ಅಡಿಕೆ ಬೆಳೆಗಾರರ ಸಮಸ್ಯೆ-ಕೇಂದ್ರಕ್ಕೆ ಪತ್ರ

7

ಅಡಿಕೆ ಬೆಳೆಗಾರರ ಸಮಸ್ಯೆ-ಕೇಂದ್ರಕ್ಕೆ ಪತ್ರ

Published:
Updated:

ನರಸಿಂಹರಾಜಪುರ: ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರದ ವಾಣಿಜ್ಯ ಮಂತ್ರಿ ಮಧ್ಯ ಪ್ರವೇಶಿಸಲು ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದರು.ಇಲ್ಲಿನ ಶಾಸಕರ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಕಳೆದ ಸಾಲಿ ಬಜೆಟ್‌ನಲ್ಲಿ ಅಡಿಕೆಗೆ ತಗುಲಿರುವ ಹಳದಿ ಎಲೆ ರೋಗದ ಸಂಶೋಧನೆಗೆ ರೂ.3 ಕೋಟಿ ನೀಡಿತ್ತು ಆದರೆ ಈ ಸಂಶೋಧನೆಯಿಂದ ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣ ಕಾಣುತ್ತಿಲ್ಲ. ಅಲ್ಲದೆ ಗೋರಖ್ ಸಿಂಗ್‌ವರದಿ ಇಲ್ಲಿನ ಬೆಳೆಗಾರರ ಪರವಾಗುವ ಸಾಧ್ಯತೆಗಳು ಕಡಿಮೆ ಎಂದರು.ಈ ಸಾಲಿನ ಬಜೆಟ್‌ನಲ್ಲಿ ಹಳದಿ ಎಲೆ ರೋಗ  ಮತ್ತು ಬೆಳೆಗಾರರ ಪರಿಹಾರಕ್ಕೆ ರೂ. 2ಕೋಟಿ ನೀಡಲಾಗಿದೆ ಆದರೆ ಇದು ಏನೇನು ಸಾಕಾಗುವುದಿಲ್ಲ. ಪ್ರತಿ ಅಡಿಕೆ ಬೆಳೆಗಾರನಿಗೆ ಕನಿಷ್ಠ ರೂ. 1ಲಕ್ಷ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು 15ಕೋಟಿ ನೀಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ. ಕ್ಷೇತ್ರದ ಶಾಸಕರು ರೂ.10ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಿದ್ದಾರೆ. ಲೋಕಸಭೆಯ ಕಲಾಪದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಇದೇ ಬರುವ ಮಾರ್ಚ್1ರ ಮಂಗಳವಾರ ಚರ್ಚೆಗೆ ಬರಲಿದೆ.ಅಡಿಕೆಯ ಹಳದಿ ರೋಗ ಪೀಡಿತ ತೋಟಗಳ ಬೆಳೆಗಾರರಿಗೆ ಪರಿಹಾರ ನೀಡಲು ವಿಶೇಷ ಪ್ಯಾಕೇಜ್ ಕೇಂದ್ರ ಸರ್ಕಾರ ಕೊಡಬೇಕು,ಕೆಂಪು ಅಡಿಕೆಗೆ ಕೆಜಿಗೆ ರೂ.148,ಚಾಲಿ ಅಡಿಕೆ ರೂ.114 ಉತ್ಪಾನದ ವೆಚ್ಚ ನೀಡುವ ಬಗ್ಗೆ ತಜ್ಞರು ನೀಡಿರುವ ವರದಿಯನ್ನು ಅಂಗೀಕಾರ ಮಾಡಿ ಮಾರು ಕಟ್ಟೆ ಮಧ್ಯಪ್ರವೇಶ ಯೋಜನೆಯ (ಎಂಐಎಸ್) ಮೂಲಕ ಈ ಧಾರಣೆಯಲ್ಲಿ ಅಡಿಕೆ ಖರೀದಿಸುವ ಕೆಲಸ ಮಾಡಬೇಕು, ಪ್ಲಾಸ್ಟಿಕ್ ಸ್ಯಾಚೆಯಲ್ಲಿ ಗುಟ್ಕ ನಿಷೇಧಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಪರಿಸರ ಕಾಯಿದೆ ಅನ್ವಯ ನೀಡಿರುವ ತೀರ್ಪನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಪ್ಲಾಸ್ಟಿಕ್ ಬದಲು ಪರ್ಯಾಯ ತಂತ್ರ ಬಳಸುವವರೆಗೆ ಮುಂದುವರೆಸುವಂತೆ ಪರಿಸರ ಮಂತ್ರಿಗಳನ್ನು ಕೇಳಿಕೊಳ್ಳಲಾಗುವುದು.ಸುಪ್ರೀಂಕೋರ್ಟ್‌ನ ತೀರ್ಪಿನಿಂದ ಅಡಿಕೆ ಧಾರಣೆ ಕ್ವಿಂಟಲ್‌ಗೆ ರೂ, 2,000 ದಿಂದ ರೂ,3,000ವರೆಗೆ ಕುಸಿ ದಿದ್ದು ಖರೀದಿ ಮಾಡುವ ಜನರಿಲ್ಲದೆ ಬೆಳೆಗಾರರು ಕಂಗಾ ಲಾಗಿದ್ದಾರೆ.ಹಾಗಾಗಿ ಅಡಿಕೆ ಬೆಳೆಗಾರರಿಗೂ ಕಾಫಿ ಪ್ಯಾಕೇಜ್‌ನ ರೀತಿಯಲ್ಲಿ ವಿಶೇಷ ಪ್ಯಾಕೇಜ್ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು.ಇದೇ 28ರಂದು ಕೊಪ್ಪದಲ್ಲಿ ನಡೆಯುವ ಅಡಿಕೆ ಬೆಳೆಗಾರರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವು ದು.ಅಲ್ಲದೆ ಇಲ್ಲಿನ ಅಡಿಕೆ ಬೆಳೆಗಾರರ ಸಮಸ್ಯೆಗೆ ಮಳೆಗಾಕ್ಕೂ ಮೊದಲು ಪರಿಹಾರ ಕೊಡಿಸುವ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.ಶಾಸಕ ಡಿ.ಎನ್.ಜೀವರಾಜ್,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೆಟ್ಟಿಗದ್ದೆ ರಾಮ ಸ್ವಾಮಿ,ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಅದ್ದಡ ಸತೀಶ್ ಇದ್ದರು.   ‘ಅಡಿಕೆ ಧಾರಣೆ ಕುಸಿತ ಷಡ್ಯಂತ್ರ’

