ಸೋಮವಾರ, ಮೇ 10, 2021
22 °C

`ಅಡಿಕೆ ಬೆಲೆ ಕುಸಿದಿಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಾಜ್ಯ ಸರ್ಕಾರ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧಿಸಿದ್ದರೂ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿ ಗಮನಾರ್ಹ ಇಳಿಕೆ ಆಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 30ರಂದು ಸರಕು ಅಡಿಕೆ ಬೆಲೆ ಕ್ವಿಂಟಲ್‌ಗೆ ಕನಿಷ್ಠರೂ20,009 ಮತ್ತು ಗರಿಷ್ಠರೂ26,909 ಇತ್ತು. ಜೂನ್ 5ರಂದು ಇದರ ಬೆಲೆ ಕನಿಷ್ಠರೂ19,591 ಮತ್ತು ಗರಿಷ್ಠರೂ26,099 ಇದೆ. ಹಾಗೆಯೇ ಇಡೀ ಮಾದರಿ ಅಡಿಕೆ ಬೆಲೆ ಕನಿಷ್ಠರೂ17,140 ಮತ್ತು ಗರಿಷ್ಠರೂ18,389 ಇತ್ತು. 5ರಂದು ಕನಿಷ್ಠ ್ಙ  16,420 ಮತ್ತು ಗರಿಷ್ಠರೂ17,339 ಇದೆ ಎಂದು ವಿವರಿಸಿದರು.ಆಹಾರ ಕಾಯ್ದೆಯಡಿ ಅಡಿಕೆಯನ್ನು ಆಹಾರ ಬೆಳೆ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆಹಾರ ಪದಾರ್ಥಗಳಲ್ಲಿ ನಿಕೋಟಿನ್, ತಂಬಾಕಿನ ಅಂಶ ಇರಬಾರದು ಎಂದು ಆದೇಶಿಸಿದೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆ ಅಡಿ ವಿವಿಧ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳೂ ಗುಟ್ಕಾದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಒತ್ತಿ ಹೇಳಿವೆ. ಆದ ಕಾರಣ ರಾಜ್ಯದಲ್ಲಿ ತಡವಾಗಿಯಾದರೂ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಗುಟ್ಕಾ ಮತ್ತು ಪಾನ್ ಮಸಾಲವನ್ನು ನಿಷೇಧಿಸಲಾಗಿದೆ ಎಂದು ಸಮರ್ಥಿಸಿ ಕೊಂಡರು. ಗೋರಖ್‌ಸಿಂಗ್ ಸಮಿತಿ ಶಿಫಾರಸ್ಸಿನಂತೆ ಈಗಾಗಲೇ ರೋಗಪೀಡಿತ ಅಡಿಕೆ ತೋಟಗಳಲ್ಲಿ, ರೋಗ ನಿರೋಧಕ ಕ್ರಮ ಕೈಗೊಳ್ಳಲು ಗರಿಷ್ಠ ಎರಡು ಹೆಕ್ಟೇರ್‌ಗೆ ತಲಾ ್ಙ  15 ಸಾವಿರ ಸಹಾಯಧನ ನೀಡಲಾಗುತ್ತಿದೆ. 2011- 12ನೇ ಸಾಲಿನಲ್ಲಿ ರಾಜ್ಯವಲಯ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿ 3,233 ಹೆಕ್ಟೇರ್ ಪ್ರದೇಶದ ಪುನಶ್ಚೇತನ ಕೈಗೊಳ್ಳಲು ರೂ574.18 ಲಕ್ಷ ಸಹಾಯಧನ ಒದಗಿಸಲಾಗಿದೆ ಎಂದರು.ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿ ಅಂತರ್ ಬೆಳೆಗಳಾದ ಕಾಳು ಮೆಣಸು, ಲವಂಗ, ಜಾಜಿ ಕಾಯಿ ಮತ್ತು ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆರೂ20 ಸಾವಿರ ಸಹಾಯಧನ ನೀಡಲಾಗುತ್ತಿದೆ. ಅಲ್ಲದೆ ಅಡಿಕೆ ಬೆಳೆಗೆ ತಗಲುವ ಪ್ರಮುಖ ಕೀಟ ಮತ್ತು ರೋಗ ಗಳ ಹತೋಟಿಗಾಗಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ಖರೀದಿಸಲು ಪ್ರತಿ ಹೆಕ್ಟೇರ್‌ಗೆರೂ1 ಸಾವಿರದಿಂದರೂ2 ಸಾವಿರದವರೆಗೆ ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು.ಪ್ರಸಕ್ತ ಸಾಲಿನಲ್ಲಿರೂ200 ಲಕ್ಷ ಅನುದಾನದಲ್ಲಿ ಮಲೆನಾಡಿನ 6 ಜಿಲ್ಲೆಗಳಲ್ಲಿ ಅಡಿಕೆ ಪರ‌್ಯಾಯ ಬೆಳೆ ಬೆಳೆಯಲು ಪ್ರಾತ್ಯಕ್ಷಿಕೆ ಕೈಗೊಳ್ಳಲಾಗುತ್ತಿದೆ. ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾಗಲು ಅವಕಾಶ ನೀಡುವುದಿಲ್ಲ. ಅಡಿಕೆ ಬೆಳೆಗಾರರ ಬೆಂಬಲಕ್ಕೆ ಇಲಾಖೆ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.