ಅಣುಶಕ್ತಿ ಸ್ಥಾವರ ಪುನರಾರಂಭ
ಫುಕಿ, ಜಪಾನ್ (ಕಿಡೊ): ಕಳೆದ ವರ್ಷ ಮಾರ್ಚ್ನಲ್ಲಿ ಸಂಭವಿಸಿದ್ದ ಭಾರಿ ಭೂಕಂಪ ಮತ್ತು ಸುನಾಮಿ ಹೊಡೆತಕ್ಕೆ ಸಿಕ್ಕು ತತ್ತರಿಸಿದ ನಂತರ ವಿಕಿರಣ ಸೋರಿಕೆಯಿಂದಾಗಿ 15 ತಿಂಗಳಿನಿಂದ ಸ್ಥಗಿತಗೊಂಡಿದ್ದ ಪಶ್ಚಿಮ ಜಪಾನ್ನ ಒಹಿ ಅಣುಶಕ್ತಿ ಸ್ಥಾವರಗಳನ್ನು ಗುರುವಾರ ಪುನಾರಂಭಿಸಲಾಗಿದೆ.
ಸಹಜ ಸ್ಥಿತಿಗೆ ಮರಳಿದ ನಂತರವೂ ಎಲ್ಲ ಕಡ್ಡಾಯ ಪರೀಕ್ಷೆಗಳಿಗೆ ಒಳಪಡಿಸಿದ ನಂತರ ಕನ್ಸಾಯಿ ವಿದ್ಯುಚ್ಛಕ್ತಿ ಕಂಪೆನಿಯ ಮೂರನೇ ಪರಮಾಣು ಘಟಕದಲ್ಲಿ ಅಣು ವಿದ್ಯುತ್ ಉತ್ಪಾದನೆಯ ಕಾರ್ಯ ಆರಂಭಿಸಲಾಯಿತು.
ಸುನಾಮಿ ದುರಂತದ ನಂತರ ಸ್ಥಗಿತಗೊಂಡಿದ್ದ ಅಣುಶಕ್ತಿ ಸ್ಥಾವರಗಳ ಪೈಕಿ ಕಾರ್ಯಾರಂಭ ಮಾಡಿದ ಮೊದಲ ಘಟಕ ಇದಾಗಿದೆ.
ಜನರೇಟರ್ ಮತ್ತು ವಿದ್ಯುತ್ ಸರಬರಾಜು ಜಾಲಕ್ಕೆ ಮರಳಿ ಸಂಪರ್ಕ ಕಲ್ಪಿಸಲಾಗಿದ್ದು ಅಣುವಿದ್ಯುತ್ ಉತ್ಪಾದನೆಯನ್ನು ಆರಂಭಿಸಿದೆ. ನಾಳೆಯಿಂದಲೇ ಈ ಘಟಕ ತನ್ನ ಸಹಜ ಉತ್ಪಾದನಾ ಸಾಮರ್ಥ್ಯವನ್ನು ಪಡೆಯಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.