ನರಸಿಂಹರಾಜಪುರ: ಕಳೆದ ಜ. 30ರಿಂದ ಗುಟ್ಕದ ಪ್ಲಾಸ್ಟಿಕ್ ಸ್ಯಾಚೆ ನಿಷೇದ ಮಾಡಬೇಕೆಂಬ ಕೇಂದ್ರದ ಪರಿಸರ ಇಲಾಖೆ ಸೂಚಿಸಿರುವ ಹಿಂದೆ ಕಾಣದ ಕೈಗಳ ಷಡ್ಯಂತ್ರ ಇದೆ ಎಂದು ಶಾಸಕ ಡಿ.ಎನ್.ಜೀವರಾಜ್ ಗಂಭೀರ ಆರೋಪ ಮಾಡಿದರು.ಇಲ್ಲಿನ ಶಾಸಕರ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.ದಿನನಿತ್ಯದಲ್ಲಿ ್ಗಳಸುವ ಹಾಲು,ಅಡಿಗೆಎಣ್ಣೆ,ಮಾತ್ರೆ,ಚಾಕಲೇಟ್ ಮುಂತಾದ ವಸ್ತುಗಳೆಲ್ಲಾ ಪ್ಲಾಸ್ಟಿಕ್‌ನಲ್ಲಿಯೇ ಬರುತ್ತವೆ ಅಲ್ಲದೆ ಗುಟ್ಕ ರಫ್ತಾಗುವ15 ದೇಶಗಳು ಪ್ಲಾಸ್ಟಿಕ್‌ನ್ನು ನಿಷೇದಿಸಿಲ್ಲ ಎಂದರು. ಅಡಿಕೆ ಬೆಲೆ ಏರಿದಾಗಲೆಲ್ಲಾಗುಟ್ಕಾ ನಿಷೇದದ ಗುಮ್ಮಾ ದೆಹಲಿಯಿಂದಲೇ ಹೋರಡುತ್ತದೆ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry