ಅಣ್ಣಾ ಚಳವಳಿಯ ರಾಜಕೀಯ ಬಣ್ಣ

7

ಅಣ್ಣಾ ಚಳವಳಿಯ ರಾಜಕೀಯ ಬಣ್ಣ

Published:
Updated:

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ಆರಂಭಿಸಿದ ಅವರ ತಂಡದ ಚಳವಳಿ ದಿನೇ ದಿನೇ ಪಡೆದು ಕೊಳ್ಳುತ್ತಿರುವ ರಾಜಕೀಯ ತಿರುವು ಯಾರೂ ಮೆಚ್ಚುವಂಥದ್ದಲ್ಲ. ದೇಶದ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ಧವೂ ಅವರು ಚಳವಳಿ ಮಾಡಿದ್ದರೆ ಅದಕ್ಕೆ ಸಮರ್ಥನೆ ಇರುತ್ತಿತ್ತು. ಅದು ಬಿಟ್ಟು, ಹರಿಯಾಣದ ಉಪಚುನಾವಣೆ ಸಂದ ರ್ಭದಲ್ಲಿ ಕೇವಲ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರ ಮಾಡಿರುವುದು ಸರಿಯಲ್ಲ. ಇದರಿಂದ ಅಣ್ಣಾ ತಂಡದ ರಾಜಕೀಯ ಬಣ್ಣ ಬಯಲಾದಂತಾಗಿದೆ.

ಪ್ರಾಯಶಃ ಇಂಥ ರಾಜಕೀಯ ಧೋರಣೆಯ ಪರಿಣಾಮವಾಗಿ, ನಿವೃತ್ತ ಲೋಕಾಯುಕ್ತರಾದ ನ್ಯಾ.ಸಂತೋಷ ಹೆಗ್ಡೆ ಅವರು ಅಣ್ಣಾ ಹಜಾರೆ ತಂಡದ ಈ ನಿರ್ಧಾರದಿಂದ ದೂರ ಸರಿಯಲು ತೀರ್ಮಾನಿಸಿರುವುದು ಸಮಯೋಚಿತವಾಗಿದೆ. ಅಣ್ಣಾ ಹಜಾರೆ ಸಂಸತ್‌ಗಿಂತಲೂ ದೊಡ್ಡವರು ಎಂಬ ಅರವಿಂದ ಕೇಜ್ರಿವಾಲರ ಹೇಳಿಕೆಯನ್ನು ಸಂವಿಧಾನ ಪರಿಣತರಾದ ನ್ಯಾ. ಸಂತೋಷ ಹೆಗ್ಡೆ ಅವರೂ ಮೆಚ್ಚಲು ಸಾಧ್ಯವೇ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry