ಮಂಗಳವಾರ, ಮೇ 11, 2021
24 °C

ಅಣ್ಣ ಚುಡಾಯಿಸಿದ, ತಂಗಿ ಜೀವ ಕಳೆದುಕೊಂಡಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವಲಗುಂದ: ಯುವಕನೊಬ್ಬ ಕಾಲೇಜು ವಿದ್ಯಾರ್ಥಿನಿಯನ್ನು ಚುಡಾಯಿಸ್ದ್ದಿದು, ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಅವನ 8 ವರ್ಷದ ತಂಗಿಯನ್ನೇ ಕೊಲೆ ಮಾಡಿದ ಘಟನೆ ತಾಲ್ಲೂಕಿನ ಹಾಳಕುಸುಗಲ್ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿನಿ ಸವಿತಾ ಬೆಳವಡಿ, ಶಿವಪುತ್ರಪ್ಪ ಬೆಳವಡಿ, ಹನಮಂತಪ್ಪ ಬೆಳವಡಿ, ಶಿವಕ್ಕ ಬೆಳವಡಿ,  ಗಂಗಾಧರ ಬೆಳವಡಿ ಹಾಗೂ ಸುರೇಶ ಬೆಳವಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆಯ ಹಿನ್ನೆಲೆ: ಬೈಲಹೊಂಗಲ ಪಟ್ಟಣದ ಮಹಾಂತೇಶ ಬೋರಕ್ಕನವರ ಅವರ ಮಗಳು ಅನಿತಾಳನ್ನು ನವಲಗುಂದ ತಾಲ್ಲೂಕಿನ ಹಾಳಕುಸುಗಲ್ಲ ಗ್ರಾಮದಲ್ಲಿರುವ ಅವಳ ದೊಡ್ಡಮ್ಮನ ಮನೆಯಲ್ಲಿ ವಿದ್ಯಾಭ್ಯಾಸಕ್ಕೆಂದು ಇಡಲಾಗಿತ್ತು. ಆದರೆ ಫೆ.5 ರಂದು ಮಧ್ಯಾಹ್ನ ಆಟವಾಡುತ್ತಿದ್ದಾಗ ಅನಿತಾ ಕಾಣೆಯಾಗಿದ್ದಳು. ಅನಿತಾಳನ್ನು ಹುಡುಕಿಕೊಡುವಂತೆ ಅವಳ ಸಂಬಂಧಿ ಬಸಪ್ಪ ಸವದಿ ಮರುದಿನ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಕಾಣೆಯಾದ ಅನಿತಾಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕುಮಾರ, ಡಿಎಸ್‌ಪಿ ರಾಜು ಬನಹಟ್ಟಿ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ಎಸ್.ಪಡೋಳಕರ, ಪಿಎಸ್‌ಐ ವೆಂಕಟಸ್ವಾಮಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿತ್ತು. ಆದರೆ ತನಿಖೆ ಮುಂದುವರೆದಂತೆ ಗ್ರಾಮದಲ್ಲಿ ಬೇರೆಯದೇ ವಿಚಾರವನ್ನು ಗ್ರಾಮಸ್ಥರು ಚರ್ಚಿಸುತ್ತಿದ್ದಾರೆಂಬ ಸುದ್ದಿ ಗೊತ್ತಾಯಿತು. ಕಾಣೆಯಾಗಿರುವ ಅನಿತಾಳ ಕೊಲೆ ಯಾಗಿರಬಹುದೆಂದು  ತನಿಖಾ ತಂಡಕ್ಕೆ ಶಂಕೆ ಮೂಡಿತು.`ನಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮಾ.2 ರಂದು ಅನಿತಾಳ ದೊಡ್ಡಮ್ಮ ಕಲ್ಲವ್ವ ಬಾಗೋಜಿ ಅವರು 6 ಜನರ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದಾಗ ಅನಿತಾಳ ಅಣ್ಣ ಸುಭಾಸ ಎಂಬುವನೇ ಈ ಪ್ರಕರಣದ ಕೇಂದ್ರಬಿಂದು ಎಂದು ಪತ್ತೆ ಹಚ್ಚಿ, ತನಿಖೆ ಚುರುಕುಗೊಳಿಸಿ ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ.ಸುಭಾಸ ಅದೇ ಗ್ರಾಮದ ಕಾಲೇಜು ವಿದ್ಯಾರ್ಥಿನಿ ಸವಿತಾ (18) ಎಂಬು ವವ ಳನ್ನು ಕಾಲೇಜಿಗೆ ಹೋಗುವಾಗ, ಬಟ್ಟೆ ತೊಳೆಯು ವಾಗ ಚುಡಾಯಿಸಿ ದ್ದಾನೆ. ಒಂದು ದಿನ ಯಾರೂ ಇಲ್ಲದ ಸಂದರ್ಭ ನೋಡಿ ಸವಿತಾಳ ಮನೆಗೆ ಹೋಗಿ ಮದುವೆಯಾಗುವಂತೆ ಒತ್ತಾಯಿಸುತ್ತಿರುವಾಗ ಸವಿತಾಳ ತಂದೆ ಬಂದಿದ್ದರಿಂದ ಪರಾರಿಯಾಗಿದ್ದಾನೆ.ತಂದೆ ಈ ಕುರಿತು ವಿಚಾರಿಸಿದಾಗ ಸವಿತಾ ಇದ್ದ ವಿಷಯವನ್ನು ತಂದೆಗೆ ಹೇಳಿದ್ದಾಳೆ. ವಿಷಯ ತಿಳಿದುಕೊಂಡ ಸವಿತಾಳ ತಂದೆ ಶಿವಪುತ್ರಪ್ಪ ಬೆಳವಡಿ ಸುಭಾಷನ ಮನೆಯವರಿಗೆ ವಿಷಯ ತಿಳಿಸಿದಾಗ ರಾಜೀ ಸಂಧಾನ ಏರ್ಪಟ್ಟಿದ್ದರಿಂದ ಕೆಲ ದಿನಗಳವರೆಗೆ ಪ್ರಕರಣ ತಣ್ಣಗಾಗಿತ್ತು.ಆದರೆ ಗ್ರಾಮಸ್ಥರು ಸವಿತಾ ಮತ್ತು ಸುಭಾಸ ನಡುವೆ ಏನೋ ಆಗಿರ ಬಹುದೆಂದು ಸಂಶಯದ ಮಾತುಗಳ ನ್ನಾಡುತ್ತಿರುವುದನ್ನು ಕೆಳಿಸಿಕೊಂಡ ಸವಿತಾಳಿಗೆ ಸಿಟ್ಟು ನೆತ್ತಿಗೆರಿದೆ. ಹೇಗಾ ದರೂ ಮಾಡಿ ಸೇಡು ತಿರಿಸಿಕೊಳ್ಳ ಲೇಬೇಕೆಂದು ಸುಭಾಸನ ತಂಗಿ ಅನಿತಾ ಆಟವಾಡುತ್ತಿದ್ದಾಗ ಫೆ.5 ರಂದು ಆಕೆಯನ್ನು ಮನೆಗೆ ಕರೆದುಕೊಂಡು ಬಂದು, ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಗಾಬರಿಗೊಂಡ ಸವಿತಾ ಕೊಲೆ ಮಾಡಿರುವ ವಿಷಯವನ್ನು ತಾಯಿಗೆ ಹೇಳಿದ್ದಾಳೆ. ನಂತರ ಇಬ್ಬರೂ ಕೂಡಿಕೊಂಡು ಆ ಮಗುವನ್ನು ಒಂದು ಗೋಣಿಚೀಲದಲ್ಲಿ ಹಾಕಿ ಸ್ನಾನಗೃಹದಲ್ಲಿ ಇಟ್ಟಿದ್ದಾರೆ.ನಂತರ ಈ ವಿಷಯ ಯಾರಿಗೂ ಗೊತ್ತಾಗಬಾರದೆಂದು ಅನಿತಾಳ ಶವ ವನ್ನು ಯಾವುದಾದರೂ ಹಳ್ಳಕ್ಕೆ ಎಸೆದು ಬರುವಂತೆ ತಮ್ಮ ಮನೆಯವರಿಗೆ ಹೇಳಿದ್ದಾರೆ.  ತಾಲ್ಲೂಕಿನ ಅಳಗವಾಡಿ ಗ್ರಾಮದ ಹತ್ತಿರವಿರುವ ತುಪ್ಪರಿ ಹಳ್ಳದಲ್ಲಿ ಗೊಣಿಚೀಲ ಎಸೆದು ಬಂದಿ ದ್ದಾರೆ. ವಿಚಾರಣೆ ನಂತರ ಆರೋಪಿ ಗಳಾದ ಶಿವಪುತ್ರಪ್ಪ ಬೆಳವಡಿ, ಹನ ಮಂತಪ್ಪ ಬೆಳವಡಿ, ಶಿವಕ್ಕ ಬೆಳವಡಿ, ಸವಿತಾ ಬೆಳವಡಿ, ಗಂಗಾಧರ ಬೆಳವಡಿ ಹಾಗೂ ಸುರೇಶ ಬೆಳವಡಿ ಸತ್ಯ ಒಪ್ಪಿಕೊಂಡಿದ್ದರಿಂದ ಅವರನ್ನು ಬಂಧಿಸ ಲಾಗಿದೆ. ಆದರೆ  ಅನಿತಾಳ ಮೃತದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ.ಪ್ರಶಂಸೆ

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ ಎಸ್.ಎಸ್. ಪಡೋಲಕರ, ಪಿಎಸ್‌ಐ ವೆಂಕಟಸ್ವಾಮಿ ಹಾಗೂ ತನಿಖಾ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕುಮಾರ ಶ್ಲಾಘಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.