವು ವಾಲರಸ್‌ಗಳಿಗೆ ಒಂದು ಮೀಟರ್ ಉದ್ದದ ದಂತಗಳಿರುವುದೂ ಉಂಟು. ಹಿಮದಲ್ಲಿ ತೆವಳಲು ಅವು ತಮ್ಮ ದಂತಗಳನ್ನು ಉಪಯೋಗಿಸುತ್ತವೆ.ಸೂರ್ಯನ ಶಾಖ ಬೀಳದ, ತಣ್ಣನೆ ಗಾಳಿ ಬೀಸುವ ಹಿಮಪ್ರದೇಶಗಳಲ್ಲಿ ಉರುಳಾಡುವ ಈ ವಾಲರಸ್‌ಗಳು ಸಮುದ್ರದಲ್ಲಿ ಮುಳುಗಿ ಆಹಾರ ಶೋಧ ಮಾಡುವುದರಲ್ಲೂ ಚಾಣಾಕ್ಷ ಪ್ರಾಣಿಗಳು. ಅಟ್ಲಾಂಟಿಕ್ ತೀರ ಪ್ರದೇಶಗಳಲ್ಲಿ ವಾಸಿಸುವ ಎಸ್ಕಿಮೋಗಳ ಪ್ರಮುಖ ಆಹಾರ ಈ ವಾಲರಸ್‌ಗಳು. ಅವರು ವಾಲರಸ್‌ಗಳನ್ನು ಆಹಾರ ಮತ್ತು ಬಟ್ಟೆಗಳಿಗಾಗಿ ಬೇಟೆಯಾಡುತ್ತಾರೆ.ಇದೀಗ ವಾಲರಸ್‌ಗಳ ಬೇಟೆಗೆ ನಿಯಂತ್ರಣ ಹೇರಲಾಗಿದೆ. ಎಸ್ಕಿಮೋಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ವಾಲರಸ್‌ಗಳನ್ನು ಕೊಲ್ಲಲು ಅವಕಾಶ ನೀಡಿಲ್ಲ. ಅದೂ ನಿಗದಿತ ಸಂಖ್ಯೆಯ ಬೇಟೆಗೆ ಮಾತ್ರ ಅವಕಾಶ. ಅದರಿಂದ ಅವುಗಳ ಸಂತತಿ ಸ್ವಲ್ಪಮಟ್ಟಿಗೆ ಉಳಿದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry