ಗುರುವಾರ , ಮೇ 6, 2021
24 °C

ಅಡ್ವಾಣಿ ಇಲ್ಲದೆ ಬಿಜೆಪಿ ಇಲ್ಲ: ಶಿವಸೇನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಅಡ್ವಾಣಿ ರಾಜೀನಾಮೆಗೆ ಪ್ರತಿಕ್ರಿಯಿಸಿರುವ ಎನ್‌ಡಿಎ ಮಿತ್ರಪಕ್ಷ ಶಿವಸೇನೆ, ಅಡ್ವಾಣಿ ಪಕ್ಷದಿಂದ ಹೊರನಡೆದಿರುವುದು ನೋವು ತಂದಿದೆ ಎಂದು ಹೇಳಿದೆ.`ಪಕ್ಷ ಕಟ್ಟುವಲ್ಲಿ ಅಡ್ವಾಣಿ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆ ಬೆಲೆಕಟ್ಟಲಾಗದು' ಎಂದು  ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿರುವುದಾಗಿ ಶಿವಸೇನಾ ವಕ್ತಾರ ಸಂಜಯ್ ರಾವತ್ ತಿಳಿಸಿದ್ದಾರೆ.`ಅಡ್ವಾಣಿ ಇಲ್ಲದೆ ಬಿಜೆಪಿ ಬಗ್ಗೆ ಯೋಚಿಸಲಾಗದು. ಅವರ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮನವೊಲಿಸಲು ಪ್ರಯತ್ನಿಸಲಾಗುವುದು' ಎಂದು ಉದ್ದವ್ ಅವರು ಹೇಳಿದ್ದಾರೆ.`ಎನ್‌ಡಿಎ ಹಾಗೂ ಬಿಜೆಪಿಯಲ್ಲಿ ಅಡ್ವಾಣಿ ಅವರ ಸ್ಥಾನಮಾನ ಉನ್ನತ ಮಟ್ಟದ್ದು, ಅವರ ಮಾರ್ಗದರ್ಶನ ಎನ್‌ಡಿಎಗೆ ಬೇಕೇ ಬೇಕು' ಎಂದು ಸೇನಾ ಮುಖಂಡ ರಾಹುಲ್ ನಾರ್ವೆಕರ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.