ಅಣ್ಣನ ನೆಲದಲ್ಲಿ ಶರಣ ಸಂಭ್ರಮ

7

ಅಣ್ಣನ ನೆಲದಲ್ಲಿ ಶರಣ ಸಂಭ್ರಮ

Published:
Updated:
ಅಣ್ಣನ ನೆಲದಲ್ಲಿ ಶರಣ ಸಂಭ್ರಮ

ಕೂಡಲಸಂಗಮ: ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿ ಕೂಡಲ ಸಂಗಮ ಇಂತಹ ನಾಡಿನಲ್ಲಿ ಕಳೆದ 26 ವರ್ಷದಿಂದ ನಾಡಿನ ಎಲ್ಲ ಭಾಗದ ಶರಣರನ್ನು ಒಂದುಗೂಡಿಸಿ ಬಸವತತ್ವ ವಿಶ್ವವ್ಯಾಪಿಯಾಗಿ ಪ್ರಸಾರ ಮಾಡುತ್ತಿ ರುವ ಬಸವ ಧರ್ಮಪೀಠದ ಮಾತೆ ಮಹಾದೇವಿ ಹಾಗೂ ಇತರ ಶರಣ ತ್ಯಾಗಜೀವಿಗಳ ಕಾರ್ಯ ಮಹತ್ವ ದ್ದಾಗಿದೆ.

ವಿಶ್ವಗುರು ಬಸವಣ್ಣನವರ ವಿದ್ಯಾ ಭೂಮಿ, ಐಕ್ಯಕ್ಷೇತ್ರವಾದ ಕೂಡಲ ಸಂಗಮ ಇಂದು ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿ ಎಲ್ಲೆಡೆ ತನ್ನ ಕೀರ್ತಿಯನ್ನು ಪಸರಿಸಿದೆ.12ನೇ ಶತಮಾನದಲ್ಲಿ ಮೂಡ ನಂಭಿಕೆ, ಸಮಾಜದಲ್ಲಿಯ ಕಂದಾ ಚಾರಗಳ ವಿರುದ್ಧ ಹೋರಾಡಿದ ಅಣ್ಣನ ನೆಲದಲ್ಲಿ ಜನವರಿ 11 ರಿಂದ 15ರ ವರೆಗೆ ನಡೆಯುವ 5 ದಿನಗಳ ಶರಣ ಮೇಳ ಎಲ್ಲ ಬಸವ ಭಕ್ತರ ಒಂದು ಸಮ್ಮಿಲನದ ಕೇಂದ್ರವಾಗಿ ಕೂಡಲಸಂಗಮ ಇಂದು ರೂಪು ಗೊಂಡಿದೆ.ಮಹಾಮಾನವತಾವಾದಿ ಬಸವಣ್ಣ ನವರ ತತ್ವಗಳಲ್ಲಿ ಶ್ರದ್ಧೆ ವಿಶ್ವಾಸವಿರುವ ಬಸವ ಭಕ್ತರು  ಬಸವ ಧರ್ಮೀಯರು ಎಲ್ಲರೂ ವರ್ಷಕ್ಕೊಮ್ಮೆ ಯಾದರೂ ಒಂದು ಸ್ಥಳದಲ್ಲಿ ಸಮಾವೇಶ ವಾಗುವುದು ಅತ್ಯಂತ ಅವಶ್ಯಕ. ಪರಸ್ಪರರಲ್ಲಿ ಸಮಾನತೆ, ಸಹೋದರತ್ವ ಬೆಳೆಸಲು ಸಹಕಾರಿ ಯಾಗುವುದು ಎಂಬ ಉದ್ದೇಶದಿಂದ ಕೂಡಲ ಸಂಗಮದಲ್ಲಿ ಶರಣ ಮೇಳ ಪ್ರಾರಂಭಿಸಲಾಯಿತು.ಪ್ರಪ್ರಥಮಭಾರಿಗೆ 1988 ಜನವರಿ 11 ರಿಂದ 15ರ ವರೆಗೆ ಜರುಗಿತು. ಈ ಸಮ್ಮೇಳನದಲ್ಲಿ ಬಸವತತ್ವದ ದೇಶದ ಎಲ್ಲ ಮಠಾಧಿಶರ ಸಮುಖದಲ್ಲಿ ಮಾತೆ ಮಹಾದೇವಿ ಹಾಗೂ ಲಿಂಗಾನಂದ ಸ್ವಾಮಿಜಿ ಶರಣ ಮೇಳ ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ನಿರಂತರ ವಾಗಿ ಪ್ರತಿ ವರ್ಷ ಜನವರಿ 11 ರಿಂದ 15ರ ವರೆಗೆ 5 ದಿನಗಳ ಶರಣ ಮೇಳ ಕಳೆದ 25 ವರ್ಷಗಳಿಂದ ನಡೆದು ಕೊಂಡು ಬಂದಿದೆ.ಶರಣ ಮೇಳದಲ್ಲಿ ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ಲಿಂಗಪೂಜೆ, ಗಣಲಿಂಗ  ದರ್ಶನ, ಪ್ರಮುಖ ಧಾರ್ಮಿಕ ವಿಧಿಗಳು.ಜನವರಿ 14ರಂದು ಬೆಳಗ್ಗೆ ನಡೆಯುವ ಧ್ವಜಾರೋಹಣ ಪಥ ಸಂಚಲನ, ಸಮುದಾಯ ಪ್ರಾರ್ಥನೆ ನಿರಂತರವಾಗಿ ಕಳೆದ 26 ವರ್ಷದಿಂದ ನಡೆದುಕೊಂಡು ಬಂದಿದೆ.ಪ್ರತಿ ವರ್ಷ ಜನವರಿ 11 ರಿಂದ 15ರ ವರೆಗೆ ನಡೆಯುವ ಶರಣ ಮೇಳದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಎಂಬ ಎರಡು ಮುಖಗಳನ್ನು ಹೊಂದಿದೆ. ಸಾಮಾಜಿಕದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ರಾಷ್ಟ್ರೀಯ ಸಮಸ್ಯೆಗಳ ಕುರಿತು ಚರ್ಚಿ ಸಲಾಗುವುದು.ಧಾರ್ಮಿಕದಲ್ಲಿ ಬಸವತತ್ವ ಪ್ರಸಾರ  ಧಾರ್ಮಿಕ ವಿಚಾರಗಳ ಚರ್ಚೆ ಇರುವುದು.ಶರಣ ಮೇಳದ ದಾಸೋಹ ವ್ಯವಸ್ಥೆ ಅತ್ಯಂತ ಮಹತ್ವದಾಗಿದೆ. ಜೋತೆಗೆ ಲಿಂಗಪೂಜೆ, ಯೋಗಾಸನಗಳು, ಅನಾಥ ಮಕ್ಕಳು ಸಿದ್ಧಪಡಿಸಿದ ವಸ್ತು ಪ್ರದರ್ಶನ, ಅನಾಥ ಮಕ್ಕಳ ವಚನ ನೃತ್ಯ ಗಮನ ಸೆಳೆಯುವಂತಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry