ಗುರುವಾರ , ಜನವರಿ 23, 2020
28 °C

ಅಣ್ಣಾ ಟ್ರಸ್ಟ್ ವಿರುದ್ಧ ತನಿಖೆ: ಅರ್ಜಿ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಅಣ್ಣಾ ಹಜಾರೆ ಅವರ ಟ್ರಸ್ಟ್ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಪುಣೆ ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಂಬೈ ಹೈಕೋರ್ಟ್ ತಳ್ಳಿಹಾಕಿದೆ.ಅಣ್ಣಾ ಅವರ ಹಿಂದ್ ಸ್ವರಾಜ್ ಟ್ರಸ್ಟ್, 2005ರಿಂದ 2007ರ ಅವಧಿಯಲ್ಲಿನ ಹಣಕಾಸು ವ್ಯವಹಾರ ಕುರಿತ ವರದಿಯನ್ನು ದತ್ತಿ ಆಯುಕ್ತರಿಗೆ ಸಲ್ಲಿಸದೇ ಇರುವ ಹಿನ್ನೆಲೆಯಲ್ಲಿ, ಆದಾಯ ತೆರಿಗೆ ಮತ್ತು ದತ್ತಿ ಇಲಾಖೆಗಳಿಂದ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಪುಣೆಯ ರಾಷ್ಟ್ರೀಯ ಭ್ರಷ್ಟಾಚಾರ್ ವಿರೋಧಿ ಜನಶಕ್ತಿ ಸಂಘಟನೆಯ ಅಧ್ಯಕ್ಷ ಹೇಮಂತ್ ಪಾಟೀಲ್ ಒತ್ತಾಯಿಸಿದ್ದರು.ಸಮಸ್ಯೆ ಪರಿಹಾರಕ್ಕೆ ದತ್ತಿ ಆಯುಕ್ತರನ್ನು ಭೇಟಿ ಮಾಡುವಂತೆ ನ್ಯಾಯಪೀಠ ಅವರಿಗೆ ಆದೇಶಿಸಿದೆ.

ಪ್ರತಿಕ್ರಿಯಿಸಿ (+)