ಅಡುಗೆ ಅನಿಲ ಪೂರೈಸುವಾಗಲೇ ತೂಕ ಪರಿಶೀಲನೆ

7

ಅಡುಗೆ ಅನಿಲ ಪೂರೈಸುವಾಗಲೇ ತೂಕ ಪರಿಶೀಲನೆ

Published:
Updated:

ನವದೆಹಲಿ (ಪಿಟಿಐ): ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಪೂರೈಸುವಾಗಲೇ ಅವುಗಳ ತೂಕವನ್ನು ಪರಿಶೀಲಿಸಿ, ಗ್ರಾಹಕರಿಗೆ ಆಗುವ ಮೋಸವನ್ನು ತಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಮೂಲಕ ಗ್ರಾಹಕರ ಹಕ್ಕನ್ನು ಎತ್ತಿ ಹಿಡಿದಿದೆ.ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸುವ ವಿತರಕರು, ತಮ್ಮ ಜತೆಯಲ್ಲಿ ತೂಕದ ಯಂತ್ರವನ್ನು ಕೊಂಡೊಯ್ಯಬೇಕು. ಗ್ರಾಹಕನ ಹಾಜರಿಯಲ್ಲೇ ಸಿಲಿಂಡರ್‌ನ್ನು ತೂಕ ಮಾಡಿ ಪೂರೈಸುವ ಮೂಲಕ ಗ್ರಾಹಕರ ಹಕ್ಕನ್ನು  ಕಾಯ್ದುಕೊಳ್ಳಬೇಕು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತೈಲ ಕಂಪೆನಿಗಳಿಗೆ ನೀಡಿದ್ದ ಸೂಚನೆಯನ್ನು ನ್ಯಾಯಾಲಯ ಪುನರುಚ್ಚರಿಸಿದೆ.`ಈ ಕುರಿತು ದೂರದರ್ಶನ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಜನರಲ್ಲಿ  ಜಾಗೃತಿ ಮೂಡಿಸಬೇಕು~ ಎಂದು ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಮತ್ತು ಎಸ್.ಜೆ. ಮುಖ್ಯೋಪಾಧ್ಯಾಯ ಅವರಿದ್ದ ನ್ಯಾಯಪೀಠ ನಿರ್ದೇಶನ ನೀಡಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry