ಮಂಗಳವಾರ, ಅಕ್ಟೋಬರ್ 22, 2019
22 °C

ಅಡಿಕೆ ಹೆಕ್ಕುವ ಕೈ

Published:
Updated:

ಕೃಷಿ ಚಟುವಟಿಕೆಗೆ ಜನರೇ ಸಿಕ್ಕದಿರುವ ಈ ದಿನಗಳಲ್ಲಿ ಮಲೆನಾಡಿನಲ್ಲಿ ಅಡಿಕೆ ವ್ಯವಸಾಯ ಕಷ್ಟಕರವಾಗಿ ಪರಿಣಮಿಸಿದೆ. ಈಗೀಗ ಅಡಿಕೆ ಕೊಯ್ಲು ಮಾಡುವುದಿರಲಿ, ಮರದಿಂದ ಬಿದ್ದ ಅಡಿಕೆಯನ್ನು ಹೆಕ್ಕುವುದೂ ಸುಲಭವಲ್ಲ.ಈ ಸಮಸ್ಯೆಯನ್ನು ಸ್ವತಃ ಅನುಭವಿಸಿರುವ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕು ಕಿರೆಕೋಡ ಗ್ರಾಮದ ರೈತ ರಾಜಾರಾಮ ಹೆಗಡೆ, ಅಡಿಕೆ ಹೆಕ್ಕುವ ಸರಳ ಸಾಧನವೊಂದನ್ನು ತಯಾರಿಸಿದ್ದಾರೆ.ಮನೆಯಲ್ಲಿ ದೊರೆಯುವ ಸಾದಾ ವಸ್ತುಗಳನ್ನು ಇದಕ್ಕೆ ಬಳಸಿದ್ದಾರೆ. ಅಡಿಕೆ ಆರಿಸಲು ಮಾತ್ರವಲ್ಲದೇ ಗಟಾರ ಅಥವಾ ಕೊಳಚೆಯಲ್ಲಿ ಬಿದ್ದ ಪ್ಲಾಸ್ಟಿಕ್ ಮತ್ತಿತರ ಕಸ ಹೆಕ್ಕುವದಕ್ಕೂ ಉಪಯೋಗಿಸಬಹುದು ಎನ್ನುತ್ತಾರೆ.ಈ `ಅಡಿಕೆ ಹೆಕ್ಕುವ ಕೈ~ ರಚನೆ ಸರಳವಾಗಿದೆ. ಮೂರುವರೆ ಅಡಿ ಉದ್ದ, ಮುಕ್ಕಾಲು ಇಂಚು ಅಗಲದ ಪಿವಿಸಿ ಪೈಪ್‌ನ  ಒಂದು ತುದಿಯಲ್ಲಿ  ಮಹಿಳೆಯರ ಕೂದಲಿಗೆ ಹಾಕುವ ಕ್ಲಿಪ್ ಅಳವಡಿಸಲಾಗಿದೆ. ಈ ಕ್ಲಿಪ್‌ಗೆ ಜೋಡಿಸಲಾದ ಬೈಕ್‌ನ ಕ್ಲಚ್ ಕೇಬಲ್ ಮತ್ತೊಂದು ತುದಿಯಲ್ಲಿರುವ ಹನಿ ನೀರಾವರಿ ಡ್ರಿಪ್‌ನ `ಟಿ~ಗೆ ಸಂಪರ್ಕ ಪಡೆದಿದೆ. ಕೇಬಲ್ ಮುಚ್ಚಳಕ್ಕೆ ಮೈಕ್ರೋವಾಲ್ ಹಾಕಲಾಗಿದೆ. ಇದರೊಂದಿಗೆ ಒಂದು ಎಂಡ್ ಕ್ಯಾಪ್ ಮತ್ತು ಎಂಟು ನಂಬರಿನ ಐದು ಬೋಲ್ಟ್ ನಟ್‌ಗಳನ್ನು ಉಪಯೋಗಿಸಲಾಗಿದೆ.ಪೈಪ್‌ನ ಒಂದು ತುದಿಯಲ್ಲಿ ಅಳವಡಿಸಿರುವ ಹನಿ ನೀರಾವರಿಯ `ಟಿ~ಯನ್ನು ಎಳೆದರೆ ಮತ್ತೊಂದು ತುದಿಯಲ್ಲಿರುವ ಕ್ಲಿಪ್ ತೆರೆದುಕೊಳ್ಳುತ್ತದೆ. ಆಗ ಅಡಿಕೆಯನ್ನು ಆ ಕ್ಲಿಪ್‌ನಲ್ಲಿ ಎತ್ತಿಕೊಂಡು ಬುಟ್ಟಿಗೆ ಹಾಕಬಹುದು.`ಮಲೆನಾಡಿನ ಅಡಿಕೆ ಮರಗಳ ಸಾಲುಗಳ ಪಕ್ಕದಲ್ಲಿರುವ ಕಾದಿಗೆ ಅಥವಾ ಕಾಲುವೆಯಲ್ಲಿ ಬಿದ್ದ ಅಡಿಕೆಯನ್ನು ಕಾಲುವೆಯೊಳಗೆ ಇಳಿಯದೇ ಇದರಿಂದ ಹೆಕ್ಕಬಹುದು. ಈ ಮೂಲಕ ಶ್ರಮವೂ ಕಡಿಮೆ. ಅದೂ ಅಲ್ಲದೇ ವಯಸ್ಸಾದವರು, ಮಹಿಳೆಯರು ಅಥವಾ ಮಕ್ಕಳು ಈ ಸಾಧನ ಬಳಸಿ ಅಡಿಕೆ ಹೆಕ್ಕುವದು ಸುಲಭ. ರೈತರೇ ಇದನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ಇದಕ್ಕೆ ನೂರು ರೂಪಾಯಿಗಿಂತ ಹೆಚ್ಚು ಖರ್ಚಾಗುವುದಿಲ್ಲ~ ಎನ್ನುತ್ತಾರೆ ರಾಜಾರಾಮ ಹೆಗಡೆ.ಮಾಹಿತಿಗಾಗಿ ಅವರನ್ನು 94826 99848 ಅಥವಾ 94814 62006 ಮೂಲಕ ಸಂಪರ್ಕಿಸಬಹುದು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)