`ಅಣೆಕಟ್ಟೆ ಕಟ್ಟಲು ಅಡೆತಡೆ ಇಲ್ಲ'

6

`ಅಣೆಕಟ್ಟೆ ಕಟ್ಟಲು ಅಡೆತಡೆ ಇಲ್ಲ'

Published:
Updated:

ನವದೆಹಲಿ: ಕಾವೇರಿ ಜಲ ಮಂಡಳಿ ಐ ತೀರ್ಪಿನ ಪ್ರಕಾರ, ಕಾವೇರಿ ನದಿಯಲ್ಲಿ ಹೊಸದಾಗಿ ಅಣೆಕಟ್ಟೆಗಳನ್ನು ಕಟ್ಟುವ ಹಾಗೂ ತನಗೆ ಸೇರಿದ ಜಲಪ್ರದೇಶದೊಳಗೆ ಕಾಲುವೆಗಳನ್ನು ಮೇಲ್ದರ್ಜೆಗೇರಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವಕ್ಕೆ ಯಾವುದೇ ಅಡೆತಡೆ ಇಲ್ಲ.

ನದಿ ತೀರದ ಮೇಲಿನ ರಾಜ್ಯಗಳು ಕೆಳಗಿನ ರಾಜ್ಯಗಳಿಗೆ ನಿಗದಿತ ಪ್ರಮಾಣದಲ್ಲಿ ನೀರು ಬಿಡಬೇಕು ಎನ್ನುವುದನ್ನು ನ್ಯಾಯಮಂಡಳಿಯ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕೆಳಗಿನ ರಾಜ್ಯಗಳಿಗೆ ನೀರು ಬಿಟ್ಟ ಬಳಿಕ ಮೇಲಿನ ರಾಜ್ಯಗಳು ಯಾವುದೇ ಅಡಚಣೆ ಇಲ್ಲದೇ ತಮ್ಮ ವ್ಯಾಪ್ತಿಯ ನೀರನ್ನು ಬಳಸಿಕೊಳ್ಳಬಹುದು.`ಮೇಕೆದಾಟು ಹಾಗೂ ಶಿವನಸಮುದ್ರದಲ್ಲಿ ಉದ್ದೇಶಿತ ಎರಡು ಜಲವಿದ್ಯುತ್ ಯೋಜನೆಗಳು ಕರ್ನಾಟಕದ ವ್ಯಾಪ್ತಿಯಲ್ಲಿಯೇ ಬರುತ್ತವೆ. ಹಾಗಾಗಿ ತಮಿಳುನಾಡು ಸರ್ಕಾರಕ್ಕೆ ಇದನ್ನು ಪ್ರಶ್ನಿಸುವ ಹಕ್ಕು ಇಲ್ಲ' ಎಂದು ಅಂತರರಾಜ್ಯ ಜಲ ವಿವಾದಗಳನ್ನು ನಿರ್ವಹಿಸುತ್ತಿರುವ ಕರ್ನಾಟಕ ಕಾನೂನು ತಂಡದ ವಕೀಲ ಮೋಹನ್ ಕಾತರಕಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry