ಬುಧವಾರ, ನವೆಂಬರ್ 20, 2019
20 °C

ಅಣ್ವಸ್ತ್ರ ಶೇ 200ರಷ್ಟು ಸುರಕ್ಷಿತ: ಪಾಕಿಸ್ತಾನ

Published:
Updated:

ಇಸ್ಲಾಮಾಬಾದ್ (ಪಿಟಿಐ): `ನಮ್ಮ ಅಣ್ವಸ್ತ್ರಗಳು ಶೇ 200ರಷ್ಟು ಸುರಕ್ಷಿತವಾಗಿವೆ~ ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಹೇಳಿದ್ದಾರೆ. ಇತ್ತೀಚೆಗೆ ಕರಾಚಿಯಲ್ಲಿನ ನೌಕಾ ನೆಲೆಯ ಮೇಲೆ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

 

`ದೇಶದಲ್ಲಿನ ಅಣ್ವಸ್ತ್ರಗಳನ್ನು ಅತ್ಯಂತ ಬಿಗಿ ಭದ್ರತೆಯ ನಡುವೆ ಪೋಷಿಸಲಾಗುತ್ತಿದೆ. ನಮ್ಮ ಅಣು ಚಟುವಟಿಕೆಗಳು ಯಾವುದೇ ಅಪಾಯಕ್ಕೆ ಈಡಾಗದಂತೆ ಸುರಕ್ಷಿತ ನೆಲೆಯಲ್ಲಿ ನಡೆಯುತ್ತಿವೆ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)