ಬುಧವಾರ, ಅಕ್ಟೋಬರ್ 23, 2019
27 °C

ಅಣ್ಣಾ ಚಳವಳಿ ಹಿಂದಕ್ಕೆ: ಎಸ್‌ಯುಸಿಐ ಅಚ್ಚರಿ

Published:
Updated:

ಧಾರವಾಡ: ಇತ್ತೀಚೆಗೆ ಮುಂಬೈನಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಅಣ್ಣಾ ಹಜಾರೆ ಅವರು ಏಕಾಏಕಿ ವಾಪಸ್ ಪಡೆದಿದ್ದಕ್ಕೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಪಕ್ಷವು ಅಚ್ಚರಿ ವ್ಯಕ್ತಪಡಿಸಿದೆ.`ಲೋಕಸಭೆಯಲ್ಲಿ ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ-2011 ಏನೂ ಸಾಧನೆಯಾಗಿಲ್ಲ. ಪ್ರಧಾನಿ ಮತ್ತು ಸದನವು ನೀಡಿರುವ ಆಶ್ವಾಸನೆಯಿಂದ ಕೇಂದ್ರದ ಯುಪಿಎ ಸರ್ಕಾರ ಹಿಂದೆ ಸರಿದಿದೆ. ಜನ ಚಳವಳಿಯು ಬಲಗೊಳ್ಳುವ ಮುನ್ನವೇ, ಏಕಾಏಕಿ ಚಳವಳಿ ನಿಲ್ಲಿಸುವ ಅಣ್ಣಾ ತಂಡದ ತೀರ್ಮಾನವು ಹೋರಾಟದ ಕಾವನ್ನು ತಣ್ಣಗಾಗಿಸುತ್ತದೆ. ಸರ್ಕಾರವನ್ನು ಬಲಗೊಳಿಸಿದಂತೆ ಆಗುತ್ತದೆ~ ಎಂದು ಟೀಕಿಸಿದ್ದಾರೆ.ಕೇಂದ್ರ ಅಥವಾ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವ ಎಲ್ಲ ದೊಡ್ಡ ಮತ್ತು ಸಣ್ಣ, ಬಂಡವಾಳಶಾಹಿ ಪಕ್ಷಗಳು ಭ್ರಷ್ಟಾಚಾರದಲ್ಲಿ ನಿರತವಾಗಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗಾಗಿ ಚುನಾವಣೆಯಲ್ಲಿ ಒಂದು ಪಕ್ಷ ಅಥವಾ ರಂಗವನ್ನು ಸೋಲಿಸಿ, ಇನ್ನೊಂದು ಪಕ್ಷ ಅಥವಾ ರಂಗವನ್ನು ಅಧಿಕಾರಕ್ಕೆ ತರುವುದರಿಂದ ಇಂತಹ ಕ್ರಮವು ಜನರಲ್ಲಿ ಚುನಾವಣಾ ಭ್ರಮೆಯನ್ನು ಸೃಷ್ಟಿಸುವ ಮೂಲಕ ಭ್ರಷ್ಟಾಚಾರ ಮತ್ತು ಇತರ ಸಮಸ್ಯೆಗಳ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ತಳಮಟ್ಟದಿಂದ ಹೋರಾಟ ಸಮಿತಿ ರಚಿಸಿಕೊಂಡು ಸರಿಯಾದ ಮಾರ್ಗದಲ್ಲಿ ಭ್ರಷ್ಟಾಚಾರದ ವಿರುದ್ಧ ಚಳವಳಿಗಳನ್ನು ಕಟ್ಟಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)