ಅಡುಗೆ ಅನಿಲ ಸಿಲಿಂಡರ್: ಎಸ್‌ಎಂಎಸ್ ನೋಂದಣಿ ಕಡ್ಡಾಯ ಇಲ್ಲ

7

ಅಡುಗೆ ಅನಿಲ ಸಿಲಿಂಡರ್: ಎಸ್‌ಎಂಎಸ್ ನೋಂದಣಿ ಕಡ್ಡಾಯ ಇಲ್ಲ

Published:
Updated:

ಕೊಪ್ಪಳ:  ಅಡುಗೆ ಅನಿಲ ಸಿಲಿಂಡರ್ ಪಡೆಯಬೇಕಾದರೆ ಎಸ್‌ಎಂಎಸ್ ಮೂಲಕ ನೋಂದಣಿ ಮಾಡಿಸಬೇಕು ಎಂಬ ನಿಯಮವನ್ನು ಸಡಿಲಗೊಳಿಸಲಾಗಿದೆ.ಗ್ರಾಹಕರು ಈ ಮೊದಲಿನ ಹಾಗೆಯೇ ಅಡುಗೆ ಅನಿಲ ಪೂರೈಕೆ ಮಾಡುವ ಘಟಕದಲ್ಲಿ (ಕೊಪ್ಪಳದಲ್ಲಿ ಭಾರತ್ ಗ್ಯಾಸ್‌ನ ಮಳಿಗೆ) ಖುದ್ದಾಗಿ ಹೋಗಿ ನೋಂದಣಿ ಮಾಡಿಸಿ ಸಿಲಿಂಡರ್ ಪಡೆಯಬಹುದಾಗಿದೆ. ಒಂದು ವೇಳೆ ಗ್ರಾಹಕರು ಇಚ್ಛಿಸಿದಲ್ಲಿ ಎಸ್‌ಎಂಎಸ್ ಮೂಲಕ ಸಹ ನೋಂದಣಿ ಮಾಡಿಸಬಹುದು. ಒಟ್ಟಾರೆ, ಎರಡು ಆಯ್ಕೆಗಳಿದ್ದು, ಗ್ರಾಹಕರು ತಮಗೆ ಅನುಕೂಲಕ್ಕೆ    ತಕ್ಕ ವ್ಯವಸ್ಥೆಯನ್ನು ಬಳಸಬಹುದು ಎಂದು ಅಹಾರ ಮತ್ತು ನಾಗರಿಕ ಸರಬರಾಜು ನಿಗಮದ ಪ್ರಕಟಣೆ ತಿಳಿಸಿದೆ.ಈ ಸಂಬಂಧ ಧಾರವಾಡದಲ್ಲಿರುವ ಭಾರತ್ ಪೆಟ್ರೋಲಿಯಂ ನಿಗಮದ ಅಧಿಕಾರಿಗಳು ದೂರವಾಣಿ ಮೂಲಕ ನೀಡಿದ ನಿರ್ದೇಶನದಂತೆ ಇನ್ನು ಮುಂದೆ ಎಸ್‌ಎಂಎಸ್ ಮೂಲಕ ಮಾತ್ರ ನೋಂದಣಿ ಮಾಡಿಸುವುದು ಕಡ್ಡಾಯವಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಎಸ್‌ಎಂಎಸ್ ಮೂಲಕ ನೋಂದಣಿ ಮಾಡಿಸುವಲ್ಲಿನ ತೊಂದರೆ ಕುರಿತಂತೆ `ಪ್ರಜಾವಾಣಿ~ ಅ.2ರಂದು ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry