ಅಡಿಕೆ: ಮುಂದುವರಿದ ಅಘೋಷಿತ ಬಂದ್

7

ಅಡಿಕೆ: ಮುಂದುವರಿದ ಅಘೋಷಿತ ಬಂದ್

Published:
Updated:

ಶಿವಮೊಗ್ಗ: ಅಡಿಕೆ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ಕಳೆದ ಮೂರು ದಿನಗಳಿಂದ ನಡೆದ ಅಘೋಷಿತ ಬಂದ್ ಗುರುವಾರವೂ ಮುಂದುವರಿದಿದೆ.

ಮಾರುಕಟ್ಟೆಯ ಯಾರ್ಡ್‌ನಲ್ಲಿ ವರ್ತಕರು ಅಡಿಕೆ ವ್ಯಾಪಾರ-ವಹಿವಾಟಿಗೆ ಸಂಪೂರ್ಣ ವಿರಾಮ ನೀಡಿದ್ದರು. ಎಲ್ಲ ವರ್ತಕರು, ಬೆಳೆಗಾರರು ಅಘೋಷಿತ ಬಂದ್‌ಗೆ ಒಕ್ಕೊರಲಿನಿಂದ ಬೆಂಬಲ ಸೂಚಿಸಿದ್ದಾರೆ.

ಇದರಿಂದ ಇಡೀ ದಿನ ಮಾರುಕಟ್ಟೆಯಲ್ಲಿ ವಹಿವಾಟು ಸ್ಥಗಿತಗೊಂಡಿತ್ತು. ಸಹಕಾರಿ ಸಂಘಗಳೂ ಮಾರುಕಟ್ಟೆಯಲ್ಲಿ ಪಾಲ್ಗೊಂಡಿಲ್ಲ. ಸಾಗರದಲ್ಲೂ ಸ್ಥಗಿತ: ಸಾಗರದ ಅಡಿಕೆ ಮಾರುಕಟ್ಟೆಯಲ್ಲಿಯೂ ಗುರುವಾರ ಅಡಿಕೆ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಶಿವಮೊಗ್ಗ ಅಡಿಕೆ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry