ಸೋಮವಾರ, ಮೇ 17, 2021
28 °C

ಅಣ್ಣಾ ಹೋರಾಟ ಪ್ರಗತಿಪರವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ಕಳೆದ ಹಲವು ದಶಕಗಳಿಂದ ದೇಶದಲ್ಲಿ ದಲಿತ, ಸ್ತ್ರೀಪರ, ರೈತ ಚಳುವಳಿಗಳು ದುರ್ಬಲವಾಗಿ ರುವುದರಿಂದ ಅಣ್ಣಾ ಹಜಾರೆ ಹೋರಾಟ ಜನಪ್ರಿಯವಾಗಿ ಕಾಣಿಸುತ್ತಿದೆಯೇ ವಿನಾ ಅದು ಜನಪರ ಹೋರಾಟವಲ್ಲ~ ಎಂದು ಕವಿ ಕೆ.ಬಿ.ಸಿದ್ದಯ್ಯ ನುಡಿದರು.ಜನಲೋಕಪಾಲ್ ಮಸೂದೆ ಹಾಗೂ ಅಣ್ಣಾ ಹಜಾರೆ ಹೋರಾಟವನ್ನು ವಿರೋಧಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಮಂಗಳವಾರ ಹಾಸನ ದಲ್ಲಿ ಆಯೋಜಿಸಿದ್ದ `ಸಂವಿಧಾನ ಉಳಿಸಿ ಭ್ರಷ್ಟಾ ಚಾರ ಅಳಿಸಿ~ ಪ್ರತಿಭಟನೆ ಮತ್ತು ವಿಚಾರಸಂಕಿರಣ ದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.`ಇಂದು ನಾಗರಿಕ ಸಮಿತಿ ಹೆಸರಿನಲ್ಲಿ ಮಸೂದೆ ಅಂಗೀಕಾರಕ್ಕೆ ಒತ್ತಾಯಿಸುವವರು ನಾಳೆ ಸಂವಿಧಾ ನವನ್ನು ಕೈಬಿಡಿ ಎಂದು ಒತ್ತಾಯಿಸುವ ಅಪಾಯ ವಿದೆ. ಸಂವಿಧಾನ ಸ್ಥಾಪನೆಯಾದ ದಿನದಿಂದಲೇ ಒಂದು ವರ್ಗ ಅದರ ವಿರುದ್ಧವಾಗಿ ಕೆಲಸ ಮಾಡುತ್ತ ಬಂದಿದೆ. ಬರಿಯ ಭಾವಾವೇಶದಿಂದ ಭ್ರಷ್ಟಾಚಾರವನ್ನು ನಿಗ್ರಹಿಸಲು ಸಾಧ್ಯವಿಲ್ಲ.ಇಡೀ ಜನಸಮೂಹ ಅದರ ವಿರುದ್ಧ ಹೋರಾಡಬೇಕು. ಅಣ್ಣಾ ಹಜಾರೆ ಹೋರಾಟ ಆರಂಭಿಸುವ ಸಂದರ್ಭದಲ್ಲಿ ರೈತ ಸಂಘ, ದಲಿತ ಸಂಘರ್ಷ ಸಮಿತಿ ಮುಂತಾದ ಸಂಘಟನೆಗಳು ಸ್ಪಷ್ಟವಾದಂಥ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗದಿರುವುದರಿಂದ ಈ ಹೋರಾಟ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಪಡೆಯುವಂತಾಯಿತು~ ಎಂದು ಅವರು ನುಡಿದರು.ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್, ` ಅಣ್ಣಾ ಅವರು ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಅನೇಕ ಮಂದಿ ನನ್ನ ಕಚೇರಿಗೂ ಬಂದಿದ್ದರು. `ನಾನು ಹಲವರಿಂದ ಪಡೆದ ಶುಲ್ಕಕ್ಕೆ ರಸೀದಿ ನೀಡಿಲ್ಲ, ಆದ್ದರಿಂದ ಹೋರಾಟದಲ್ಲಿ ಪಾಲ್ಗೊಳ್ಳುವ ನೈತಿಕ ಹಕ್ಕು ನನಗೆ ಇಲ್ಲ~ ಎಂದು ಅವರನ್ನು ಕಳುಹಿಸಿದ್ದೆ. ಇದೇ ಮಾತು ಸಂತೋಷ ಹೆಗ್ಡೆ ಅವರಿಗೂ ಅನ್ವಯಿಸುತ್ತದೆ.ಹಿಂದೆ ವಕೀಲರಾಗಿದ್ದ ಸಂದರ್ಭದಲ್ಲಿ ಅವರು ಹಲವರಿಂದ ಶುಲ್ಕ ಪಡೆದಿದ್ದಾರೆ. ಅದಕ್ಕೆ ರಸೀದಿ ನೀಡಿದ್ದಾರೆಯೇ ಎಂಬುದಕ್ಕೆ ಅವರು ಉತ್ತರಿಸಬೇಕು. ಅವರು ವಕೀಲರಾಗಿದ್ದ ಸಂದರ್ಭದಲ್ಲಿ ಹಲವು ಹಗರಣಗಳಲ್ಲಿ ಸಿಲುಕಿದ್ದವರ ಪರ ಅವರು ವಾದಿಸಿದ್ದರು. ಅದು ಭ್ರಷ್ಟಾಚಾರವಲ್ಲವೇ ? ಹೈಕೋರ್ಟ್ ಬಾರ್‌ನಿಂದ ನೇರವಾಗಿ ಹೈಕೋರ್ಟ್ ಬೆಂಚ್‌ಗೆ ನ್ಯಾಯಾಧೀಶ ರಾಗಿ ಆಯ್ಕೆಯಾಗಿರುವ ಉದಾಹರಣೆಗಳಿವೆ. ಆದರೆ ಎನ್‌ಡಿಎ ಅಧಿಕಾರದಲ್ಲಿದ್ದಾಗ ಸಂತೋಷ ಹೆಗ್ಡೆ ಅವರು ಹೈಕೋರ್ಟ್ ಬಾರ್‌ನಿಂದ ನೇರವಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಆಯ್ಕೆಯಾ ಗಿದ್ದು ಹೇಗೆ ? ಎಂದು ದ್ವಾರಕಾನಾಥ್ ಪ್ರಶ್ನಿಸಿದರು.ಅಣ್ಣಾ ಹಜಾರೆ ಹೋರಾಟವನ್ನು ವಿರೋಧಿಸಿದ ದ್ವಾರಕಾನಾಥ್, `ಇಲ್ಲಿ ಅಣ್ಣಾ ಒಂದು ಭ್ರಮೆ ಮಾತ್ರ. ಅವರ ಸುತ್ತ ಇರುವವರ ಉದ್ದೇಶವೇ ಬೇರೆ. ಕೇಜ್ರಿವಾಲ್  ತನ್ನ ಸರ್ಕಾರೇತರ ಸಂಸ್ಥೆಗೆ ಕೋಟ್ಯಂತರ ಡಾಲರ್ ಅನುದಾನ ಪಡೆಯು ತ್ತಿದ್ದಾರೆ, ಶಾಂತಿಭೂಷಣ ನ್ಯಾಯಾಲಯದಲ್ಲಿ ಒಂದು ಬಾರಿ ವಾದಿಸಲು ಲಕ್ಷಾಂತರ ರೂಪಾಯಿ ಶುಲ್ಕ ಪಡೀತಾರೆ.ಇಡೀ ಹೋರಾಟದಲ್ಲಿ ಸಂಘ ಪರಿವಾರ, ಎಬಿವಿಪಿ, ಬಿಜೆಪಿಯವರು ಮಾತ್ರ ಇದ್ದರು. ಬಹುಸಂಖ್ಯಾತರಿಗೆ ಇವರ ಜನಲೋಕ ಪಾಲ್‌ನಲ್ಲಿ ಪ್ರಾತಿನಿಧ್ಯ ಇಲ್ಲ. ಸಂವಿಧಾನವನ್ನು ಮೀರಿಸುವಂಥ ಒಂದು ಸಂಸ್ಥೆಯನ್ನು ಆರಂಭಿಸು ವುದು ಇವರ ಉದ್ದೇಶ. ಈ ಪ್ರಕರಣದಲ್ಲಿ ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳೂ ಸಹ ಜನರ ಹಾದಿ ತಪ್ಪಿಸಿವೆ ಎಂದು ಆರೋಪಿಸಿದರು.ಸಾಹಿತಿ ನಟರಾಜ ಬೂದಾಳ ಮಾತನಾಡಿ, `ಜಾತಿಗಿಂತ ಹೆಚ್ಚಾಗಿ ಸಾಂಸ್ಕೃತಿಕ ರಾಜಕಾರಣ ಇಂದು ಅಧಿಕಾರವನ್ನು ನಿಯಂತ್ರಿಸುತ್ತಿದೆ. ಭ್ರಷ್ಟಾಚಾರದ ವಿರೋಧವನ್ನು ಎಲ್ಲರೂ ವಿರೋಧಿಸಲೇಬೇಕಾ ಗುತ್ತದೆ.ಇದನ್ನು ಮುಂದಿಟ್ಟುಕೊಂಡು ಬೇರೆ ಉದ್ದೇಶವನ್ನು ಸಾಧಿಸುವ ಹುನ್ನಾರ ನಡೆಸಿದ್ದಾರೆ. ಈಚೆಗೆ ರಾಜ್ಯದ ಒಂದು ವಿಶ್ವವಿದ್ಯಾಲಯ ಅಧ್ಯಯನ ನಡೆಸಿ ದೇಶದಲ್ಲಿ ಈಗ ಜಾತಿ ಎಂಬುದು ವಾಸ್ತವವಲ್ಲ ಎಂಬ ವರದಿ ನೀಡಿದೆ. ಮುಂದೆ ಇದೇ ಶಕ್ತಿಗಳು ಜಾತಿ ಬೇಡ ಎನ್ನಬಹುದು. ಇದಾದ ಮೇಲೆ ಜಾತಿಯೇ ಇಲ್ಲದ ಮೇಲೆ ಮೀಸಲಾತಿ ಯಾಕೆ ಎಂದು ಪ್ರಶ್ನಿಸಬಹುದು. ಇಂಥ ವಿಚಾರಗಳ ಬಗ್ಗೆ ನಾವು ಎಚ್ಚರದಿಂದಿರಬೇಕು~ ಎಂದರು.ಅಂತರರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಂಘಟ ನೆಗಳ ಮುಖಂಡರು ಪಾಲ್ಗೊಂಡು ಮಾತನಾಡಿದರು.ಕಾರ್ಯಕ್ರಮಕ್ಕೂ ಮೊದಲು ಸಂಘಟನೆಗಳವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇ ಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಬಳಿಕ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ಬಸವರಾಜ ಕೌತಾಳ, ಮಾವಳ್ಳಿ ಶಂಕರ್, ಎನ್. ವೆಂಕಟೇಶ್, ಎನ್. ಗುರುಮೂರ್ತಿ, ಈರಪ್ಪ, ಶ್ರೀರಾಮ ಪಾವಗಡ, ಕೃಷ್ಣದಾಸ್, ಡಿ.ಸಿ.ಸಣ್ಣಸ್ವಾಮಿ, ಅಬ್ದುಲ್ ಸಮದ್, ಬಿ. ಗೋಪಾಲ್  ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.