ಅಣ್ಣಾ ಹೋರಾಟ ಯಶಸ್ಸು: ಎಲ್ಲೆಡೆ ವಿಜಯೋತ್ಸವ

7

ಅಣ್ಣಾ ಹೋರಾಟ ಯಶಸ್ಸು: ಎಲ್ಲೆಡೆ ವಿಜಯೋತ್ಸವ

Published:
Updated:
ಅಣ್ಣಾ ಹೋರಾಟ ಯಶಸ್ಸು: ಎಲ್ಲೆಡೆ ವಿಜಯೋತ್ಸವ

ಬೆಳಗಾವಿ: ಭ್ರಷ್ಟಾಚಾರ ನಿರ್ಮೂಲ ನೆ ಗಾಗಿ ಜನ ಲೋಕಪಾಲ ಮಸೂದೆ ಜಾರಿ ಗೊಳಿಸುವಂತೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಗಾಂಧಿವಾದಿ ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ 192 ಗಂಟೆಗಳ ಕಾಲ `ನಿರಂತರ ಸ್ಕೇಟಿಂಗ್ ರಿಲೆ~ ನಡೆಸಿದ ಬೆಳಗಾವಿಯ ಸ್ಕೇಟಿಂಗ್ ವೀರರ ಸಂಭ್ರಮಕ್ಕೆ ಭಾನುವಾರ ಬೆಳಿಗ್ಗೆ ಎಲ್ಲೆಯೇ ಇರಲಿಲ್ಲ.ನಾಗರಿಕ ಸಮಿತಿಯ ಶಿಫಾರಸ್ಸು ಗಳನ್ನು ಸಂಸತ್ ಮನ್ನಿಸಿದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ದೆಹ ಲಿಯ ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆ ಉಪವಾಸ ಅಂತ್ಯಗೊಳಿ ಸುತ್ತಿದ್ದಂತೆ ಬೆಳಗಾವಿಯ ಗೋವಾವೇಸ್ ಬಳಿಯ ರೋಟರಿ ಸ್ಪೋರ್ಟ್ಸ್ ಸ್ಕೇಟಿಂಗ್ ರಿಂಕ್‌ನಲ್ಲಿ ಕಳೆದ ಎಂಟು ದಿನ ಗಳಿಂದ ನಿರಂತರವಾಗಿ ಸ್ಕೇಟಿಂಗ್ ಮಾಡುತ್ತಿದ್ದ ಪಟುಗಳು ವಿಜಯೋತ್ಸವ ಆಚರಿಸಿದರು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಸ್ಕೇಟಿಂಗ್ ಮಾಡಿ ಸಂಭ್ರಮಿಸಿದರು.ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆ ಮಿಯು ಆಗಸ್ಟ್ 20ರಿಂದ ಹಮ್ಮಿಕೊಂಡಿದ್ದ `ನಿರಂತರ ಸ್ಕೇಟಿಂಗ್ ರಿಲೆ~ಯಲ್ಲಿ ನಾಲ್ಕು ವರ್ಷದ ಮಕ್ಕಳಿಂದ ಹಿಡಿದು 40 ವರ್ಷದವರೆಗೆಗಿನ ಸುಮಾರು 250 ಸ್ಕೇಟಿಂಗ್ ಪಟುಗಳು ರಾಷ್ಟ್ರಧ್ವಜ ಹಿಡಿದು ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವವರೆಗೂ ನಿರಂತರವಾಗಿ ಸ್ಕೇಟಿಂಗ್ ಮಾಡಲು ಧುಮುಕಿದ್ದರು. ಹಗಲು- ರಾತ್ರಿ ಎನ್ನದೇ ಜನ ಲೋಕ ಪಾಲ ಮಸೂದೆ ಜಾರಿಗೊಳಿಸುವಂತೆ ಒತ್ತಾಯಿಸಿ ಸ್ಕೇಟಿಂಗ್ ಕೈಗೊಂಡಿದ್ದರು.ಸ್ಕೇಟಿಂಗ್ ವೀರರು ಆಗಸ್ಟ್ 20ರಿಂದ ಒಟ್ಟು 192 ಗಂಟೆಗಳಲ್ಲಿ 2507 ಕಿ.ಮೀ. ದೂರವನ್ನು ರಿಂಕ್‌ನಲ್ಲಿ ಕ್ರಮಿಸಿ ದ್ದಾರೆ. ದಾಖಲೆ ನಿರ್ಮಿಸಿರುವ ರೋಹನ್ ಕೊಕಣೆ, ಅಭಿಷೇಕ ನವಲೆ, ರಿಧಿಮಾ ಶಿಂಧೆ, ಶೆಫಾಲೆ ಕಾನಡೆ ಸೇರಿ ದಂತೆ ಒಟ್ಟು 250 ಸ್ಕೇಟಿಂಗ್ ಪಟುಗಳು ಈ ಐತಿಹಾಸಿಕ ಸಾಧನೆಗೆ ಸಾಥ್ ನೀಡಿದ್ದಾರೆ.ಭಾನುವಾರ ಅಣ್ಣಾ ಹಜಾರೆ ಉಪ ವಾಸ ಅಂತ್ಯಗೊಳಿಸಿದ ಬಳಿಕ ರೋಟರಿ ಕಾರ್ಪೊರೇಷನ್ ಸ್ಪೋರ್ಟ್ಸ್ ಅಕಾಡೆಮಿ ರಿಂಕ್‌ನಿಂದ ಸ್ಕೇಟಿಂಗ್ ಪಟುಗಳು ರ‌್ಯಾಲಿ ನಡೆಸಿದರು. ಮಹಾತ್ಮಾ ಫುಲೆ ರಸ್ತೆ, ಎಸ್‌ಪಿಎಂ ರಸ್ತೆ, ಕಪಿಲೇಶ್ವರ ರಸ್ತೆ, ಶನಿ ಮಂದಿರ, ರಾಮಲಿಂಗಖಿಂಡ ಗಲ್ಲಿ, ಸಂಭಾಜಿ ವೃತ್ತ, ಕಾಲೇಜು ರಸ್ತೆ, ಚನ್ನಮ್ಮ ವೃತ್ತ, ಮಾರುತಿ ಗಲ್ಲಿ, ಕ್ಯಾಂಪ್, ಕಾಂಗ್ರೆಸ್ ರಸ್ತೆ, ದೇಶಮುಖ ರಸ್ತೆ, ಖಾನಾಪುರ ರಸ್ತೆ ಮೂಲಕ ಅಕಾಡೆ ಮಿಯ ಆವರಣ ತಲುಪಿದರು.ಸಿಹಿ ಹಂಚಿ ಸಂಭ್ರಮ

ಜನ ಲೋಕಪಾಲ ಮಸೂದೆ ಜಾರಿಗಾಗಿ ಹೋರಾಟ ನಡೆಸುತ್ತಿದ್ದ `ಭ್ರಷ್ಟಾಚಾರ~ ವಿರುದ್ಧ ಬೆಳಗಾವಿ ವೇದಿಕೆ ಸಂಘಟನೆಯ ಕಾರ್ಯಕರ್ತರು ಭಾನುವಾರ ನಗರದಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ಜನ ಲೋಕಪಾಲ ಮಸೂದೆ ಜಾರಿಗೆ ನೀಡಲಾಗಿದ್ದ ಶಿಫಾರಸುಗಳನ್ನು ಸಂಸತ್ ಮನ್ನಿಸಿದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಹಿನ್ನೆಲೆಯಲ್ಲಿ `ಭ್ರಷ್ಟಾಚಾರ ವಿರುದ್ಧ ವೇದಿಕೆ~ ಸಂಘಟನೆಯ ಕಾರ್ಯಕರ್ತರು ನಗರದ ಬೋಗಾರ್‌ವೇಸ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಿ ಸಾರ್ವಜನಿಕರಿಗೆ ಸಿಹಿ ಹಂಚಿಸಿದರು. ಉದ್ಯಮಿ ಸುರೇಶ ಹುಂದ್ರೆ, ಮಲ್ಲಿ ಕಾರ್ಜುನ ಜಗಜಂಪಿ, ಆರ್.ಡಿ. ಶಾನಭಾಗ, ಶಾನಭಾಗ, ಸುನಿಲ್ ದೇಸಾಯಿ, ಡಾ. ಎಂ.ವಿ. ಜಾಲಿ, ಉಜ್ವಲಾ ಬಡ ವಾಂಚೆ ಮತ್ತಿತರರು ಹಾಜರಿದ್ದರು.ನಾಗರಿಕ ಹಿತರಕ್ಷಣಾ ವೇದಿಕೆ

ಗೋಕಾಕ:
ಪ್ರಬಲ ಜನಲೋಕಪಾಲ ಮಸೂದೆಗೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸುತ್ತಿದ್ದ ಉಪವಾಸ ಯಶಸ್ವಿಯಾಗಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಲ್ಲಿಯ ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಭಾನು ವಾರ ವಿಜಯೋತ್ಸವ ಆಚರಿಸಿದರು.ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಪೂಜೇರಿ, ರಾಜ್ಯ ರೈತ ಸಂಘದ ಉಪಾ ಧ್ಯಕ್ಷ ಶಿವನಗೌಡ ಗೌಡರ, ಸಾಹಿತಿ  ಪ್ರೊ. ಚಂದ್ರ ಶೇಖರ ಅಕ್ಕಿ, ಅಶೋಕ ಓಸ್ವಾಲ್, ವಕೀಲರಾದ ವಿ.ಎ. ಚಂದರಗಿ, ಪಿ.ಎಸ್. ಮುಂಗರವಾಡಿ, ಬನ್ನಿಶೆಟ್ಟಿ, ಕಲಾವಿದ ಜಿ.ಕೆ. ಕಾಡೇಶ, ಪ್ರವೀಣ ಶೆಟ್ಟಿ ಬಣದ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಕಿರಣ ಡಮಾಮಗರ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.ನಾಗರಿಕರ ವಿಜಯೋತ್ಸವ

ರಾಯಬಾಗ:
ಅಣ್ಣಾ ಹಜಾರೆ ಅವರ ಬೇಡಿಕೆ ಗಳನ್ನು ಮನ್ನಿಸಿ ಕೇಂದ್ರ ಸರ್ಕಾರ ಲೋಕಪಾಲ ಮಸೂದೆ ಅಂಗೀಕಾರಕ್ಕೆ ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಯಬಾಗ ಜನತೆ ಭಾನುವಾರ ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು.ಪಟ್ಟಣದ ಜೇಂಡಾ ಕಟ್ಟಿ ಬಳಿ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಶ್ರೀರಾಮ ಸೇನೆ ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮೆರವಣಿಗೆ ನಡೆಸಿ, ವಿಜಯೋತ್ಸವ ಆಚರಿಸಿದರು. ಲಖನಕಟ್ಟಿಕಾರ, ಶೇಖರ ಹಾರೂಗೇರಿ, ಅಶೋಕ ಅಂಗಡಿ, ಸದಾಶಿವಹಳಿಂಗಳಿ, ಸಿದ್ದು ಪೂಜಾರಿ, ರಾಜು ಕುಲಗುಡೆ, ಶಶಿಕಾಂತ ಮಾಳಿ, ಸುಭಾಷ ಕೋಳಿಕರ, ಅಪ್ಪುಗಡ್ಡೆ, ಉದಯ ಹುಂಡೆಕಾರ, ಸಾದಿಕ್ ವಿನಾಯಕ ಕೋಳಿ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.`ಭ್ರಷ್ಟರಿಗೆ ನಿದ್ದೆಗೆಡಿಸಿದೆ~

ಸವದತ್ತಿ: ಅಣ್ಣಾ ಹಜಾರೆ ಅವರ ಹೋರಾಟ ವನ್ನು ಮನ್ನಿಸಿ ಕೇಂದ್ರ ಸರ್ಕಾರ ಜನಲೋಕಪಾಲ ಮಸೂದೆ ಜಾರಿಗೆ ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಲ್ಲಿಯ ವಕೀಲರ ಸಂಘದ ನೇತೃತ್ವ ದಲ್ಲಿ ಸಾರ್ವಜನಿಕರು ವಿಜಯೋತ್ಸವ ಆಚರಿಸಿದರು.ವಕೀಲ ಬಸವರಾಜ ಯಜಗಣವಿ ಮಾತನಾಡಿ, ಬಡವರನ್ನು ಕಿತ್ತು ತಿನ್ನುತ್ತಿರುವ ಲಂಚಗುಳಿ ತನ ನಿರ್ಮೂಲನೆಗೆ ಮಸೂದೆ ಪ್ರಬಲ ಅಸ್ತ್ರವಾಗ ಲಿದೆ. ಮಸೂದೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದರಿಂದ ಭ್ರಷ್ಟರ ನಿದ್ದೆಗೆಡಿಸಿದಂತಾಗಿದೆ ಎಂದರು. ಎಸ್.ಬಿ. ಹೂಲಿಕಟ್ಟಿ, ಸಿ.ಎಲ್. ಮೊಕಾಸಿ, ಬಿ.ಎಂ. ಯಲಿಗಾರ, ವಿ.ವಿ. ಹಿರೇಮಠ, ಎಸ್.ಬಿ. ಲಾಳಗೆ, ಎಂ.ಎಸ್. ವಂಟಮುರಿ, ಎ.ವಿ. ಬೆಟಸೂರಮಠ, ಬಿ.ಜಿ. ಹೊಳಿ, ಆರ್.ಎಸ್. ಆಲದಕಟ್ಟಿ, ನಾಗರಾಜ ಸೊಗಿ, ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.ವಿವಿಧ ಸಂಘಟನೆಳು

ಚಿಕ್ಕೋಡಿ:
ಅಣ್ಣಾ ಹಜಾರೆ ಒತ್ತಾಯಿಸಿರುವ ಮೂರಂಶ ಗಳನ್ನು ಜನಲೋಕಪಾಲ ವಿಧೇಯ ಕದಲ್ಲಿ ಅಳವಡಿಸಲು ಸಂಸತ್ತು ತಾತ್ವಿಕ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾನುವಾರ ಬೆಳಿಗ್ಗೆ ವಿವಿಧ ಸಂಘಟನೆಗಳು ವಿಜಯೋತ್ಸವ ಆಚರಿಸಿದ್ದು, ಇಲ್ಲಿನ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಉಪ ವಾಸ ಸತ್ಯಾಗ್ರಹ ಮೊಟಕುಗೊಳಿಸಿದ್ದಾರೆ.ಪರಿಣಾಮಕಾರಿ ಜನಲೋಕಪಾಲ ಮಸೂದೆ ರಚನೆಗೆ ಆಗ್ರಹಿಸಿ ಗಾಂಧಿವಾದಿ ಅಣ್ಣಾ ಹಜಾರೆ ಮುಂದಾಳತ್ವದಲ್ಲಿ ದೇಶದಾದ್ಯಂತ ನಡೆದ ಪ್ರಬಲ ಹೋರಾಟಕ್ಕೆ ಪೂರಕವಾಗಿ ಇಲ್ಲಿನ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರ ಹವೂ ಅಂತ್ಯಗೊಂಡಿದ್ದು, ಚರಮೂರ್ತಿಮಠದ ಸಂಪಾ ದನ ಸ್ವಾಮೀಜಿ ಭಾನುವಾರ ಬೆಳಿಗ್ಗೆ ಸತ್ಯಾಗ್ರಹಿಗಳಿಗೆ ಸಿಹಿ ತಿನಿ ಸುವ ಮೂಲಕ ನಿರಶನ ಅಂತ್ಯಗೊಳಿಸಿದರು.

 

ಬಿ.ಆರ್. ಸಂಗಪ್ಪ ಗೋಳ, ಬಿಜೆಪಿ ಮಂಡಲ ಅಧ್ಯಕ್ಷ ಅಪ್ಪಾಸಾಹೇಬ ಚೌಗಲಾ, ವಿಕ್ರಮ ಬನಗೆ, ಡಿ.ಜೆ. ಗುಂಡೆ, ಎಂ.ಕೆ.ಚೌಗಲಾ, ಸುರೇಶ ಬ್ಯಾಕುಡೆ, ರವಿ ಹಂಪಣ್ಣವರ, ಪ್ರೊ. ಸುಬ್ಬರಾವ ಎಂಟೆತ್ತಿ ನವರ, ಚಂದ್ರಕಾಂತ ಹುಕ್ಕೇರಿ, ಕಿರಣ ಮಹಾದ್ವಾರ, ರಾವ ಸಾಬ ಕಮತೆ, ರಾಜ್ ಜಾಧವ, ಅಗ್ರಾಣಿ ಸಿಂಗಾಡಿ, ಪ್ರಭು ದೇವ ಪಂಡಿತ ಇತರರು ಹಾಜರಿದ್ದರು. ಪಟ್ಟಣದಲ್ಲಿ ಕಿತ್ತೂರ ಚೆನ್ನಮ್ಮ ವರ್ತಕರ ಸಂಘವೂ ವಿಜಯೋತ್ಸವ ಆಚರಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry