ಅಣ್ಣಾಗೆ ವಿದ್ಯಾರ್ಥಿಗಳ ಜೈಕಾರ

7

ಅಣ್ಣಾಗೆ ವಿದ್ಯಾರ್ಥಿಗಳ ಜೈಕಾರ

Published:
Updated:
ಅಣ್ಣಾಗೆ ವಿದ್ಯಾರ್ಥಿಗಳ ಜೈಕಾರ

ಚಾಮರಾಜನಗರ: ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹಕ್ಕೆ ನಗರದಲ್ಲಿ ಸೋಮವಾರ ವ್ಯಾಪಕ ಬೆಂಬಲ ವ್ಯಕ್ತವಾಯಿತು.ಎಬಿವಿಪಿ ನೇತೃತ್ವದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಜೆಎಸ್‌ಎಸ್ ಮಹಿಳಾ ಕಾಲೇಜು, ಸೇವಾಭಾರತಿ ಕಾಲೇಜು, ವಿಎಚ್‌ವಿ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಿಂದ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು, ಪಚ್ಪಪ್ಪ ವೃತ್ತದಲ್ಲಿ ರಸ್ತೆತಡೆ ನಡೆಸಿದರು. ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿ ಪ್ರಬಲ ಮಸೂದೆ ಜಾರಿಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.ಸೇವಾಭಾರತಿ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮುಖಂಡರಾದ ಎನ್.ಎಂ. ಶಿವರುದ್ರಸ್ವಾಮಿ, ನವೀನ್‌ಕುಮಾರ್, ಎನ್. ಮೋಹನ್‌ರಾಜ್, ಶ್ರೇಯಸ್, ಮುರಳಿ ಇತರರು ಇದ್ದರು.ಗುಂಡ್ಲುಪೇಟೆ ವರದಿ: ಹಜಾರೆ ಹೊರಾಟ ಹಾಳು ಮಾಡಲು ಕೇಂದ್ರ ಹುನ್ನಾರ ನಡೆಸಿದೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಿ.ಎಸ್. ನಿರಂಜನಕುಮಾರ್ ಟೀಕಿಸಿದರು.ಪಟ್ಟಣದಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಮುಖಂಡ ಎಚ್.ಎಸ್. ನಂಜಪ್ಪ, ಪುರಸಭಾ ಸದಸ್ಯ ಪಿ. ಗಿರೀಶ್, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಮೀನಾಕ್ಷಿ, ಜಿಲ್ಲಾ ಕಾರ್ಯದರ್ಶಿ ಗಾಯಿತ್ರಿ, ಮುಖಂಡರಾದ ಎಸ್. ಗೋವಿಂದರಾಜನ್, ಸಿ. ಹುಚ್ಚೇಗೌಡ, ಯುವ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ್,  ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಡಹಳ್ಳಿ ರಾಜು ಇತರರು ಇದ್ದರು.ಕೊಳ್ಳೇಗಾಲ ವರದಿ: `ಪ್ರಬಲ ಜನಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ನಡೆಸುತ್ತಿರುವ ಅಣ್ಣಾ ಹಜಾರೆ ಹೋರಾಟಕ್ಕೆ ರೈತ ಸಂಘದ ಬೆಂಬಲ ಇದೆ~ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಷಣ್ಮುಖಸ್ವಾಮಿ ಹೇಳಿದರು.`ಮಸೂದೆ ಬೆಂಬಲಿಸಿ ನಡೆಯುತ್ತಿರುವ ಆಹೋ ರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೈತ ಸಂಘದ ಮುಖಂಡ ಅಣಗಳ್ಳಿ ಬಸವರಾಜು ಮಾತನಾಡಿ ಮತ್ತಿತರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry