ಅಡುಗೆ ಅನಿಲ ಸಮಸ್ಯೆ

7

ಅಡುಗೆ ಅನಿಲ ಸಮಸ್ಯೆ

Published:
Updated:

ಪೆಟ್ರೋಲಿಯಂ ಸಚಿವರಾದ ಜಯಪಾಲರೆಡ್ಡಿಯವರು ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ಕೇವಲ 6 ಅಡುಗೆ ಅನಿಲ ಸಿಲಿಂಡರ್‌ಗಳನ್ನು ಮಿತಿಗೊಳಿಸಿದ್ದಾರೆ. ಯಾವ ಆಧಾರದಲ್ಲಿ ಈ ಮಿತಿ ಹಾಕಿರುವರೊ ಗೊತ್ತಿಲ್ಲ. ಇದರಲ್ಲಿ ಸಡಿಲಿಕೆಯೇ ಇಲ್ಲ ಎಂದು ಕೇಂದ್ರ ಸರ್ಕಾರವೂ ಸ್ಪಷ್ಟವಾಗಿ ಹೇಳಿಬಿಟ್ಟಿದೆ.ಸಾಮಾನ್ಯವಾಗಿ ಸಣ್ಣ ಕುಟುಂಬಕ್ಕೆ ತಿಂಗಳಿಗೆ ಒಂದು, ದೊಡ್ಡ ಕುಟುಂಬಕ್ಕೆ ತಿಂಗಳಿಗೆ ಎರಡು ಸಿಲಿಂಡರ್ ಅನಿಲ ಬೇಕಾಗುತ್ತದೆ. ಸಚಿವರು ಮತ್ತು ರಾಜಕೀಯ ಪ್ರತಿಷ್ಠಿತ ವ್ಯಕ್ತಿಗಳು ಬಳಸಿದ ಅನಿಲ ಸಿಲಿಂಡರ್‌ಗಳ ಯಾದಿ ಪತ್ರಿಕೆಗಳಲ್ಲಿ (ಪ್ರ.ವಾ. 10) ಪ್ರಕಟವಾಗಿದೆ.

 

ಅದರ ಪ್ರಕಾರ ಸಣ್ಣ ಕುಟುಂಬ ಹೊಂದಿದ ಜೈಪಾಲ ರೆಡ್ಡಿಯವರು 9 ತಿಂಗಳಲ್ಲಿ 28 ಸಿಲಿಂಡರ್ ಬಳಸಿದ್ದಾರೆ. ಅಂದರೆ ತಿಂಗಳಿಗೆ 3 ಕ್ಕಿಂತ ಹೆಚ್ಚು ಉಳಿದವರು ತಿಂಗಳಿಗೆ 5 ಮತ್ತು ಅದಕ್ಕಿಂತ ಹೆಚ್ಚು ಸಿಲಿಂಡರ್‌ಗಳನ್ನು ಬಳಸಿದ್ದಾರೆ. (ಇವರಿಗೆಲ್ಲ ವಿದ್ಯುತ್ ಬಳಕೆ ಪುಕ್ಕಟೆ ಇರುತ್ತದೆ).ಸಿಲಿಂಡರ್ ಬಳಕೆಗೆ ಸಾಮಾನ್ಯರಿಗೊಂದು ನಿಯಮ ಪ್ರತಿಷ್ಠಿತರಿಗೊಂದು ನಿಯಮವೆ? ಇದು ಪ್ರಜಾಪ್ರಭುತ್ವ ನೀತಿಯೆ? ಪಟ್ಟಣ ಪ್ರದೇಶದಲ್ಲಿರುವ ಸಾಮಾನ್ಯರು ಸಿಲಿಂಡರ್ ಪಡೆಯಲು ಮತ್ತು ಸಿಲಿಂಡರ್ ಸಿಗದಿದ್ದಾಗ ಪಡುವ ಪಾಡು ಆ ದೇವರಿಗೇ ಗೊತ್ತು. ಕಾರಣ ಸಣ್ಣ ಕುಟುಂಬಗಳಿಗೆ ವರ್ಷಕ್ಕೆ 12, ದೊಡ್ಡ ಕುಟುಂಬಗಳಿಗೆ ವರ್ಷಕ್ಕೆ 24 ರಂತೆ ನಿಗದಿಪಡಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry