ಅಣ್ಣಾ ತಂಡದ ಗಾಂಧಿಗಿರಿ

ಬುಧವಾರ, ಮೇ 22, 2019
24 °C

ಅಣ್ಣಾ ತಂಡದ ಗಾಂಧಿಗಿರಿ

Published:
Updated:

ಧನ್‌ಬಾದ್,(ಪಿಟಿಐ):ಅಣ್ಣಾ ಹಜಾರೆ ನೇತೃತ್ವದ `ಇಂಡಿಯಾ ಅಗೈನೆಸ್ಟ್ ಕರಪ್ಷನ್~ ತಂಡವು ಭ್ರಷ್ಟಾಚಾರ ನಿರ್ಮೂಲನೆಗೆ ಹೊಸ ಮಾರ್ಗವನ್ನು ಅನುಸರಿಸುತ್ತಿದೆ. ಇದನ್ನು ಅಣ್ಣಾಗಿರಿ ಎಂದಾದರೂ ಕರೆಯಬಹುದು ಅಥವಾ ಗಾಂಧಿಗಿರಿ ಎಂದಾದರೂ ಹೇಳಬಹುದು.

ಜಾರ್ಖಂಡ್‌ನ ಕಲ್ಲಿದ್ದಲು ಪಟ್ಟಣದ ಸರ್ಕಾರಿ ಅಧಿಕಾರಿಗಳಿಗೆ ಈ ತಂಡದ ಸದಸ್ಯರು ಗುಲಾಬಿ ಹೂವು ಮತ್ತು ಗಾಂಧಿ ಟೋಪಿ ನೀಡುವ ಮೂಲಕ ಹೊಸ ಆಂದೋಲವನ್ನು ಆರಂಭಿಸಿದ್ದಾರೆ.

 

`ನಾನು ಅಣ್ಣಾ~ ಎಂಬ ಬರಹವುಳ್ಳ ಗಾಂಧಿ ಟೋಪಿ ಮತ್ತು ಗುಲಾಬಿ ಹೂವಿನ ಗುಚ್ಛವನ್ನು ನೀಡಿ ಭ್ರಷ್ಟಾಚಾರ ನಿರ್ಮೂಲನೆಗೆ ಸಹಕಾರ ನೀಡಿ ಎಂದು ಕಾರ್ಯಕರ್ತರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು  `ಇಂಡಿಯಾ ಅಗೆನೆಸ್ಟ್ ಕರಪ್ಷನ್~ ತಂಡದ ಸ್ಥಳೀಯ ಘಟಕದ ಸಂಚಾಲಕ ವಿಜಯ್ ಝಾ ಅವರು ತಿಳಿಸಿದ್ದಾರೆ.`ನಮ್ಮ ತಂಡದ ಸದಸ್ಯರು ಪ್ರತಿ ದಿನ ವಾಣಿಜ್ಯ ತೆರಿಗೆ ಇಲಾಖೆ, ಸಾರಿಗೆ ಇಲಾಖೆ, ನೋಂದಣಿ ಇಲಾಖೆ ಮತ್ತು ಇತರ ಪ್ರಮುಖ ಸರ್ಕಾರಿ ಕಚೇರಿಗಳ ಅಧಿಕಾರಿಗಳಿಗೆ ಟೋಪಿ ಮತ್ತು ಹೂವುಗಳನ್ನು ನೀಡುತ್ತಿದ್ದಾರೆ~ ಎಂದು ಝಾ ತಿಳಿಸಿದ್ದಾರೆ.

ಹೂವು, ಟೋಪಿ ಜತೆಗೆ ಮನವಿ ಪತ್ರವನ್ನೂ ಸಲ್ಲಿಸಲಾಗುತ್ತಿದ್ದು. ಕಚೇರಿಯಲ್ಲಿ ನಿಗದಿತ ಅವಧಿಗಿಂತ ಹೆಚ್ಚು ಸಮಯವಿದ್ದು ಸಾರ್ವಜನಿಕರ ಕೆಲಸ ಮಾಡಿಕೊಡುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.ಇತ್ತೀಚೆಗೆ ಜಾರ್ಖಂಡ್ ವಿಧಾನಸಭೆಯು ಅಂಗೀಕರಿಸಿರುವ ಸೇವಾ ಹಕ್ಕು ಕಾಯ್ದೆ ಪೂರ್ತಿಯಾಗಿ ಜಾರಿಯಾಗಬೇಕು ಎಂದು ಒತ್ತಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ.ಕಚೇರಿ ಕೆಲಸದಲ್ಲಿ ಪಾರದರ್ಶಕತೆ ತರುವುದರ ಬಗ್ಗೆ ಬಹುತೇಕ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್‌ನಾಥ್ ತಿವಾರಿ ತಿಳಿಸಿದ್ದಾರೆ.`ಅಣ್ಣಾ ತಂಡದವರ ಉದ್ದೇಶವನ್ನು ನಾವು ಸ್ವಾಗತಿಸುತ್ತೇವೆ, ಸರ್ಕಾರಿ ನೌಕರರು ಕಚೇರಿಯಲ್ಲಿದ್ದು ಸಾರ್ವಜನಿಕರ ಕೆಲಸ ಮಾಡಿಕೊಡುವ ಜವಾಬ್ದಾರಿಯ ಬಗ್ಗೆ ತಿಳಿಹೇಳುವುದರಲ್ಲಿ ತಪ್ಪಿಲ್ಲ~ ಎಂದು ಆದಾಯ ಕರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry