ಅಣ್ಣಾ ಹಜಾರೆ

7

ಅಣ್ಣಾ ಹಜಾರೆ

Published:
Updated:
ಅಣ್ಣಾ ಹಜಾರೆ

ಹೆಸರು ಕಿಶನ ಹಜಾರೆ

ತಂದೆ ಬಾಬುರಾವ ಹಜಾರೆ

ಊರು ಮಹಾರಾಷ್ಟ್ರದ ಭಿಂಗಾರ

ಅನ್ನದ ನೆಲೆ ರಾಳೇಗಣ ಸಿದ್ಧಿ

ಸೇನೆಗೆ ಸೇರಿ ಟ್ರಕ್ ಚಾಲಕನಾಗಿ

ದೇಶದ ಸೇವೆಗೆ ಮನಮುಡಿಪಾಗಿ

ಯುದ್ಧದಿ ಸಾವಿನ ಚಿತ್ರವ ಕಂಡು

ಹೊಂದಿದರು ಸ್ವಯಂನಿವೃತ್ತಿ

ರಾಳೇಗಣ ಸಿದ್ಧಿಗೆ ಮರಳಿ ಬಂದು

ಜನತಾ ಜನಾರ್ದನರ ಸೇವೆಗೆ ನಿಂದು

ಗ್ರಾಮವೇ ದೇಗುಲ ಮಾಡಿಕೊಂಡು

ಜನಸೇವೆಗೆ ತಾ ಎಂದೂ ಮುಂದು

ಗಾಂಧಿಮಾರ್ಗ ಸ್ವಾವಲಂಬನೆ ಮಂತ್ರ

ಜಲಮೂಲಗಳ ಪುನಶ್ಚೇತನಗೊಳಿಸಿ

ರೈತರ ಮುಖದಿ ಗೆಲುವನು ಕಂಡು

ಸಂತಸ ನೂರ್ಮಡಿ ಹೊಂದಿದರು

ಜೈವಿಕ ಅನಿಲ ಬಳಸಲು ಹೇಳಿ

ಹೈನುಗಾರಿಕೆಗೆ ಒತ್ತನು ನೀಡಿ

ಸಾಕ್ಷರತೆಯ ಪಡೆಯಲು ನುಡಿದು

ಸಹಕಾರಿ ಸಂಘವ ಮಾಡಿದರು

ಕುಗ್ರಾಮದಿಂದಲೇ ಗಮನವ ಸೆಳೆದು

ಕಿಸನ ಹಜಾರೆಯು ಅಣ್ಣನು ಆಗಿ

ಮಾಡಿದ ಸಾಧನೆಗೆ ಮನ್ನಣೆ ಪಡೆದು

ರಾಷ್ಟ್ರದಿ ಲಕಲಕ ಮಿಂಚಿದರು

ಭ್ರಷ್ಟಾಚಾರ ವಿರೋಧಿ ಚಳವಳಿ

ರೂಪಿಸಿ ಜನಮನ ಮಾನಸದಿ

ಮಾಹಿತಿ ಹಕ್ಕು ಕಾಯ್ದೆಯ ಹೇಳಿ

ಕೋಟ್ಯಂತರ ಜನಗಳ ತಲುಪಿದರು

ನೈತಿಕ ಆಶಾವಾದವ ಮೂಡಿಸಿ

ನಿರಶನದಿಂದ ನಿರೀಕ್ಷೆಯ ಹುಟ್ಟಿಸಿ

ಹೊಸ ಬದಲಾವಣೆಗೆ ದನಿಯನು ನೀಡಿ

ಜೀವಂತ ಸಾಕ್ಷಿಯು ಎನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry