ಶುಕ್ರವಾರ, ಜೂನ್ 18, 2021
27 °C

ಅಡ್ಯಾರು: ಸೌದೆ ಲಾರಿ ಹಳ್ಳಕ್ಕೆ- ಇಬ್ಬರು ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಅಡ್ಯಾರು ಸಮೀಪದ ರಾಷ್ಟ್ರೀಯ ಹೆದ್ದಾರಿ-77ರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಚೆಕ್‌ಪೋಸ್ಟ್ ಬಳಿ ಬುಧವಾರ ಮುಂಜಾನೆ ರಬ್ಬರ್ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಹಳ್ಳಕ್ಕೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಗಾಯಗೊಂಡಿದ್ದಾನೆ.

 

ಲಾರಿ ಕ್ಲೀನರ್ ಸುಳ್ಯ ತಾಲ್ಲೂಕು ಮರ್ಕೆಂಜದ ಸುಧಾಕರ(29) ಹಾಗೂ ಜಾಲ್ಸೂರಿನ ರಾಜಶೇಖರ್ ಸ್ಥಳದಲ್ಲೇ ಮೃತಪಟ್ಟರು. ಗಾಯಾಳು ಚಾಲಕನನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೈಕಂಪಾಡಿ ಕೈಗಾರಿಕಾ ಪ್ರದೇಶದ ಎ.ಕೆ.ಬೋರ್ಡ್ ಮತ್ತು ಡೋರ್ಸ್‌ ಎಂಬ ಸಂಸ್ಥೆಗೆ ಸೇರಿದ ಲಾರಿ ಸುಳ್ಯದಿಂದ ಮಂಗಳವಾರ ರಾತ್ರಿ 10.30ಕ್ಕೆ ರಬ್ಬರ್ ಕಟ್ಟಿಗೆ ಹೇರಿಕೊಂಡು ಹೊರಟಿತ್ತು. ಲಾರಿಯಲ್ಲಿ ಮೂವರು ಇದ್ದರು.

ಬುಧವಾರ ಮುಂಜಾನೆ 3.30ಕ್ಕೆ ಅಡ್ಯಾರು ಸಮೀಪ ಹಳ್ಳಕ್ಕೆ ಉರುಳಿ ಲಾರಿಯಲ್ಲಿದ್ದ ಕಟ್ಟಿಗೆ ಚೆಲ್ಲಾಪಿಲ್ಲಿಯಾಗಿದೆ.`ಹಿಂದಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಓವರ್‌ಟೇಕ್ ಮಾಡಲು ಯತ್ನಿಸಿತು. ಆ ವಾಹನ ಎಡಕ್ಕೆ ಬಂದುದರಿಂದ ನಮ್ಮ ಲಾರಿ ನಿಯಂತ್ರಣ ಕಳೆದುಕೊಂಡಿತು. ಹಳ್ಳಕ್ಕೆ ಬಿತ್ತು~ ಲಾರಿ ಚಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.ಮುಂಜಾನೆ ನಿದ್ರೆ ಮಂಪರಿನಲ್ಲಿ ಹಿಡಿತ ಕಳೆದುಕೊಂಡು ಉರುಳಿರುವ ಸಾಧ್ಯತೆಯೂ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಂಕನಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡರು. ನಂತರ ಎರಡು ಕ್ರೇನ್‌ಗಳನ್ನು ಬಳಸಿ ಹಳ್ಳದಲ್ಲಿ ಸಿಲುಕಿದ್ದ ಮರದ ಲಾರಿಯನ್ನು ಮೇಲಕ್ಕೆ ಎತ್ತಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.