ಶನಿವಾರ, ಜನವರಿ 18, 2020
20 °C

ಅಡುಗೆ ಅನಿಲ: ಸಮರ್ಪಕ ಬಳಕೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ತಮಿಳುನಾಡಿನ ಕುಂಭಕೋಣಂನ ಶಾಲೆಯೊಂದರಲ್ಲಿ ಸಂಭವಿಸಿದ ಅಡುಗೆ ಅನಿಲ ದುರಂತದಂತಹ ಪ್ರಕರಣ ಸಂಭವಿಸದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಗ್ಯಾಸ್ ಸೇಫ್ ಇಂಡಿಯಾದ ಸೋಮಶೇಖರ್ ಸಲಹೆ ನೀಡಿದರು.ಅಕ್ಷರದಾಸೋಹ ಸಿಬ್ಬಂದಿ ಮತ್ತು ಶಿಕ್ಷಕರಿಗಾಗಿ ತಾಲ್ಲೂಕಿನ ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಅಡುಗೆ ಅನಿಲ ಸುರಕ್ಷತೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಮಾನ್ಯ ಅನಿಲ ಸೋರಿಕೆ ಆದಾಗ ಈ ಉಪಕರಣ ತಾನಾಗಿಯೇ ಬಂದ್ ಆಗಿ ಅನಾಹುತ ತಪ್ಪಿಸುತ್ತದೆ, ಅದೇ ರೀತಿ ಸೂಕ್ಷ್ಮ ಪ್ರಮಾಣದ ಗ್ಯಾಸ್ ಸೋರಿಕೆ ಕಂಡು ಹಿಡಿಯಬಹುದು ಎಂದು ಅವರು ತಿಳಿಸಿದರು.ಮನೆಯಲ್ಲಿ, ಶಾಲೆಯ ಅಕ್ಷರದಾಸೋಹ ಕೇಂದ್ರಗಳಲ್ಲಿ ಆಕಸ್ಮಿಕವಾಗಿ ಮಕ್ಕಳು ಅನಿಲ ಸಂಪರ್ಕದ ಸ್ವಿಚ್ ಆನ್ ಮಾಡಿ ಬಿಟ್ಟುಬಿಡುವುದು, ಗ್ಯಾಸ್ ಪೈಪ್ ಹಾಳಾಗಿರುವುದು, ಸೋರಿಕೆಯಂಥ ಸಮಸ್ಯೆಗಳಲ್ಲಿ ಎದುರಾಗುವ ಸ್ಫೋಟದಂಥ ಅಪಘಾತಗಳನ್ನು ಉಪಕರಣ ಶೇ.100 ರಷ್ಟು ತಡೆಯುವ ಸಾಮರ್ಥ್ಯ ಹೊಂದಿದೆ ಎಂದು ವಿವರಿಸಿದರು.ಗ್ಯಾಸ್ ಸೇಫ್ ಇಂಡಿಯಾ ಮತ್ತು ಮಾಲೂರಿನ ಪವಿತ್ರ ಮಾರ್ಕೆಟಿಂಗ್ ಸಂಸ್ಥೆಯ ಆಶ್ರಯದಲ್ಲಿ ಅಪಘಾತ ರಹಿತ ಅಡುಗೆ ಮನೆಗಾಗಿ ಅಂತರರಾಷ್ಟ್ರೀಯ ದರ್ಜೆಯ ಅನಿಲ ಸುರಕ್ಷಾ ಉಪಕರಣದ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.ಪ್ರಾಂಶುಪಾಲ ವರದರಾಜ್, ಉದ್ಯೋಗಾಧಿಕಾರಿ ಕೆ.ಶ್ರೀನಿವಾಸ್, ಪ್ರೌಢಶಾಲಾ ವಿಭಾಗದ ಶಿಕ್ಷಕರಾದ ಪಿ.ಕೃಷ್ಣಪ್ಪ, ಪವಿತ್ರ ಮಾರ್ಕೆಟಿಂಗ್‌ನ ಚಂದ್ರಾರೆಡ್ಡಿ, ಉಪನ್ಯಾಸಕರಾದ ಹೇಮಾವತಿ, ಲಕ್ಷ್ಮೀನಾರಾಯಣ, ವೆಂಕಟಪತಿ, ಶಿಕ್ಷಕರಾದ ಮೇರಿ ಎಲಿಜೆಬತ್, ಪದ್ಮಶ್ರೀ, ಜಯಂತಿ, ಭಾಗ್ಯ, ಗಂಗಪ್ಪ, ಮಂಜುನಾಥ್, ಬಾಲರಾಜ್, ಬ್ಯಾನರ್ಜಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)