ಅಣ್ಣಾ ತಂಡದಿಂದ ಸಿ.ಡಿ ಬಿಡುಗಡೆ

7

ಅಣ್ಣಾ ತಂಡದಿಂದ ಸಿ.ಡಿ ಬಿಡುಗಡೆ

Published:
Updated:

ಅಹಮದ್‌ನಗರ್ (ಪಿಟಿಐ): ಮಹಾರಾಷ್ಟ್ರದ ಜಿಲ್ಲಾ ಪರಿಷತ್ ಮತ್ತು ನಗರಪಾಲಿಕೆಗಳ ಚುನಾವಣೆ ಹಿನ್ನೆಲೆಯಲ್ಲಿ ಧ್ವನಿಮುದ್ರಿತ ಸಿ.ಡಿ ಬಿಡುಗಡೆ ಮಾಡಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ತಂಡ, ಉತ್ತಮ ಚಾರಿತ್ರ್ಯ ಸಮರ್ಥ ಅಭ್ಯರ್ಥಿಯನ್ನು ಚುನಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದೆ.ಜಾತಿ, ಧರ್ಮ, ಭಾಷೆ ಇನ್ನಿತರ ವಿಷಯಗಳಿಗೆ ಮರುಳಾಗದೆ ಕಳಂಕ ರಹಿತರಿಗೆ ಮತ ನೀಡುವಂತೆ ವಿನಂತಿಸಿಕೊಂಡಿದೆ.ಅಣ್ಣಾ ಹಜಾರೆ ಅವರ ಸಂದೇಶವೂ ಇರುವ ಈ ಸಿ.ಡಿಯಲ್ಲಿ ಜಾಗೃತಿ ಮೂಡಿಸುವಂತಹ ಹಾಡುಗಳೂ ಇವೆ. 2 ಲಕ್ಷ ಪ್ರತಿಗಳನ್ನು ರಾಜ್ಯದಾದ್ಯಂತ ಹಂಚುವ ಗುರಿಯನ್ನು ಅಣ್ಣಾ ತಂಡ ಹೊಂದಿದೆ. ಫೆ. 7ರಂದು ಜಿಲ್ಲಾ ಪರಿಷತ್‌ಗಳಿಗೆ ಮತ್ತು 16ರಂದು 10 ನಗರಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry