ಅಡುಗೆ ಅನಿಲ, ಮೊಬೈಲ್ ಸಂಪರ್ಕಕ್ಕೆ ಆಧಾರ್ ಸಂಖ್ಯೆ

7

ಅಡುಗೆ ಅನಿಲ, ಮೊಬೈಲ್ ಸಂಪರ್ಕಕ್ಕೆ ಆಧಾರ್ ಸಂಖ್ಯೆ

Published:
Updated:

ಮುಂಬೈ (ಪಿಟಿಐ): ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಆಧಾರ್ ಸಂಖ್ಯೆ ಮೂಲಕ ಅಡುಗೆ ಅನಿಲ ಹಾಗೂ ಮೊಬೈಲ್ ಫೋನ್ ಸಂಪರ್ಕ ಪಡೆದುಕೊಳ್ಳುವ ಎರಡು ಪ್ರಾಯೋಗಿಕ ಯೋಜನೆಗಳನ್ನು ಆರಂಭಿಸಿದೆ.`ಮೈಸೂರಿನಲ್ಲಿ ನಾವು ಈ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಹೈದರಾಬಾದ್‌ನಲ್ಲೂ ಇದನ್ನು ಆರಂಭಿಸುತ್ತೇವೆ~ ಎಂದು ಯುಐಡಿಎಐ ಅಧ್ಯಕ್ಷ ನಂದನ್ ನಿಲೇಕಣಿ ಗುರುವಾರ ಹೇಳಿದ್ದಾರೆ.ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಾಗಿ ಯುಐಡಿಎಐ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದೊಂದಿಗೆ ಕಾರ್ಯಕ್ರಮ ನಡೆಸುತ್ತಿದೆ. ಜಾರ್ಖಂಡ್‌ನಲ್ಲಿ ಪಿಂಚಣಿ ಯೋಜನೆ, ತುಮಕೂರಿನಲ್ಲಿ ಬ್ಯಾಂಕ್ ಖಾತೆ ತೆರೆಯುವ ಯೋಜನೆಯನ್ನೂ ಹಮ್ಮಿೊಳ್ಳಲಾಗಿದೆ ಎಂದು ನಿಲೇಕಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry