ಅಡಿಕೆ ಬೆಳೆಗಾರರ ನೆರವಿಗೆ ತುಮ್ಕೊಸ್ ಹೋರಾಟ

7

ಅಡಿಕೆ ಬೆಳೆಗಾರರ ನೆರವಿಗೆ ತುಮ್ಕೊಸ್ ಹೋರಾಟ

Published:
Updated:

ಚನ್ನಗಿರಿ: ಗುಟ್ಕಾ ನಿಷೇಧದ ಗುಮ್ಮದಿಂದಾಗಿ ಇಂದು ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಗುಟ್ಕಾ ನಿಷೇಧ ಮಾಡಬಾರದು ಎಂದು `ತುಮ್ಕೊಸ್~ ಸಂಸ್ಥೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆಯನ್ನು ಹೂಡಿದೆ. ಈ ಮೂಲಕ ಅಡಿಕೆ ಬೆಳೆಗಾರರ ನೆರವಿಗೆ `ತುಮ್ಕೊಸ್~ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು `ತುಮ್ಕೊಸ್~ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಹೇಳಿದರು.ಪಟ್ಟಣದ `ತುಮ್ಕೊಸ್~ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಅವರು 2010-11ನೇ ಸಾಲಿನ ಬಜೆಟ್  ಮಂಡಿಸಿ ಮಾತನಾಡಿದರು.ಕಳೆದ 28 ವರ್ಷಗಳಿಂದ ಈ ಸಂಸ್ಥೆ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಸಂಜೀವಿನಿಯಾಗಿ ಕಾರ್ಯವನ್ನು ಮಾಡುತ್ತಾ ಬಂದಿದೆ. ಪ್ರಸಕ್ತ ಸಾಲಿನಲ್ಲಿ ರೂ.938,42,64,916 ವಹಿವಾಟು ನಡೆಸಿ ಒಟ್ಟು ರೂ. 1,43,82,748 ಕೋಟಿ ಲಾಭ ಗಳಿಸಿದೆ. ಸಂಘದ ವಹಿವಾಟು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಹಾಗೂ ದೈನಂದಿನ ವಹಿವಾಟು ಸುಗಮವಾಗಿ ನಡೆದುಕೊಂಡು ಹೋಗಲು ಸದಸ್ಯರು ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.ಮಾಜಿ ಅಧ್ಯಕ್ಷ ಆರ್.ಎಂ. ರವಿ, ನಿರ್ದೇಶಕರಾದ ಎಚ್.ಎಸ್. ಮಲ್ಲಿಕಾರ್ಜುನಪ್ಪ, ಎಂ.ಎನ್. ಮರುಳಪ್ಪ, ಎಂ.ಬಿ. ಗೌರಮ್ಮ, ಸಿ.ಎಂ. ರಾಜು, ಎಂ. ಈಶ್ವರಪ್ಪ, ಪಿ.ಎಂ. ಪ್ರಕಾಶ್, ಎಚ್. ಹಾಲಪ್ಪ, ಕೆ.ಜಿ. ಜಯಪ್ಪ, ಜಿ.ಆರ್. ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry