`ಅಡ್ಡ ಪರಿಣಾಮ ಬೀರದ ಹೋಮಿಯೊಪಥಿ'

ಬುಧವಾರ, ಜೂಲೈ 24, 2019
24 °C

`ಅಡ್ಡ ಪರಿಣಾಮ ಬೀರದ ಹೋಮಿಯೊಪಥಿ'

Published:
Updated:

ಬೆಂಗಳೂರು: `ಹೋಮಿಯೊಪಥಿ ಔಷಧಿಗಳಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಇದರಿಂದ ಜನರು ಈ ಔಷಧಿಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ' ಎಂದು ಪಾಸಿಟಿವ್ ಹೋಮಿಯೊಪಥಿ ಕರ್ನಾಟಕ ಶಾಖೆಯ ವೈದ್ಯರ ತಂಡದ ಮುಖ್ಯಸ್ಥ ಡಾ.ಕುಮಾರ್ ಹೇಳಿದರು.ನಗರದ ಮಲ್ಲೇಶ್ವರದ ಪಾಸಿಟಿವ್ ಹೋಮಿಯೊಪಥಿ ಸಂಸ್ಥೆಯು ಇತ್ತೀಚೆಗೆ ನಗರದಲ್ಲಿ ಆಯೋಜಿಸಿದ್ದ ಸಂಸ್ಥೆಯ ಐದನೇ ವಾರ್ಷಿಕೋತ್ಸವ ಮತ್ತು ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅರ್ಥಪೂರ್ಣ: `ಎಲ್ಲರಿಗೂ ವೈದ್ಯಕೀಯ ಸೌಲಭ್ಯ ದೊರೆಯುವಂತಾಗಬೇಕು. ಎಲ್ಲರ ಆರೋಗ್ಯ ಸುಧಾರಣೆಯ ಹೊಣೆ ವೈದ್ಯರ ಮೇಲಿದೆ. ವೈದ್ಯರು ತಮ್ಮ ಕರ್ತವ್ಯವನ್ನು ಅರಿತು ವೃತ್ತಿ ನಿಭಾಯಿಸಬೇಕು. ಆಗ, ವೈದ್ಯರ ದಿನದ ಆಚರಣೆ ಅರ್ಥಪೂರ್ಣವಾಗುತ್ತದೆ' ಎಂದರು.ಮಲ್ಲೇಶ್ವರದ ಸ್ಯಾಂಕಿ ರಸ್ತೆ, ಸದಾಶಿವನಗರ ಮತ್ತಿತರ ಕಡೆಗೆ ಆರೋಗ್ಯ ಜಾಗೃತಿ ಜಾಥಾ ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry