ಮಂಗಳವಾರ, ಮಾರ್ಚ್ 9, 2021
18 °C

ಅಡಿಕೆಗೆ ಭವಿಷ್ಯವಿಲ್ಲ: ಸಂಸದ ಹೆಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಕೆಗೆ ಭವಿಷ್ಯವಿಲ್ಲ: ಸಂಸದ ಹೆಗಡೆ

ಯಲ್ಲಾಪುರ: `ಕೃಷಿ, ತೋಟಗಾರಿಕೆ,  ಹೈನುಗಾರಿಕೆಯನ್ನು ಉದ್ಯಮವಾಗಿ ಕಂಡರೆ ಮಾತ್ರ ಈ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ~ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. ಅವರು ಇಲ್ಲಿನ ಎಪಿಎಂಸಿಯಲ್ಲಿ  ತೋಟಗಾರಿಕೆ ಇಲಾಖೆ, ಗೇರು ಅಭಿ ವೃದ್ಧಿ ನಿಗಮ, ಕದಂಬ ಫೌಂಡೇಶನ್ ಹಾಗೂ ಕ್ಯಾಡ್‌ಬರಿ ಸಂಸ್ಥೆ ಹಮ್ಮಿ ಕೊಂಡಿದ್ದ ಗೇರು, ಕೋಕೋ, ಶ್ರೀಗಂಧ ಮತ್ತಿತರ ಬೆಳೆಗಳ ಕುರಿತ ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾ ಡಿದರು.ಭಾರತದಾದ್ಯಂತ ಶೇ. 1ಕ್ಕಿಂತ ಕಡಿಮೆ ಬೆಳೆಬೆಳೆಯುವ ಅಡಿಕೆಗೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಮಾತ್ರ ಬೇಡಿಕೆ ಇದ್ದು ಈ ಬೇಡಿಕೆ ಯಾವುದೇ ಸಂದರ್ಭ ದಲ್ಲೂ ಕೊನೆಯಾಗಬಹುದು. ಹೀಗಾಗಿ ಅಡಿಕೆಗೆ ಭವಿಷ್ಯ ವಿಲ್ಲವೆಂದ ಸಂಸದರು, ಅಡಿಕೆಯ  ಪರ್ಯಾಯ ಬೆಳೆಗಳ ಬಗ್ಗೆ ರೈತರು ಚಿಂತಿಸಬೇಕಾಗಿದೆ ಎಂದು ಸಲಹೆ ನೀಡಿದರು.ಗೇರು ಅಭೀವೃದ್ಧಿ ನಿಗಮದ ಅಧ್ಯಕ್ಷ ವಿನೋದ ಪ್ರಭು, ರಾಜ್ಯದ ಗೇರು ಸಂಸ್ಕರಣಾ ಘಟಕಗಳಿಗೆ ವಿದೇಶ ಗಳಿಂದ 1 ಲಕ್ಷ ಟನ್ ಗೇರು ಬೀಜ ಆಮದಾಗುತ್ತಿದೆ  ಎಂದರು. ಐಸಿಆರ್ ಚೇರಮನ್ ಡಾ. ಅಯ್ಯ ಪ್ಪನ್ ಮಾತನಾಡಿ, ಸೆಪ್ಟೆಂಬರ್ ತಿಂಗ ಳಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಕೇಂದ್ರ ವಾಗಿಸಿ ಕೃಷಿ, ತೋಟಗಾರಿಕೆಗೆ ಸಂಬಂಧಿ ಸಿದಂತೆ ಕಾರ್ಯಾಗಾರ ಹಮ್ಮಿಕೊಳ್ಳ ಲಾಗುವುದೆಂದು ತಿಳಿಸಿದರು.ಶಾಸಕ ವಿ.ಎಸ್.ಪಾಟೀಲ್ ಅಧ್ಯ ಕ್ಷತೆ ವಹಿಸಿದ್ದರು.  ಜಿ.ಪಂ. ಸದಸ್ಯರಾದ ರಾಘವೇಂದ್ರ ಭಟ್ಟ, ಅನಂತ ನಾಗರ ಜಡ್ಡಿ, ಗೇರು ನಿಗಮದ ಡಿಎಫ್‌ಓ ಕೆ.ವಿ. ನಾಯ್ಕ, ಎಪಿಎಂಸಿ ಅಧ್ಯಕ್ಷ ರಾಮ ಚಂದ್ರ ಮುದ್ದೇಪಾಲ್,  ಉಪಸ್ಥಿತ ರಿದ್ದರು.  ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಆರ್‌ನಾಯ್ಕ ಮತ್ತು ಗೇರು ಅಭಿವೃದ್ಧಿ ನಿಗಮದ ಸತೀಶ ಹೆಗಡೆ ಉಪನ್ಯಾಸ ನೀಡಿದರು.ರಾಘವೇಂದ್ರ ಭಟ್ಟ ಸ್ವಾಗತಿಸಿದರು.  ವಿನೇಶ ಭಟ್ಟ ನಿರೂಪಿಸಿದರು. ಉಮೇಶ ಭಾಗ್ವತ್ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.