ಅಣ್ಣನ ನೆಲದಲ್ಲಿ 100 ಕಾಯಕ ಜೀವಿಗಳಿಗೆ ಸನ್ಮಾನ

7

ಅಣ್ಣನ ನೆಲದಲ್ಲಿ 100 ಕಾಯಕ ಜೀವಿಗಳಿಗೆ ಸನ್ಮಾನ

Published:
Updated:

ಕೂಡಲಸಂಗಮ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ವತಿಯಿಂದ 4ನೇ ಬಸವ ಪಂಚಮಿಅಂಗವಾಗಿ ಗುರುವಾರ ನಡೆದ ಸಮಾರಂಭದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಒಂದು ನೂರು ಕಾಯಕ ಸಮಾಜಗಳ ನಾಯಕರಿಗೆ ಹಾಗೂ 2012-–13ನೇ ಸಾಲಿನಲ್ಲಿ ಎಸ್ಎಸ್ಎಲ್‌ಸಿಯಲ್ಲಿ ಅಧಿಕ ಅಂಕ ಪಡೆದ 14 ವಿದ್ಯಾರ್ಥಿಗಳಿಗೆ, ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಆರು ವಿದಾ್ಯರ್ಥಿಗಳಿಗೆ ಶ್ರೀಗಳು ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ಕೊಟ್ಟು ಆಶೀರ್ವದಿಸಿದರು.ಈ ಮೂಲಕ ಬಸವಣ್ಣನವರ ಮೂಲ ಉದ್ದೇಶವಾಗಿದ್ದ ಕಾಯಕ ತತ್ವದ ಅನುಷ್ಠಾನಕ್ಕಾಗಿ ವಿವಿಧ ಕಾಯಕದಲ್ಲಿ ನಿರತರಾದ 100 ಕಾಯಕ ಜೀವಿಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಯತ್ನ ಮಾಡಿದರು. ಸನ್ಮಾನ ಸಮಾರಂಭದಲ್ಲಿ ಕಾಯಕ ಜೀವಿಗಳಿಗೆ ಕಾಯಕದ ಬಣ್ಣವಾದ ಹಸಿರು ಶಾಲುಗಳನ್ನು ಶ್ರೀಗಳೇ ಹೊದಿಸಿ ಸ್ಮರಣಿಕೆ ಕೊಟ್ಟು ಆಶೀ­ರ್ವದಿ­ಸಿದರು. ನಾಗರಿಕತೆಯಿಂದ ಕಣ್ಮರೆ­ಯಾಗುತ್ತಿರುವ ಹಕಿ್ಕಪಿಕ್ಕಿ, ಸುಡುಗಾಡ ಸಿದ್ಧ ಜನಾಂಗ, ಹಸು ಕಾಯುವ ಜನಾಂಗ ಮುಂತಾದ ಕಾಯಕ ಪರಂಪರೆಯಲ್ಲಿ ತೊಡಗಿದ ಕಾಯಕ ಜೀವಿಗಳು ಸನ್ಮಾನದಿಂದ ಸಂತಸ ಪಟ್ಟರು.ನಂತರ ಶ್ರೀಗಳು, ‘ತಂತ್ರಜ್ಞಾನದ ಅಭಿವೃದಿ್ಧಿಯಿಂದ ಹಲವಾರು ಕಾಯಕ ಪರಂಪರೆಗಳು ಮಾಯ­ವಾಗು­ತ್ತಿವೆ, ಕೆಳವರ್ಗದ ಕೆಲವು ಜನಾಂಗಗಳನ್ನು ಮೇಲೆ ತರಲು ಕಾಯಕ ಜೀವಿಗಳನ್ನು ಗುರುತಿಸಿ ಅವರನು್ನ ಸನ್ಮಾನಿಸುವ ಮೂಲಕ ಅವರನ್ನು ಸಮಾಜದ ಮುಖ್ಯ­ವಾಹಿನಿಗೆ ತಂದು ಸರ್ಕಾರದ ಸೌಲಭ್ಯ ಪಡೆಯಲು ಮಠ ಮಾರ್ಗದರ್ಶನ ಮಠ ಮಾಡುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry