ಅಣ್ವಸ್ತ್ರ: ಅಮೆರಿಕದ ನಿಗಾ ಹೆಚ್ಚಳ

7

ಅಣ್ವಸ್ತ್ರ: ಅಮೆರಿಕದ ನಿಗಾ ಹೆಚ್ಚಳ

Published:
Updated:

ವಾಷಿಂಗ್ಟನ್ (ಪಿಟಿಐ): ವಿವಿಧ ಭಯೋತ್ಪಾದಕ ಸಂಘಟನೆಗಳು ಮತ್ತು ಭಾರತ ಸೇರಿದಂತೆ ಕೆಲವು ರಾಷ್ಟ್ರಗಳ ಅಣ್ವಸ್ತ್ರ ಕಾರ್ಯಕ್ರಮ ಕುರಿತ ತನ್ನ ಬೇಹುಗಾರಿಕೆಯನ್ನು ಅಮೆರಿಕ ತೀವ್ರಗೊಳಿಸಿದೆ. ಇದಕ್ಕಾಗಿ ಕೋಟ್ಯಂತರ ಡಾಲರ್ ವೆಚ್ಚದ ಯೋಜನೆ ರೂಪಿಸಿದೆ.ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳು ಈ ಯೋಜನೆಗಾಗಿ ಸಿದ್ಧ ಪಡಿಸಿರುವ ಪಟ್ಟಿಯಲ್ಲಿ ಅಲ್ ಖೈದಾ ಸೇರಿದಂತೆ ಹಲವು ಉಗ್ರ ಸಂಘಟನೆಗಳು ಸೇರಿವೆ. ಜೊತೆಗೆ ಉತ್ತರ ಕೊರಿಯಾ, ಇರಾನ್ ಹಾಗೂ ಪರಸ್ಪರ ಬದ್ಧ ವೈರತ್ವ ಇರುವ ಭಾರತ ಮತ್ತು ಪಾಕಿಸ್ತಾನಗಳ ಅಣ್ವಸ್ತ್ರ ಸಂಬಂಧಿ ಚಟುವಟಿಕೆಗಳ ಮೇಲೂ ಅಮೆರಿಕ ಕಣ್ಗಾವಲು ಇರಿಸಿದೆ ಎಂದು `ವಾಷಿಂಗ್ಟನ್ ಪೋಸ್ಟ್' ಪತ್ರಿಕೆ ಮಂಗಳವಾರ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry