ಗುರುವಾರ , ಮೇ 28, 2020
27 °C

ಅಡಿಕೆ ಸುಲಿಯುವ ಯಂತ್ರದ ಪ್ರಾತ್ಯಕ್ಷಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಕೆರೆ(ಬಾಳೆಹೊನ್ನೂರು): ವಿನೂತನ ಮಾದರಿಯ ಅಡಿಕೆ ಸುಲಿಯುವ ಯಂತ್ರದ ಪ್ರಾತ್ಯಕ್ಷಿಕೆ ಕೊಪ್ಪ ತಾಲ್ಲೂಕು ಕಲ್ಕೆರೆ ದೇವಿಕೊಪ್ಪದ ಕೃಷಿಕ ಟಿ.ಎಂ.ನಟೇಶ್ ಅವರ ಮನೆಯಲ್ಲಿ ಮಂಗಳವಾರ ನಡೆಯಿತು.ಕೊಪ್ಪದ ಸ್ನೇಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಎಚ್.ಎನ್.ಕೃಷ್ಣಶಾಸ್ತ್ರಿ, ಸಂಘದ ಮೂಲಕ ಯಂತ್ರವನ್ನು ಜಿಲ್ಲೆಯ ಮಾರುಕಟ್ಟೆಗೆ ಬಿಡುಗಡೆ ಮಾಡುಲಾಗುತ್ತಿದ್ದು, ಶೀಘ್ರದಲ್ಲಿಯೇ ಎಲ್ಲಾ ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸಲಾಗುವುದು ಎಂದರು.ಸುಧಾರಿತ ಹಾಗೂ ಉತ್ಕೃಷ್ಟ ದರ್ಜೆಯ 1, 2, 4, 6 ಮತ್ತು 8 ಚೈನಿನ ಯಂತ್ರಗಳನ್ನು ರೂಪಿಸಲಾಗಿದೆ. ವಿಶೇಷವಾಗಿ ವಿ 1 ಹಾಗೂ ವಿ 2 ಮಾದರಿಯ ಯಂತ್ರಗಳನ್ನು ಸಣ್ಣ-ಮಧ್ಯಮ ವರ್ಗದ ಬೆಳೆಗಾರರಿಗೆ ಅನುಕೂಲವಾಗುವಂತೆ ತಯಾರಿಸಲಾಗಿದೆ.ಗಂಟೆಗೆ 35ರಿಂದ 50 ಕೆ.ಜಿ ಅಡಿಕೆ ಸಂಸ್ಕರಿಸಬಹುದಾಗಿದೆ.  ಯಂತ್ರದ ಅಡಿಕೆ ಸುಲಿಯುವಾಗಿನ ಹಾನಿ ಪ್ರಮಾಣ ಶೇ. 95ರಷ್ಟು ಕಡಿಮೆಯಿದ್ದು, ಸುಲಲಿತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಯಂತ್ರ ತಯಾರಿಸಿರುವ ಕುಂಟವಳ್ಳಿಯ ಖಾಸಗಿ ಸಂಸ್ಥೆ ಹೇಳಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.