ಭಾನುವಾರ, ಏಪ್ರಿಲ್ 11, 2021
25 °C

ಅಣ್ಣಾ ಪರ್ಯಾಯ ರಾಜಕೀಯ ಚಿಂತನೆಗೆ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಣ್ಣಾ ಪರ್ಯಾಯ ರಾಜಕೀಯ ಚಿಂತನೆಗೆ ಸ್ವಾಗತ

ಶಿವಮೊಗ್ಗ: ವಿವಿಧ ರಾಜಕೀಯ ಪಕ್ಷಗಳಲ್ಲಿ ಕೆಲವರು ಪ್ರಾಮಾಣಿಕರಿದ್ದು, ಉಸಿರುಗಟ್ಟಿದ ಸ್ಥಿತಿಯಲ್ಲಿದ್ದಾರೆ. ಅವರೆಲ್ಲರೂ ಅಣ್ಣಾ ಹಜಾರೆ ಅವರ ರಾಜಕೀಯ ಪರ್ಯಾಯ ವ್ಯವಸ್ಥೆಯಲ್ಲಿ ಕೈಜೋಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಆಹ್ವಾನ ನೀಡಿದರು.ನಗರದ ನೆಹರು ಕ್ರೀಡಾಂಗಣದ ಎದುರಿನ ಅಣ್ಣಾ ಮಂಟಪದಲ್ಲಿ ಜಿಲ್ಲಾ ಅಣ್ಣಾ ಹಜಾರೆ ಹೋರಾಟ ಸಮಿತಿ ಒಂದು ವಾರದಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.ರೈತ ಸಂಘ ಬಹಳ ಹಿಂದೆಯೇ ರಾಜಕೀಯ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಿತ್ತು. ಆದರೆ, ಅದು ಫಲಪ್ರದವಾಗಿರಲಿಲ್ಲ. ಈಗ ಅಣ್ಣಾ ಅಂತಹದೊಂದು ಚಿಂತನೆ ನಡೆಸಿರುವುದು ಸ್ವಾಗತಾರ್ಹ. ಅದನ್ನು ಸಾಕಾರಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳಿರುವ ಪ್ರಾಮಾಣಿಕರು ಒಂದೇ ವೇದಿಕೆಯಡಿ ಬರಬೇಕು.ಮುಂದೆ ನಾವೇ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಇಳಿಯುವುದಿಲ್ಲ ಎಂಬುದು ಎಷ್ಟು ಖಾತ್ರಿ? ಹಾಗಾಗಿ ನಮ್ಮನ್ನೂ ಪ್ರಶ್ನಿಸಲು ಪ್ರಬಲ ಜನ ಲೋಕಪಾಲ ಮಸೂದೆ ಅಗತ್ಯ ಎಂದು ಅವರು ಪ್ರತಿಪಾದಿಸಿದರು.ರೈತ ಮುಖಂಡ ಕಡಿದಾಳು ಶಾಮಣ್ಣ, ಮುಖಂಡರಾದ ಡಾ.ಬಿ. ಎಂ. ಚಿಕ್ಕಸ್ವಾಮಿ, ವೈ.ಜಿ. ಮಲ್ಲಿಕಾರ್ಜುನ್, ಹಿಟ್ಟೂರು ರಾಜು, ಕೆ. ರಾಘವೇಂದ್ರ, ಡಿ.ಎಂ. ಚಂದ್ರಪ್ಪ, ಹೋರಾಟ ಸಮಿತಿ ಅಧ್ಯಕ್ಷ ಕೆ.ವಿ. ವಸಂತಕುಮಾರ್, ಮಂಜುಳಾದೇವಿ, ಡಾ.ಸತೀಶ್‌ಕುಮಾರ್ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.