ಅಣ್ಣಿಗೇರಿ ದಾಸೋಹಮಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

7

ಅಣ್ಣಿಗೇರಿ ದಾಸೋಹಮಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

Published:
Updated:

ಅಣ್ಣಿಗೇರಿ: ಇಲ್ಲಿಯ ದಾಸೋಹ ಮಠ­ದ ರುದ್ರಮುನಿ ಸ್ವಾಮೀಜಿಯ 50ನೇ ವರ್ಷದ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶಿವ­ಕುಮಾರ ಸ್ವಾಮೀಜಿ­ಯವರ ಅಡ್ಡ­ಪಲ್ಲಕ್ಕಿ ಉತ್ಸವ ಭಕ್ತರ  ಸಡಗರದ ಮಧ್ಯೆ ಮಂಗಳ­ವಾರ ನೆರವೇರಿತು.ಶ್ರೀಮಠದಿಂದ ಹೊರಟ ಅಡ್ಡಪಲ್ಲಕ್ಕಿ ಮೆರವಣಿಗೆ ಜಾಡಗೇರಿ ತಲುಪಿ ಜೈನ್ ಬಸದಿ ಮಾರ್ಗವಾಗಿ ಮಠಕ್ಕೆ ಮರ­ಳಿತು. ಪುರವಂತರ ವೀರಭದ್ರನ ಅವ­ತಾರ, ಕರಡಿ ಮಜಲು, ಭಜನೆ, ಝಾಂಜ್ ಮೇಳ, ಕೋಲಾಟ ಉತ್ಸ­ವಕ್ಕೆ ಮೆರುಗು ತಂದವು.ರಾತ್ರಿ ಜರುಗಿದ ದಾಸ ಚಿಂತನ­ಗೋಷ್ಠಿಯಲ್ಲಿ ನರಗುಂದ ಪತ್ರಿವನ ಮಠದ ಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಭಕ್ತಿಯ ರಸ­ದೌತಣ ನೀಡಿದರು.ಕಾಂಗ್ರೆಸ್ ಮುಖಂಡರಾದ ಎಚ್.­ವಿ. ­ಮಾಡಳ್ಳಿ, ಆರ್.ಎಚ್. ಕೋನ­ರಡ್ಡಿ, ಶಿವಾನಂದ ಭೂಮಣ್ಣವರ, ಜಾತ್ರಾ ಸಮಿತಿ ಗೌರವಾಧ್ಯಕ್ಷ ಶಾಸಕ ಎನ್.ಎಚ್. ಕೋನರಡ್ಡಿ, ಅಧ್ಯಕ್ಷ ಷಣ್ಮುಖಪ್ಪ ಗುರಿಕಾರ, ವಿಶ್ವಸ್ಥ ಮಂಡಳಿ ಅಧ್ಯಕ್ಷ ಮಹೇಶಗೌಡ ದೇಸಾಯಿ ಇತರರು ಹಾಜರಿದ್ದರು.ಕೆರೆಗೆ ಬಾಗಿನ

ಅಣ್ಣಿಗೇರಿ:
ಮಲಪ್ರಭಾ ನೀರಿನಿಂದ ತುಂಬಿ ತುಳುಕುತ್ತಿರುವ ಇಲ್ಲಿಯ ಕುಡಿಯುವ ನೀರಿನ ಸಂಗ್ರಹದ ಅಂಬಿಗೇರಿ ಕೆರೆಗೆ ಶಾಸಕ ಎನ್.ಎಚ್. ಕೋನರಡ್ಡಿ ಬಾಗಿನ ಅರ್ಪಿಸಿ ಗಂಗಾ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತ­ನಾಡಿದ ಶಾಸಕರು ಎಲ್ಲಿ ನೀರಿ­ದೆಯೋ ಅಲ್ಲಿ ನೆಮ್ಮದಿ ಇದೆ. ಹೀಗಾಗಿ ಕ್ಷೇತ್ರದ ಜನತೆಗೆ ನೀರು ಒದಗಿಸುವುದು ತಮ್ಮ ಪ್ರಥಮ ಆದ್ಯತೆಯಾಗಿದೆ. ಅಣ್ಣಿಗೇರಿ ಪಟ್ಟಣಕ್ಕೆ ಒಳಚರಂಡಿ ಯೋಜನೆ ಅಳವಡಿಸುವುದಕ್ಕೆ ತಾವು ಶಕ್ತಿ ಮೀರಿ ಶ್ರಮಿಸುವೆ ಎಂದರು.ಪುರಸಭೆ ಮುಖ್ಯಾಧಿಕಾರಿ ಬಿ.ಎಫ್.­ಜಿಡ್ಡಿ, ಪುರಸಭೆ ಸದಸ್ಯರು, ಮುಖಂಡ­ರಾದ ಷಣ್ಮುಖಪ್ಪ ಗುರಿಕಾರ, ದ್ಯಾಮಪ್ಪ ಕೊಗ್ಗಿ, ಶಿವಶಂಕರ ಕಲ್ಲೂರ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry