ಬುಧವಾರ, ಜೂನ್ 16, 2021
23 °C

ಅಡುಗೆಮನೆ ಕೈತೋಟದ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಯಲಹಂಕ ಸಂಯುಕ್ತ ಪರಿಸರ ಸಂಘದ ಆಶ್ರಯ­ದಲ್ಲಿ ಅಳ್ಳಾಳಸಂದ್ರ ಕೆರೆ ಆವರಣ­ದಲ್ಲಿ ಸ್ಥಳೀಯ ನಿವಾ ಸಿಗಳಿಗಾಗಿ ತಾರಸಿ ಮತ್ತು ಅಡುಗೆಮನೆ ಕೈತೋಟದ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸ­ಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ತೋಟಗಾರಿಕೆ ಇಲಾಖೆಯ ಸಹ­ನಿರ್ದೇ­ಶಕ ಡಾ.ಕೆ.ರಾಮ­ಕೃಷ್ಣಪ್ಪ, ‘ಸಾಮಾನ್ಯ ನಿವಾಸಿಗಳೂ ತಮ್ಮ ಮನೆಯಲ್ಲಿ ದೊರಕುವ ತ್ಯಾಜ್ಯಗಳನ್ನು ಹಾಗೂ ಮಿತ ನೀರು ಬಳಸಿ ಪೌಷ್ಟಿಕಾಂಶಯುಕ್ತ  ಹಾಗೂ ಕೀಟನಾಶಕರಹಿತ ಹಣ್ಣು ಮತ್ತು ತರಕಾರಿಗಳನ್ನು ಸಾವಯವ ರೀತಿ­ಯಲ್ಲಿ ಬೆಳೆದು ಉಪಯೋಗಿಸ­ಬಹುದು’ ಎಂದು ತಿಳಿಸಿದರು.ಬೆಂಗಳೂರು ಉತ್ತರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಪವಿತ್ರ ಮಾತನಾಡಿ, ಮನೆಯಲ್ಲಿ ಲಭ್ಯವಿರುವ ಕಡಿಮೆ ಜಾಗ ದಲ್ಲಿ ಪ್ಲಾಸ್ಟಿಕ್‌ಚೀಲ ಮತ್ತು ಮಣ್ಣಿನ ಕುಂಡಗಳನ್ನು ಬಳಸಿ, ವಿವಿಧ ರೀತಿಯ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಬಹುದು ಎಂದರು. ಸಂಘದ ಅಧ್ಯಕ್ಷ ಡಾ.ತಾಯಪ್ಪ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.