ಅಣ್ವಸ್ತ್ರ ಸಂರಕ್ಷಣೆ ಸಾಮರ್ಥ್ಯ ಇದೆ: ಪಾಕ್ ಪ್ರತಿಕ್ರಿಯೆ

7

ಅಣ್ವಸ್ತ್ರ ಸಂರಕ್ಷಣೆ ಸಾಮರ್ಥ್ಯ ಇದೆ: ಪಾಕ್ ಪ್ರತಿಕ್ರಿಯೆ

Published:
Updated:

ಇಸ್ಲಾಮಾಬಾದ್(ಪಿಟಿಐ): ‘ನಮ್ಮ ಪರಮಾಣು ಸ್ಥಾವರಗಳು, ಅಣ್ವಸ್ತ್ರಗಳು ಭಯೋತ್ಪಾದಕರ ಕೈ ಸೇರದಂತೆ ನಿಯಂತ್ರಿಸುವ, ಸಂರಕ್ಷಿಸುವ ಸಾಮರ್ಥ್ಯ ನಮಗಿದೆ’ ಎಂದು ಪಾಕಿಸ್ತಾನ ಭಾನುವಾರ ಖಚಿತವಾಗಿ ಹೇಳಿಕೊಂಡಿದೆ.‘ಪಾಕಿಸ್ತಾನದಲ್ಲಿ ಶಸ್ತ್ರಾಸ್ತ್ರಗಳ ಸಂರಕ್ಷಣೆ, ಸುರಕ್ಷತೆ ಆತಂಕದಲ್ಲಿದೆ’ ಎಂಬರ್ಥದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಹೇಳಿಕೆಗೆ ಪ್ರತಿಕ್ರಿಯೆ ರೂಪದಲ್ಲಿ ಈ ವಿವರಣೆ ನೀಡಲಾಗಿದೆ.ಪಾಕ್ ವಿದೇಶಾಂಗ ಕಾರ್ಯಾಲಯದ ವಕ್ತಾರರಾದ ತೆಹಮಿನಾ ಜಂಜುವಾ ಈ ಉತ್ತರ ನೀಡಿದ್ದಾರೆ. ಪಾಕಿಸ್ತಾನ ಪರಮಾಣು ಅಸ್ತ್ರ ಹೊಂದಿದ ಜವಾಬ್ದಾರಿಯುತ ದೇಶ. ಇವುಗಳನ್ನು ಸಂರಕ್ಷಿಸುವ ಖಾತ್ರಿಯೂ ಅದಕ್ಕಿದೆ ಎಂದು ಅವರು ಹೇಳಿದ್ದಾರೆ.‘ದಕ್ಷಿಣ ಏಷ್ಯಾದಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಪಾಲನೆಗೆ ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಭಾರತ-ಪಾಕ್ ಸಂಬಂಧ ವೃದ್ಧಿಗೆ ಭಾರತವು ಹೊಸ ಮನಃಸ್ಥಿತಿಯೊಂದಿಗೆ ಸಿದ್ಧವಾಗಬೇಕಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.ನವದೆಹಲಿಯಲ್ಲಿ ಶುಕ್ರವಾರ ನಡೆದ ಏಷ್ಯಾ ಭದ್ರತಾ ಸಂಕಿರಣದಲ್ಲಿ ಪಾಲ್ಗೊಂಡು ಶಿವಶಂಕರ ಮೆನನ್ ಉಗ್ರರ ಬೆದರಿಕೆ, ಅಣ್ವಸ್ತ್ರ ಅವರ ಕೈಸೇರುವ ಆತಂಕ, ಪಾಕ್-ಆಫ್ಘನ್ ಪ್ರದೇಶದಲ್ಲಿ ಭಯೋತ್ಪಾದನೆ ಪ್ರಸಾರ, ಆರ್ಥಿಕ ಪ್ರಗತಿಗೆ  ಹಿನ್ನಡೆ’ ಇತ್ಯಾದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry