ಬುಧವಾರ, ಆಗಸ್ಟ್ 4, 2021
20 °C

ಅಡ್ವಾಣಿ ಅಸತ್ಯ ಹೇಳಿಕೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ನಾಯಕ ಅಡ್ವಾಣಿಯವರು ಬೆಂಗಳೂರಿನಲ್ಲಿ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸುತ್ತಾ, ಜನರ ನೆನಪು ಮನಸ್ಸಿನಲ್ಲಿ ಉಳಿದಿರಲಿಕ್ಕಿಲ್ಲ ಎಂದು ಭ್ರಮಿಸಿ ಮತ್ತೆ ‘ಹೊಸ’ ಸುಳ್ಳುಗಳನ್ನು ಹೇಳುವ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತಂದುಕೊಳ್ಳುತ್ತಿದ್ದಾರೆ.ಅಷ್ಟೇ ಅಲ್ಲ, ಚಪ್ಪಾಳೆ ಗಿಟ್ಟಿಸುವುದಕ್ಕಾಗಿ ಲೋಕಸಭೆಯನ್ನು  ‘ಶೋಕಸಭೆ’ ಎಂದು ಬಣ್ಣಿಸಿ ಸರ್ವಮಾನ್ಯ  ‘ಸಂಸತ್ತಿ’ಗೆ ಕಠೋರ ಅಪಮಾನ ಮಾಡಿದ್ದಾರೆ.‘ಇಂದಿರಾಗಾಂಧಿಯವರ ಹತ್ಯೆಯ ಹಿನ್ನೆಲೆಯಲ್ಲಿ ನಡೆದ ಶೋಕ ಸಭೆಯ ಚುನಾವಣೆಯಲ್ಲಿ ರಾಜೀವ್‌ಗಾಂಧಿಯವರು ಹಿಂದೆ ಯಾರೂ ಪಡೆಯದ ಬಹುಮತ ಪಡೆದಿದ್ದರು’ ಎಂದಿದ್ದಾರೆ. ‘ತಮ್ಮ ಪಕ್ಷ 1999 ರಲ್ಲಿ 184 ಪಡೆದದ್ದು 2009 ರಲ್ಲಿ 116ಕ್ಕೆ ಇಳಿದರೂ ಬಿಜೆಪಿಗೆ ಹಿನ್ನಡೆ ಸಿಕ್ಕದೇ ಮುನ್ನಡೆಯುತ್ತಲೇ ಇದೆ’ ಎಂದಿದ್ದಾರೆ.ಎಲ್ಲಕ್ಕಿಂತ ಅಸತ್ಯವಾದ ಹೇಳಿಕೆ ಎಂದರೆ, ತಮ್ಮ ಪತ್ನಿ 17.1.1977 ರಂದು ಸಾಯಿಬಾಬಾ ಅವರನ್ನು ಭೇಟಿಯಾದಾಗ,  ‘ಅಡ್ವಾಣಿಯವರ ಬಿಡುಗಡೆ ಸದ್ಯದಲ್ಲೇ ಆಗುತ್ತದೆ ‘ ಎಂದು ಭವಿಷ್ಯ ನುಡಿದರೆಂದು ತಿಳಿಸಿದ್ದಾರೆ.

 

ಆದರೆ ಸತ್ಯ ಸಂಗತಿ ಏನೆಂದರೆ ನಾನು 9.1.1977 ರಲ್ಲಿ ಸುಬೇದಾರ್ ಛತ್ರಂ ರಸ್ತೆಯಲ್ಲಿನ ಭಾರತೀಯ ಮಜ್ದೂರ್ ಸಂಘದ ಕಾರ್ಯಾಲಯದಲ್ಲಿ ಸಕ್ರಿಯನಾಗಿದ್ದಾಗ, ಬೆಳಗಿನಿಂದಲೇ  ‘ಅಮೆರಿಕದ ಒತ್ತಡದ ಮೇಲೆ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ’ ರದ್ದುಗೊಳಿಸಿ, ಅಂದಿನಿಂದಲೇ ಎಲ್ಲಾ ಸತ್ಯಾಗ್ರಹಿಗಳನ್ನು ಬಿಡುಗಡೆ ಮಾಡಿ ಚುನಾವಣೆ ನಡೆಸಲಿದ್ದಾರೆಂಬ ಸುದ್ದಿ ದಟ್ಟವಾಗಿತ್ತು. ಸಂಜೆ ವೇಳೆಗೆ ಬಿಡುಗಡೆ ಪ್ರಾರಂಭವಾಗಿತ್ತು. ನಂತರ ಅಡ್ವಾಣಿ ಅವರು ಕೂಡ ಬಿಡುಗಡೆಯಾದರು. ಹೀಗಿರುವಾಗ  ಬಾಬಾ ಅವರ ‘ಭವಿಷ’್ಯ ಸರಿಯೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.