ಭಾನುವಾರ, ಅಕ್ಟೋಬರ್ 20, 2019
25 °C

ಅಣ್ಣಾ ತಂಡದಲ್ಲಿ ಗೊಂದಲ

Published:
Updated:

ಗಾಜಿಯಾಬಾದ್,  (ಪಿಟಿಐ): ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅನಾರೋಗ್ಯಕ್ಕೀಡಾಗಿದ್ದು, ಅವರ ಅನುಪಸ್ಥಿತಿಯಲ್ಲಿಯೂ ಭ್ರಷ್ಟಾಚಾರ ವಿರೋಧಿ ಹೋರಾಟ ಮುಂದುವರಿಸಿಕೊಂಡು ಹೋಗಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೋಮವಾರ ಇಲ್ಲಿ ನಡೆದ ಅಣ್ಣಾ ತಂಡದ ಪ್ರಮುಖರ ಸಭೆಯಲ್ಲಿ ಚರ್ಚಿಸಲಾಯಿತು.ಹೋರಾಟವನ್ನು ಹೇಗೆ ಮುಂದುವರಿಸಿಕೊಂಡು ಹೋಗಬೇಕು ಎಂಬ ಬಗ್ಗೆ ತಂಡ ಗೊಂದಲದಲ್ಲಿದ್ದು ಅಂತಿಮ ನಿರ್ಧಾರವನ್ನು ಅಣ್ಣಾಅವರ ವಿವೇಚನೆಗೆ ಬಿಡಲಾಯಿತು.  ಲೋಕಪಾಲ ವಿಷಯದಲ್ಲಿ ಕೇವಲ ಕಾಂಗ್ರೆಸ್ ಪಕ್ಷವನ್ನು ಮಾತ್ರ ಗುರಿಯಾಗಿಸಿಕೊಳ್ಳಬಾರದು ಎಂದು ಕಾರ್ಯಕರ್ತರಾದ ಮೇಧಾ ಪಾಟ್ಕರ್ ಮತ್ತು ಇತರರು ಸಭೆಗೆ ಟಿಪ್ಪಣಿ ಕಳಿಸಿದ್ದರು.   ಅನಾರೋಗ್ಯದ ಪ್ರಯುಕ್ತ ಅಣ್ಣಾ ಹಜಾರೆ ಈ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಮೇಧಾ ಕೂಡಾಗೈರು ಹಾಜರಿದ್ದರು.   ತಂಡದ ಅರವಿಂದ ಕೇಜ್ರಿವಾಲ್, ಪ್ರಶಾಂತ ಭೂಷಣ, ಕಿರಣ್ ಬೇಡಿ ಇತರ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.ಐದು ರಾಜ್ಯಗಳ ಚುನಾವಣಾ ಪ್ರಚಾರದ ವೇಳೆ ಅನುಸರಿಸಬೇಕಾದ ವಿಧಾನಗಳು ಮತ್ತು ಹೋರಾಟ ಮುಂದವರಿಸಿಕೊಂಡು ಹೋಗುವ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲಾಯಿತು ಎಂದು ಅಣ್ಣಾ ತಂಡದ ಸದಸ್ಯರು ಹೇಳಿದರು.ಅರವಿಂದ ಕೇಜ್ರಿವಾಲ್ ಅವರು ಹೋರಾಟ ಮುಂದುವರಿಸಿಕೊಂಡು ಹೋಗುವ ಬಗ್ಗೆ ಅಣ್ಣಾ ತಂಡ ಗೊಂದಲದಲ್ಲಿದೆ ಎಂಬ ಲೇಖನ ಬರೆದಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ಹೋರಾಟ ಈಗ ಸಂದಿಗ್ಧ ಸ್ಥಿತಿಯಲ್ಲಿದ್ದರಿಂದ ಲೇಖನ ಆಘಾತಕಾರಿ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ವಿರೋಧಿ ಮತ್ತು ಬಿಜೆಪಿ ಪರ ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಅಣ್ಣಾ ಸದಸ್ಯರು ಹೇಳಿದರು. ಪ್ರಬಲ ಲೋಕಪಾಲ ಜಾರಿಗೆ ಒತ್ತಾಯಿಸಿ ಅಣ್ಣಾ ಕಳೆದ ಹೋರಾಟ ಕೊನೆಗೊಳಿಸಿದ ಬಳಿಕ ನಡೆದ ಪ್ರಥಮ ಸಭೆ ಇದಾಗಿದೆ.

Post Comments (+)