ಅಡ್ವಾಣಿ ನೀಡಿದ ಆನೆಯ ಕಲಾಕೃತಿ

7

ಅಡ್ವಾಣಿ ನೀಡಿದ ಆನೆಯ ಕಲಾಕೃತಿ

Published:
Updated:

ವಾಷಿಂಗ್ಟನ್ (ಪಿಟಿಐ): ಮಾಜಿ ಉಪಪ್ರಧಾನಿ ಎಲ್. ಕೆ. ಅಡ್ವಾಣಿ ಅವರು 2002ರಲ್ಲಿ ಗೃಹ ಸಚಿವರಾಗಿದ್ದಾಗ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಲಿನ್ ಪೊವೆಲ್ ಅವರಿಗೆ ಕೊಡುಗೆಯಾಗಿ ನೀಡಿದ್ದ ಅಮೂಲ್ಯ ಹರಳುಗಳು ಮತ್ತು ಮುತ್ತುಗಳಿಂದ ಸಿದ್ಧಪಡಿಸಿದ ಆನೆಯ ಕಲಾಕೃತಿಯನ್ನು ಅಮೆರಿಕ ವಿದೇಶಾಂಗ ಇಲಾಖೆಯ ಪ್ರದರ್ಶನ ಸಭಾಂಗಣದಲ್ಲಿ ಇಡಲಾಗಿದೆ.ಅಂದು ವಿವಿಧ ದೇಶಗಳ ರಾಜತಾಂತ್ರಿಕರಿಂದ ನೂರಾರು ಕೊಡುಗೆಗಳು ಅಮೆರಿಕ ವಿದೇಶಾಂಗ ಕಾರ್ಯದರ್ಶಿಯವರಿಗೆ ಬಂದಿದ್ದು, ಅವುಗಳಲ್ಲಿ ಪ್ರಮುಖವಾದ 50 ಕೊಡುಗೆಗಳನ್ನು ವಿದೇಶಾಂಗ ಇಲಾಖೆಯ ಕೇಂದ್ರ ಕಚೇರಿ ಇರುವ ಹೆನ್ರಿ ಎಸ್. ಟರ್ಮನ್ ಕಟ್ಟಡದ ಪ್ರದರ್ಶನ ಸಭಾಂಗಣದಲ್ಲಿ ಇಡಲಾಗಿದೆ ಎಂದು ಕಚೇರಿಯ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry